Viral News: ಉರಗಗಳ ಮಹಾ ಕದನ, ಹೆಬ್ಬಾವು vs ಕಾಳಿಂಗ ಸರ್ಪದ ನಡುವಿನ ಯುದ್ಧದಲ್ಲಿ ಸೋತಿದ್ಯಾರು?

King Cobra vs Python: ಈ ಉರಗಗಳ ಕದನದ ಫೋಟೋವನ್ನು ಐಎಫ್‍ಎಸ್ ಅಧಿಕಾರಿ ಸುಶಾಂತ್ ನಂದ ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನೂ ನೀಡಿದ್ದಾರೆ.

Written by - Puttaraj K Alur | Last Updated : Jul 8, 2023, 01:14 PM IST
  • ಹೆಬ್ಬಾವು ಮತ್ತು ಕಾಳಿಂಗ ಸರ್ಪದ ನಡುವೆ ದೊಡ್ಡ ಯುದ್ಧವೇ ನಡೆದಿದೆ
  • ಉಸಿರಗಟ್ಟಿ ಕಾಳಿಂಗ ಸರ್ಪ ಮತ್ತು ಉಷದಿಂದ ಹೆಬ್ಬಾವು ಸಾವನ್ನಪ್ಪಿವೆ
  • ಐಎಫ್‍ಎಸ್ ಅಧಿಕಾರಿ ಸುಶಾಂತ್ ನಂದ ಹಂಚಿಕೊಂಡಿರುವ ಪೋಸ್ಟ್ ವೈರಲ್
Viral News: ಉರಗಗಳ ಮಹಾ ಕದನ, ಹೆಬ್ಬಾವು vs ಕಾಳಿಂಗ ಸರ್ಪದ ನಡುವಿನ ಯುದ್ಧದಲ್ಲಿ ಸೋತಿದ್ಯಾರು? title=
King Cobra vs Python

ಬೆಂಗಳೂರು: ಮನುಷ್ಯರಂತೆಯೇ ಪ್ರಾಣಿ-ಪಕ್ಷಿಗಳು, ಸರಿಸೃಪಗಳು ಸೇರಿದಂತೆ ಪ್ರತಿಯೊಂದು ಜೀವಿಯೂ ಪರಸ್ಪರ ಕಿತ್ತಾಡುತ್ತವೆ. ಅದರಂತೆ ಉರಗಗಳ ನಡುವೆ ಮಹಾ ಕದನವೇ ನಡೆದಿದೆ. ಇಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪದ ನಡುವೆ ದೊಡ್ಡ ಯುದ್ಧವೇ ಸಂಭವಿಸಿದೆ. ಈ ಯುದ್ಧದಲ್ಲಿ ಗೆದ್ದದ್ಯಾರು ಮತ್ತು ಸೋತಿದ್ಯಾರು ಗೊತ್ತಾ..?

ಹೌದು, ಹೆಬ್ಬಾವು ಮತ್ತು ಕಾಳಿಂಗ ಸರ್ಪಗಳ ನಡುವೆ ದೊಡ್ಡ ಯುದ್ಧವೇ ನಡೆದಿದೆ. ಈ ಕಚ್ಚಾಟದಲ್ಲಿ ಎರಡೂ ಪ್ರಾಣ ಕಳೆದುಕೊಂಡವೆ. ಈ ಉರಗಗಳ ಕದನದ ಫೋಟೋವನ್ನು ಐಎಫ್‍ಎಸ್ ಅಧಿಕಾರಿ ಸುಶಾಂತ್ ನಂದ ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನೂ ನೀಡಿದ್ದಾರೆ.

ಇದನ್ನೂ ಓದಿ: Viral Video: ಮನ್ಯಾಗ ಹೇಳಿ ಬಂದಿ ಏನೋ ತಮ್ಮಾ..? ಯಮನ ಜೊತೆ ಜಲ್ಲಾಟ ಆಡಿದ ಯುವಕ

ಈ ಫೋಟೋ ನೋಡಿದ್ರೆ ಪ್ರತಿಯೊಬ್ಬರಿಗೂ ಗೊತ್ತಾಗುತ್ತದೆ. ಹೆಬ್ಬಾವು ಮತ್ತು ಕಾಳಿಂಗ ಸರ್ಪ ಪರಸ್ಪರ ಎದುರುಬದುರಾಗಿವೆ. ನಂತರ ಎರಡೂ ಪರಸ್ಪರ ಕಚ್ಚಾಡಿಕೊಂಡಿವೆ. ಇಲ್ಲಿ ಹೆಬ್ಬಾವು ಕಾಳಿಂಗ ಸರ್ಪವನ್ನು ಬಿಗಿದುಕೊಂಡಿದ್ದರೆ, ಕಾಳಿಂಗ ಸರ್ಪ ಹೆಬ್ಬಾವಿಗೆ ಕಚ್ಚಿದೆ. ಪರಿಣಾಮ ಕಾಳಿಂಗ ಸರ್ಪ ಉಸಿರುಗಟ್ಟಿ ಸಾವನ್ನಪ್ಪಿದ್ರೆ, ಹೆಬ್ಬಾವು ವಿಷದಿಂದ ಪ್ರಾಣಬಿಟ್ಟಿದೆ.  

ಉರಗಗಳ ಕದನದ ಫೋಟೋ ಹಂಚಿಕೊಂಡಿರುವ ಸುಶಾಂತ್ ನಂದ ಅವರು, ‘ಕಾಳಿಂಗ ಸರ್ಪವು ಕಚ್ಚಿದಾಗ ಹೆಬ್ಬಾವು ಅದನ್ನು ಉಸಿರುಗಟ್ಟಿಸಿದೆ. ಎರಡೂ ಹಾವುಗಳು ಸಾವನ್ನಪ್ಪಿವೆ. ಒಂದು ಉಸಿರುಗಟ್ಟಿ ಸತ್ತರೆ, ಇನ್ನೊಂದು ವಿಷದಿಂದ ಸಾವನ್ನಪ್ಪಿದೆ. ನಾವು ಮನುಷ್ಯರು ಕೂಡ ಹೀಗೆ ಪರಸ್ಪರ ನಾಶ ಮಾಡಿಕೊಳ್ಳುತ್ತೇವೆ. ಇತಿಹಾಸ ಇಂತಹ ಹುಚ್ಚಾಟಗಳಿಗೆ ಸಾಕ್ಷಿಯಾಗುತ್ತಿರುತ್ತದೆ’ ಅಂತಾ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಸದ್ಯ ಅವರು ಹಂಚಿಕೊಂಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟ್ ಅನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಸಾವಿರಾರು ಜನರು ಲೈಕ್ ಮತ್ತು ಶೇರ್ ಮಾಡಿದ್ದಾರೆ.

ಇದನ್ನೂ ಓದಿ: Coimbatore DIG Suicide: ಗುಂಡು ಹಾರಿಸಿಕೊಂಡು ಕೊಯಮತ್ತೂರು ಡಿಐಜಿ ಆತ್ಮಹತ್ಯೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News