ನವದೆಹಲಿ: ಬಾವಲಿಗಳ ಜೀವನವೇ ಅತ್ಯಂತ ವಿಸ್ಮಯಕಾರಿ. ಇವು ನಿಶಾಚರಿಗಳು. ಬೆಳಕಿನಲ್ಲಿ ಅಷ್ಟಾಗಿ ಕಾಣಿಸದ ಕತ್ತಲಿನಲ್ಲಿ ಮಾತ್ರ ಆಕ್ಟಿವ್ ಆಗಿರುತ್ತವೆ. ಬಾವಲಿಗಳು ಸಾಮಾನ್ಯವಾಗಿ ಮನುಷ್ಯರೊಂದಿಗೆ ಬೆರೆಯುವುದಿಲ್ಲ. ಮರಗಲ್ಲಿ, ಕತ್ತಲು ಪ್ರದೇಶ ಮತ್ತು ವೈರ್‍ನಲ್ಲಿ ಜೋತಾಡುತ್ತಾ ಇರುವುದನ್ನು ನೀವು ಕಂಡಿರಬಹುದು. ಸಂಜೆಯಾದರೂ ಸಾಕು ಬಾವಲಿಗಳ ಹಾವಳಿ ಜೋರಾಗುತ್ತದೆ. ಅವು ವಿಚಿತ್ರ ಸೌಂಡ್ ಮಾಡುತ್ತಾ ಜನರಲ್ಲಿ ಭಯ ಹುಟ್ಟಿಸುತ್ತವೆ.
ಬಾವಲಿಗಳ ಬಗ್ಗೆ ಅನೇಕ ಮೂಡನಂಬಿಕೆಗಳು ಚಾಲ್ತಿಯಲ್ಲಿವೆ. ಬಾವಲಿಗಳು ಮನೆಗೆ ಬಂದರೆ ಕೆಲವು ಶುಭ ಎಂದು ಹೇಳಿದರೆ, ಇನ್ನೂ ಕೆಲವರು ಅಶುಭವೆಂದು ನಂಬಿದ್ದಾರೆ. ಆಗ್ನೇಯ ಏಷ್ಯಾದಲ್ಲಿರುವ ದ್ವೀಪರಾಷ್ಟ್ರ ಫಿಲಿಪ್ಪೀನ್ಸ್‍ನಲ್ಲಿ ಮಾನವ ಗಾತ್ರದ ಬಾವಲಿ ಜನರಲ್ಲಿ ಭಯವನ್ನುಂಟು ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ದೈತ್ಯ ಗಾತ್ರದ ಬಾವಲಿಯ ಫೋಟೋಗಳು ವೈರಲ್ ಆಗುತ್ತಿವೆ.
ಇದನ್ನೂ ಓದಿ: Top Private Armies: ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ಶಕ್ತಿಶಾಲಿ ಖಾಸಗಿ ಸೇನೆಗಳು ಇವು
Remember when I told y'all about the Philippines having human-sized bats? Yeah, this was what I was talking about pic.twitter.com/nTVIMzidbC
— hi monica (@AlexJoestar622) June 24, 2020
ಮಾನವ ಗಾತ್ರದ ಬಾವಲಿಯನ್ನು ಕಂಡು ಅನೇಕರು ಬೆಚ್ಚಿಬಿದ್ದಾರೆ. ಇಷ್ಟುದಿನ ನಾವೂ ಇಷ್ಟುದೊಡ್ಡ ಗಾತ್ರದ ಬಾವಲಿಯನ್ನು ನೋಡಿಯೇ ಇಲ್ಲ. ಬಾವಲಿಗಳು ಇಷ್ಟೊಂದು ದೊಡ್ಡ ಗಾತ್ರದಲ್ಲಿ ಇರುತ್ವಾ? ಅಂತಾ ಪ್ರಶ್ನಿಸಿದ್ದಾರೆ. ಫಿಲಿಪೈನ್ಸ್‌ನ ಟ್ವಿಟರ್ ಬಳಕೆದಾರರೊಬ್ಬರು ಈ ದೈತ್ಯ ಬಾವಲಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ಫಿಲಿಪೈನ್ಸ್‌ನಲ್ಲಿ ಮಾನವ ಗಾತ್ರದ ಬಾವಲಿಗಳಿವೆ ಎಂದು ನಾನು ನಿಮಗೆ ಹೇಳಿದ್ದು ನೆನಪಿದೆಯೇ? ಹೌದು, ನಾನು ಇದರ ಬಗ್ಗೆಯೇ ಮಾತನಾಡುತ್ತಿದ್ದೆ’ ಎಂದು ದೈತ್ಯ ಗಾತ್ರದ ಬಾವಲಿಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇವರ ಪೋಸ್ಟ್‍ಅನ್ನು ಅನೇಕರು ಶೇರ್ ಮಾಡಿದ್ದು, ಅದು ವೈರಲ್ ಆಗುತ್ತಿದೆ.
ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ‘ಈ ಬಾವಲಿಯ ಫೋಟೋ ನೋಡಿದ್ರೆ ನನಗೆ ಭಯವಾಗುತ್ತದೆ’ ಅಂತಾ ಹೇಳಿಕೊಂಡಿದ್ದಾರೆ. ‘ಈ ಬಾವಲಿ ದೊಡ್ಡ ರೆಕ್ಕಗಳನ್ನಷ್ಟೇ ಹೊಂದಿದೆ, ಆದರೆ ಅದರ ದೇಹ ಮಾತ್ರ ಚಿಕ್ಕದಾಗಿರುತ್ತದೆ. ಬಾವಲಿಗಳು ಹಣ್ಣು-ಹಂಪಲು ತಿಂದು ಬದುಕುತ್ತವೆ. ಯಾರೂ ಸಹ ಹೆದರುವ ಅವಶ್ಯಕತೆ ಇಲ್ಲ’ ಅಂತಾ ಒಬ್ಬ ಟ್ವಿಟರ್ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಭೋಜನ ಸವಿದ ಈ ಭಾರತೀಯ ಯಾರು?
ಮತ್ತೊಬ್ಬ ಸೋಷಿಯಲ್ ಮೀಡಿಯಾ ಬಳಕೆದಾರ, ‘ಬಾವಲಿಗಳು ಸಾಮಾನ್ಯವಾಗಿ ಸಣ್ಣ ಮರಗಳು ಸುತ್ಲೂ ನೇತಾಡುತ್ತವೆ, ಪಾಳುಬಿದ್ದ ಮನೆಗಳಲ್ಲೂ ಕಂಡುಬರುತ್ತವೆ. ಅವು ಯಾರಿಗೂ ತೊಂದರೆ ನೀಡುವುದಿಲ್ಲ, ಬಾವಲಿಗಳನ್ನು ಕೊಲ್ಲಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.