Cashew shaped jackfruit: ಪ್ರಪಂಚದ ವಿಸ್ಮಯಕ್ಕೆ ಮಿತಿ ಉಂಟೇ? ಇದು ನಿಜವಾದ ಮಾತು ಎಂದು ಮತ್ತೊಮ್ಮೆ ಸಾಬೀತಾಗಿದೆ. ಹಲಸಿನ ಮರದಲ್ಲಿ ಗೇರುಬೀಜ ಬಿಟ್ಟಿದೆ ಕಣ್ರೀ. ಹೌದು ಇದು ಪ್ರಕೃತಿಯ ವಿಸ್ಮಯವೇ ಸರಿ. ನೋಡೋದಕ್ಕೆ ಹಲಸಿನ ಮರ ಥರಾನೇ ಇದ್ದರೂ ಇದರಲ್ಲಿ ಗೇರು ಬೀಜ ಬಿಟ್ಟಿದೆ. ಹಾಗಾದ್ರೆ ಇದು ಯಾವ ಮರ?
ಇದನ್ನೂ ಓದಿ: Viral News: ಆತ 22 ಕಿಮೀ ನಡೆದು ಬಂದರೆ, ಆಕೆ 10 ಕಿ,ಮೀ ನಡೆದು ಬಂದಳು: ಮುಖಾಮುಖಿಯಾದಾಗ ಆಯ್ತು..!
ಈ ಅಪರೂಪದ ಪ್ರಕೃತಿ ವಿಸ್ಮಯ ಕಂಡು ಬಂದಿದ್ದು ಕರ್ನಾಟಕದಲ್ಲಿಯೇ. ಹೌದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಂಡೀಕಟ್ಟೆ ಎಂಬಲ್ಲಿರುವ ಮಹಾಬಲೇಶ್ವರ ಬಂಡಿಕಟ್ಟೆ ಎಂಬವರ ಮನೆ ಹಿತ್ತಲಿನ ತೋಟದಲ್ಲಿ. ಈ ಪ್ರಕೃತಿ ವೈಶಿಷ್ಟ್ಯವನ್ನು ಕಂಡು ಜನ ದಂಗಾಗಿದ್ದಾರೆ.
ಹಲಸಿನ ಮರ ಎಂದರೆ ದೈತ್ಯವಾಗಿರುತ್ತದೆ. ಆದರೆ ಆ ಮರದಲ್ಲಿ ಗೇರುಬೀಜ ಮಾದರಿಯ ಹಲಸು ಬಿಟ್ಟಿರುವುದು ಭಾರೀ ಅಚ್ಚರಿ ಮೂಡಿಸಿದೆ. ಸದ್ಯ ಪ್ರಕೃತಿಯ ಈ ವಿಸ್ಮಯವನ್ನು ಕಾಣಲೆಂದೇ ಮಹಾಬಲೇಶ್ವರ ಅವರ ತೋಟಕ್ಕೆ ಜನರು ಆಗಮಿಸುತ್ತಿದ್ದಾರೆ.
ಇದರ ಹಿಂದಿರುವ ರಹಸ್ಯ ಏನೆಂದು ತಿಳಿದಿಲ್ಲ. ಆದರೆ ಇದು ಸುಮಾರು 70 ವರ್ಷ ಹಳೆಯದಾದ ಹಲಸಿನ ಮರ. ಇದರಲ್ಲಿ ಮೊದಲ ಬಾರಿಗೆ ಇಂತಹ ವಿಸ್ಮಯ ಕಂಡು ಬಂದಿದೆಯಂತೆ. ಸದ್ಯ ಗೇರುಬೀಜ ಮಾದರಿಯ ಕಾಯಿ ಆಗಿರುವ ಹಲಸಿನ ಮರವನ್ನು ನೋಡಲು ಜನರ ದಂಡೇ ಹರಿದುಬರುತ್ತಿದೆ.
ಇದನ್ನೂ ಓದಿ: ‘Ship Of Love’: 2010 ರಿಂದ ಪೈಸೆ ಪೈಸೆ ಹಣ ಕೂಡಿಟ್ಟ ರೈತ… ಟೈಟಾನಿಕ್ ಹಡಗಿನಂತೆ ಮನೆ ನಿರ್ಮಿಸಿದ ಕನಸುಗಾರ!
ಮಹಾಬಲೇಶ್ವರ ಅವರ ತೋಟದಲ್ಲಿ ಇಂತಹ ಆಶ್ಚರ್ಯಕರ ಸಂಗತಿ ಇರುವುದು ಎಂತಹವರನ್ನೂ ಸಹ ಕುತೂಹಲಕ್ಕೆ ದೂಡಬಹುದು. ಒಟ್ಟಿನಲ್ಲಿ ಇದನ್ನು ಪ್ರಕೃತಿಯ ವಿಸ್ಮಯ ಎನ್ನಬೇಕೋ ಅಥವಾ ಮರದಲ್ಲಿನ ಅಸಹಜ ಬೆಳವಣಿಗೆ ಎನ್ನಬೇಕೋ ತಿಳಿಯುತ್ತಿಲ್ಲ. ಇಂತಹ ಅದ್ಭುತ ಸೃಷ್ಟಿಯೊಂದು ಜನರಲ್ಲಿ ಭಾರೀ ಕೌತುಕವನ್ನು ಹೆಚ್ಚಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ