Snake Video : ಲೋಟದಲ್ಲಿರುವ ನೀರನ್ನು ಗಟ ಗಟನೆ ಕುಡಿಯುವ ಹಾವು.! ಅಪರೂಪದ ವಿಡಿಯೋ ವೈರಲ್‌

Viral Snake Video: ಹಾವುಗಳು ಸಾಮಾನ್ಯವಾಗಿ ನೀರು ಕುಡಿಯುವುದನ್ನು ಯಾರೂ ಕಂಡಿಲ್ಲ. ಹಾವುಗಳು ನೀರು ಕುಡಿಯುವುದು ಅಪರೂಪದಲ್ಲಿಯೇ ಅಪರೂಪ. ಹಾವಿನ ತಲೆಯ ಕೆಳಭಾಗವು ನೀರನ್ನು ಸ್ಪರ್ಶಿಸುತ್ತಿದ್ದಂತೆ, ನೀರು ಚರ್ಮದ ಪದರಗಳ ಮೂಲಕ ಪ್ರವೇಶಿಸುತ್ತದೆ.

Written by - Chetana Devarmani | Last Updated : Feb 5, 2023, 07:46 AM IST
  • ಲೋಟದಲ್ಲಿರುವ ನೀರನ್ನು ಗಟ ಗಟ ಕುಡಿಯುವ ಹಾವು
  • ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌
  • ಹಾವು ನೀರು ಕುಡಿಯುವುದ ಕಂಡು ಆಶ್ಚರ್ಯಪಟ್ಟ ನೆಟ್ಟಿಗರು
Snake Video : ಲೋಟದಲ್ಲಿರುವ ನೀರನ್ನು ಗಟ ಗಟನೆ ಕುಡಿಯುವ ಹಾವು.! ಅಪರೂಪದ ವಿಡಿಯೋ ವೈರಲ್‌  title=
Snake drinking water

Viral Snake Video: ಹಾವುಗಳು ಸಾಮಾನ್ಯವಾಗಿ ನೀರು ಕುಡಿಯುವುದನ್ನು ಯಾರೂ ಕಂಡಿಲ್ಲ. ಹಾವುಗಳು ನೀರು ಕುಡಿಯುವುದು ಅಪರೂಪದಲ್ಲಿಯೇ ಅಪರೂಪ. ಹಾವಿನ ತಲೆಯ ಕೆಳಭಾಗವು ನೀರನ್ನು ಸ್ಪರ್ಶಿಸುತ್ತಿದ್ದಂತೆ, ನೀರು ಚರ್ಮದ ಪದರಗಳ ಮೂಲಕ ಪ್ರವೇಶಿಸುತ್ತದೆ. ಕ್ಯಾಪಿಲ್ಲರಿಟಿಯಿಂದಾಗಿ ಹಾವುಗಳ ಆಹಾರ ನಾಳಕ್ಕೆ ನೀರು ಸೇರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಂದು ಹಾವು ಗ್ಲಾಸ್ ನಲ್ಲಿದ್ದ ನೀರನ್ನು ಕೆಲವೇ ಸೆಕೆಂಡ್‌ನಲ್ಲಿ ಖಾಲಿ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. 

ಇದನ್ನೂ ಓದಿ : Video:  ಮನೆಯ ಛಾವಣಿಯಲ್ಲಿ ಕುಳಿತು ಜಾಲಿಯಾಗಿ ಗಾಳಿಪಟ ಹಾರಿಸುತ್ತಿರೋ ಕೋತಿ 

ಹಾವಿನ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಹಾವೊಂದು ಗ್ಲಾಸ್ ನಲ್ಲಿದ್ದ ನೀರನ್ನು ಕ್ಷಣಮಾತ್ರದಲ್ಲಿ ಗಟ ಗಟನೇ ಕುಡಿದು ಖಾಲಿ ಮಾಡುತ್ತದೆ. ಹಾವು ಗ್ಲಾಸಿನಲ್ಲಿದ್ದ ನೀರಿಗೆ ತಲೆ ಹಾಕಿ ಅತಿವೇಗವಾಗಿ ಕುಡಿಯುವುದನ್ನು ಕಾಣಬಹುದು. ಗ್ಲಾಸಿನಲ್ಲಿದ್ದ ನೀರು ಸೆಕೆಂಡುಗಳಲ್ಲಿ ಖಾಲಿಯಾಗುತ್ತದೆ. ಹಾವು ನೀರು ಕುಡಿದಾಗ ಅದರ ದವಡೆಗಳೂ ಚಲಿಸುತ್ತವೆ. ಇದನ್ನು ಕೂಡ ನೀವು ಈ ದೃಶ್ಯದಲ್ಲಿ ನೋಡಬಹುದು.

 

 

ಹಾವು ಗ್ಲಾಸ್‌ನಲ್ಲಿದ್ದ ನೀರನ್ನು ಸೆಕೆಂಡ್‌ಗಳಲ್ಲಿ ಖಾಲಿ ಮಾಡಿದ್ದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಹಾವಿಗೂ ನೀರಡಿಕೆಯಾಗುತ್ತಾ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೋ ಅತಿ ಹೆಚ್ಚಿನ ವೀಕ್ಷಣೆಗಳನ್ನು ಪಡೆದಿದೆ. ಇನ್ನೊಂದೆಡೆ ಕಾಮೆಂಟ್‌ಗಳ ಮಹಾಪೂರವೇ ಹರಿದು ಬರುತ್ತಿದೆ.  

ಇದನ್ನೂ ಓದಿ : Viral Video : ವ್ಯಕ್ತಿಯೊಬ್ಬನನ್ನು ಜೀವಂತ ನುಂಗಿದ ದೈತ್ಯ ಹೆಬ್ಬಾವಿನ ವೈರಲ್‌ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News