Viral Video: ಬೈಕ್ ಸ್ಕಿಡ್‌ ಆಗಿ ಚಲಿಸುತ್ತಿದ್ದ ಬಸ್‌ನ ಕೆಳಗೆ ಸಿಲುಕಿದ ವ್ಯಕ್ತಿ, ಮುಂದೆ...

Viral Video: ಕೆಲವೊಮ್ಮೆ ನಾವು ಯಾರೂ ಊಹಿಸದ ಕೆಲವು ಘಟನೆಗಳು ಕಂಡು ಬರುತ್ತವೆ. ಇಂತಹ ಕ್ಷಣಗಳು ಒಮ್ಮೆಗೆ ಆಘಾತವನ್ನು ಉಂಟು ಮಾಡಿದರೆ, ಕೆಲವೇ ಕ್ಷಣಗಳಲ್ಲಿ ಇದೇನಪ್ಪಾ, ಹೀಗೂ ಸಾಧ್ಯನ ಎಂಬ ಅಚ್ಚರಿಯನ್ನೂ ಉಂಟು ಮಾಡುತ್ತದೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. 

Written by - Yashaswini V | Last Updated : Jan 10, 2023, 10:05 AM IST
  • ಚಲಿಸುತ್ತಿದ್ದ ಬಸ್‌ನ ಕೆಳಗೆ ಬೈಕ್ ಸ್ಕಿಡ್‌
  • ಬಸ್‌ನ ಹಿಂಬದಿಯ ಟೈರ್‌ನ ಕೆಳಗೆ ಸಿಲುಕಿದ ಬೈಕರ್

    ಇಲ್ಲಿದೆ ಭಯಾನಕ ಅಪಘಾತದ ವೈರಲ್ ವಿಡಿಯೋ...
Viral Video: ಬೈಕ್ ಸ್ಕಿಡ್‌ ಆಗಿ ಚಲಿಸುತ್ತಿದ್ದ ಬಸ್‌ನ ಕೆಳಗೆ ಸಿಲುಕಿದ ವ್ಯಕ್ತಿ, ಮುಂದೆ... title=
Accident Viral Video

Viral Video: ಕೆಲವೊಮ್ಮೆ ಯಾವುದಾದರೂ ಭಾರೀ ಅನಾಹುತ ತಪ್ಪಿದಾಗ ಅಯ್ಯೋ ಅವರ ಅದೃಷ್ಟ ಚೆನ್ನಾಗಿತ್ತು ಎನ್ನುವುದನ್ನು ನಾವು ಕೇಳಿಯೇ ಇರುತ್ತೇವೆ. ಅದೃಷ್ಟದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟದ ವಿಷಯ. ಪ್ರತಿಯೊಬ್ಬರೂ ತಮ್ಮ ತಮ್ಮ ರೀತಿಯಲ್ಲಿ ಇದನ್ನು ವ್ಯಾಖ್ಯಾನಿಸುತ್ತಾರೆ. ಆದರೆ, ಕಣ್ಮುಂದೆ ಕಾಣುವ ಕೆಲವು ಘಟನೆಗಳು ಅದೃಷ್ಟವನ್ನು ಬಿಂಬಿಸುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ, ಭಯಾನಕವಾದ ಅಪಘಾತದ ದೃಶ್ಯ ಸೆರೆಯಾಗಿದ್ದು, ವಾಹನ ಚಾಲನೆಯಲ್ಲಿ ಒಂದು ಸುರಕ್ಷತಾ ಕ್ರಮವು ಎಷ್ಟು ನಿರ್ಣಾಯಕವಾಗಿದೆ ಎಂಬುದಕ್ಕೆ ಇದು ಕನ್ನಡಿ ಹಿಡಿದಂತಿದೆ. ಅದರಲ್ಲೂ ವಿಶೇಷವಾಗಿ, ಬೈಕರ್‌ಗಳಿಗೆ ತಕ್ಷಣ ಬ್ರೇಕ್‌ ಹಾಕುವುದಾಗಲಿ, ಬೈಕ್ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸುವುದು ಏಕೆ ಕಡ್ಡಾಯ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ. 

ಇದನ್ನೂ ಓದಿ- ಸೀರೆಯಲ್ಲಿ ಮಹಿಳೆಯ ಜಿಮ್ ವರ್ಕೌಟ್, ವೈರಲ್ ಆಯ್ತು ವಿಡಿಯೋ..!

ವಾಸ್ತವವಾಗಿ, ಒಂದು ತಿರುವಿನಲ್ಲಿ ಬಸ್ ಕ್ರಾಸ್ ಆಗುತ್ತಿರುತ್ತದೆ. ಈ ಸಮಯದಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಸವಾರನೊಬ್ಬ ಬೈಕ್‌ನ ಬ್ಯಾಲೆನ್ಸ್‌ ಕಳೆದುಕೊಂಡು ಮುಂದೆ ಬರುತ್ತಿರುವ ಬಸ್‌ನ ಹಿಂಬದಿಯ ಟೈರ್‌ನ ಕೆಳಗೆ ಸ್ಕಿಡ್‌ ಆಗುತ್ತಿರುವುದನ್ನು ಈ ವೈರಲ್ ವೀಡಿಯೊದಲ್ಲಿ ಕಾಣಬಹುದಾಗಿದೆ. ಆದಾಗ್ಯೂ, ಬಸ್ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ತಕ್ಷಣ ಬ್ರೇಕ್ ಹಾಕಿ ಬಸ್ ನಿಲ್ಲಿಸುತ್ತಾನೆ. ಬಸ್ ಅನ್ನು ಸ್ವಲ್ಪ ಹಿಂದೆ ಮಾಡುತ್ತಾನೆ. ಸದ್ಯ ಬೈಕ್ ಚಾಲಕ ಹೆಲ್ಮೆಟ್ ಧರಿಸಿದ್ದರಿಂದ ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗುವುದನ್ನು ಈ ವೈರಲ್ ವಿಡಿಯೋದಲ್ಲಿ ಕಾಣಬಹುದಾಗಿದೆ. 

ಇಲ್ಲಿದೆ ಭಯಾನಕ ಅಪಘಾತದ ವೈರಲ್ ವಿಡಿಯೋ...

ಇದನ್ನೂ ಓದಿ- Viral Video : ತಾತ ಲವ್ ಫೇಲ್ಯೂರ್ ಅನ್ಸತ್ತೆ.. 90 ಹಾಕ್ಕೊಂಡು ಪುಲ್‌ ಫೀಲಿಂಗ್‌..! ವಿಡಿಯೋ ನೋಡಿ

ಗಮನಿಸಿ: ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. ಯಾವುದೇ ರೀತಿಯ ಅನಾಹುತವನ್ನು ತಪ್ಪಿಸಲು ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ. ದ್ವಿಚಕ್ರ ವಾಹನಗಳಲ್ಲಿ ಚಲಿಸುವಾಗ ತಪ್ಪದೇ ಹೆಲ್ಮೆಟ್ ಧರಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News