Snake Mongoose Fight: ಹಾವು-ಮುಂಗುಸಿಯ ನಡುವೆ ಭೀಕರ ಕಾಳಗ, ನೋಡಿ ನೀವು ಒಂದು ಕ್ಷಣ ದಂಗಾಗುವಿರಿ

Snake Mongoose Fight Video: ಅಂತರ್ಜಾಲದಲ್ಲಿ ನೀವು  ಹಾವು ಮತ್ತು ಮುಂಗುಸಿಗಳ ಕಾದಾಟದ ಹಲವು ವೀಡಿಯೊಗಳನ್ನು ನೋಡಿರಬಹುದು. ಇವೆರಡರ ನಡುವಿನ ಕಾಳಗ ತುಂಬಾ ಭಯಂಕರವಾಗಿರುತ್ತದೆ. ಕಾಳಗ ಯಾವ ರೀತಿ ಇರುತ್ತದೆ ಎಂದರೆ, ನೋಡುಗರು ತಮ್ಮ ಬೆರಳುಗಳನ್ನು ತಾವೇ ಕಚ್ಚಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಇಂತಹುದೇ ಹಾವು ಮುಂಗುಸಿಯ ಕಾಳಗ ನೋಡಿ ನೀವು ಕೂಡ ಒಂದು ಕ್ಷಣ ಬೆಚ್ಚಿಬೀಳುವಿರಿ.  

Written by - Nitin Tabib | Last Updated : Apr 17, 2022, 07:08 PM IST
  • ಗ್ರಾಮಕ್ಕೆ ನುಗ್ಗಲು ಯತ್ನಿಸಿದ ಚಿರತೆ.
  • ಬೆಚ್ಚಿ ಬಿದ್ದ ಗ್ರಾಮಸ್ಥರು
  • ಸ್ಥಳಕ್ಕೆ ಧಾವಿಸಿದ ಮುಂಗುಸಿ, ಮುಂದೆ ನಡೆದಿದ್ದನ್ನು ನೀವೇ ನೋಡಿ
Snake Mongoose Fight: ಹಾವು-ಮುಂಗುಸಿಯ ನಡುವೆ ಭೀಕರ ಕಾಳಗ, ನೋಡಿ ನೀವು ಒಂದು ಕ್ಷಣ ದಂಗಾಗುವಿರಿ title=
Snake Mungoose Fight Video

Snake Mongoose Fight Video: ಹಾವು ಮತ್ತು ಮುಂಗುಸಿಗಳು ಎದುರಾದರೆ ಸಾಕು ಪರಸ್ಪರರ ರಕ್ತಕ್ಕಾಗಿ ಹಾತೊರೆಯುತ್ತವೆ . ಇವೆರಡರ ನಡುವೆ ಯಾವಾಗಲೂ ದ್ವೇಷ ಇರುತ್ತದೆ. ಹಾವನ್ನು ನೋಡಿದ ಮೇಲೆ ಬಹುತೇಕರ ಸ್ಥಿತಿ ಹದಗೆಡುತ್ತದೆ. ಆದರೆ, ಮುಂಗುಸಿ ಎದುರಿಗೆ ಬಂದರೆ ಸಾಕು ಹಾವಿನ ಸ್ಥಿತಿ ಚಿಂತಾಜನಕವಾಗುತ್ತದೆ. ಏಕೆಂದರೆ ಮುಂಗುಸಿ ಹಾವನ್ನು ಕಂಡ ತಕ್ಷಣ ಅದರ ಮೇಲೆ ದಾಳಿ ನಡೆಸುತ್ತದೆ.

ಹಾವು ಮತ್ತು ಮುಂಗುಸಿಯ ಭೀಕರ ಕಾಳಗ
ನೀವು ಅಂತರ್ಜಾಲದಲ್ಲಿ ಹಾವು ಮತ್ತು ಮುಂಗುಸಿಗಳ ಕಾಳಗದ ಹಲವು ವೀಡಿಯೊಗಳನ್ನು ನೋಡಿರಬೇಕು. ಈ ಇಬ್ಬರ ನಡುವಿನ ಘರ್ಷಣೆಯು ಯಾವ ರೀತಿ ಭೀಕರವಾಗಿರುತ್ತದೆ ಎಂದರೆ, ಅದನ್ನು ನೋಡಿದ ಜನರು ತಮ್ಮ ಬೆರಳುಗಳನ್ನು ತಾವೇ ಕಚ್ಚಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇವೆರಡರ ನಡುವೆ ನಡೆಯುತ್ತಿರುವ ಕಾಳಗವನ್ನು ನೋಡಿ ನೀವೂ ಕೂಡ ಬೆಚ್ಚಿಬೀಳುವಿರಿ. ವೀಡಿಯೊದಲ್ಲಿ, ನಾಗರ ಹಾವು ಮತ್ತು ಮುಂಗುಸಿ ಪರಸ್ಪರರ ಜೀವ ತೆಗೆಯಲು ಕಾದಾಟಕ್ಕೆ ಇಳಿದಿವೆ. ವೀಡಿಯೊ ಎಷ್ಟು ಅದ್ಭುತವಾಗಿದೆ ಎಂದರೆ ಅದನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ.

ಇದನ್ನೂ ಓದಿ-Shanghai Lockdown: ಕೊರೊನಾ ಲಾಕ್ಡೌನ್ ನಲ್ಲಿ ಮನೆಯಲ್ಲಿ ಬಂಧಿಯಾದ ಜನರ ಕಿರುಚಾಟ, Viral Video

ಹಲವಾರು ಅಡಿ ಉದ್ದದ ನಾಗರಾಜ ಗ್ರಾಮವೊಂದಕ್ಕೆ ನುಗ್ಗಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಹಾವನ್ನು ಕಂಡು ಗ್ರಾಮಸ್ಥರ ಸ್ಥಿತಿ ಬಿಗಡಾಯಿಸಿದೆ. ಅವರು ಹಾವನ್ನು ಹೊಡೆದೋಡಿಸಲು ಯತ್ನಿಸುತ್ತಿರುವಾಗಲೇ ಆ ಸ್ಥಳಕ್ಕೆ ಮುಂಗುಸಿಯೊಂದು ಧಾವಿಸಿದೆ. ಇದಾದ ಬಳಿಕ ವಿಡಿಯೋದಲ್ಲಿ ಕಾಣುತ್ತಿರುವುದು ತುಂಬಾ ಅಪಾಯಕಾರಿ. ಮುಂಗುಸಿ ನಾಗರಾಜನ ಮೇಲೆ ದಾಳಿ ಇಡುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು.. ದಿಢೀರ್ ನಡೆದ ದಾಳಿಯಿಂದ ಹಾವಿಗೆ ಏನೂ ಅರ್ಥವಾಗುತ್ತಿಲ್ಲ. ವಿಡಿಯೋ ನೋಡಿ-

ಇದನ್ನೂ ಓದಿ-Video: Leopard ಬೇಟೆಯಾಡಲು ಮರ ಹತ್ತಿದ ಪ್ರಾಣಿ, ನಂತರ ನಡೆದಿದ್ದೆ ಬೇರೆ

ಮುಂಗುಸಿಯ ಮುಂದೆ ಸೋತ ಹಾವು
ಹಾವು ಏನನ್ನಾದರೂ ಅರ್ಥಮಾಡಿಕೊಳ್ಳುವ ಮೊದಲೇ ಮುಂಗುಸಿ ತನ್ನ ತನ್ನ ಹರಿತವಾದ ಹಲ್ಲುಗಳಿಂದ ಹಾವಿನ ಮೇಲೆ ಹಲವಾರು ಬಾರಿ ದಾಳಿ ಇಡುತ್ತದೆ. 1 ನಿಮಿಷ 39 ಸೆಕೆಂಡ್‌ಗಳ ವಿಡಿಯೋ ಇದಾಗಿದ್ದು, ಹಾವು ಕೂಡ ಸ್ವಯಂರಕ್ಷಣೆಗಾಗಿ ಮುಂಗುಸಿಯ ಮೇಲೆ ದಾಳಿ ನಡೆಸುವುದನ್ನು ನೀವು ಕಾಣಬಹುದು. ಆದರೆ, ತೀವ್ರವಾಗಿ ಗಾಯಗೊಂಡಿರುವ ಕಾರಣ ನಾಗರಹಾವು ಬದುಕಲು ಸಾಧ್ಯವಾಗದೆ ಒದ್ದಾಡುತ್ತಿದೆ. ಕೊನೆಯಲ್ಲಿ, ಮುಂಗುಸಿ ತನ್ನ ಬಾಯಿಯಲ್ಲಿ ಹಾವನ್ನು ಹಿಡಿದು ಕಾಡಿಗೆ ಓಡಿಹೋಗುತ್ತದೆ. Dipak Airtel ಹೆಸರಿನ ಯೂಟ್ಯೂಬ್ ಚಾನೆಲ್‌ನಿಂದ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News