Viral Video: ವಿಶಿಷ್ಟ ಉಡುಗೆ ವಿಷಯದಲ್ಲಿ ಉರ್ಫಿ ಜಾವೇದ್‌ಗೆ ಟಕ್ಕರ್ ನೀಡುವ ರೀಲ್ಸ್ ಸ್ಟಾರ್!

Reel s star beats Urfi Javed:  ಟ್ರೋಲರ್ ಗಳು ಈತನ ರೀಲ್ಸ್ ಗಳನ್ನು ಟ್ರೊಲ್ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರೆ. ಈತ ಮಾತ್ರ ಯಾವುದಕ್ಕೂ ತಲೆಕೆಡಿಸಿ ಕೊಳ್ಳದೆ ಭರಪೂರ ಎಂಟೇಟೇನ್ಮೆಂಟ ನೀಡುತ್ತಿದ್ದಾನೆ. ಇವನು ಮಾಡೋ ಪ್ರತಿಯೊಂದು ರೀಲ್ಸ್  ಕ್ಷಣ ಮಾತ್ರದಲ್ಲಿ ಲಕ್ಷಾಂತರ ಮೆಚ್ಚಗೆ ಪಡೆಯುತ್ತೆ.

Written by - Yashaswini V | Last Updated : Mar 22, 2023, 07:20 PM IST
  • ಉರ್ಪಿ ಜಾವೇದ್ ತನ್ನ ಬಟ್ಟೆ ವಿನ್ಯಾಸದಿಂದ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಾಳೆ.
  • ಆದ್ರೆ ಇಲ್ಲೊಬ್ಬ ರೀಲ್ಸ್ ಸ್ಟಾರ್ tik toker tarur ಉರ್ಪಿ ತರಾನೆ ವಿವಿಧ ವಿನ್ಯಾಸದ ಬಟ್ಟೆಯನ್ನು ಧರಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾನೆ.
Viral Video: ವಿಶಿಷ್ಟ ಉಡುಗೆ ವಿಷಯದಲ್ಲಿ ಉರ್ಫಿ ಜಾವೇದ್‌ಗೆ  ಟಕ್ಕರ್ ನೀಡುವ ರೀಲ್ಸ್ ಸ್ಟಾರ್! title=
Reel s star beats Urfi Javed

Reel s star beats Urfi Javed- Viral Video: ಉರ್ಪಿ ಜಾವೇದ್ ಎಂದಾಕ್ಷಣ ನೆನಪಿಗೆ ಬರೋದು ತುಂಡು ಬಟ್ಟೆಯ ತುಂಟ ಪೋರಿ. ಮೈ  ಮಾಟದಿಂದ ಪಡ್ಡೆ ಹೈಕಳ ಮನ ಗೆಲ್ಲುವ ಆಕೆಯ ಉಡುಗೆ. ಆದರೆ ಇಲ್ಲೊಬ್ಬ ರೀಲ್ಸ್ ಸ್ಟಾರ್ ತನ್ನ ಉಡುಗೆ, ನೃತ್ಯದ ಮೂಲಕ ಊರ್ಫಿಗೆ ಸೆಡ್ಡು ಹೊಡೆಯುತ್ತಿದ್ದಾನೆ. 

ವಾಸ್ತವವಾಗಿ, ಉರ್ಪಿ ಜಾವೇದ್ ತನ್ನ ಬಟ್ಟೆ ವಿನ್ಯಾಸದಿಂದ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಾಳೆ. ಆದ್ರೆ ಇಲ್ಲೊಬ್ಬ ರೀಲ್ಸ್  ಸ್ಟಾರ್ tik toker tarur ಉರ್ಪಿ ತರಾನೆ ವಿವಿಧ ವಿನ್ಯಾಸದ ಬಟ್ಟೆಯನ್ನು ಧರಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾನೆ. 

ಇದನ್ನೂ ಓದಿ- Urfi Javed: ಕಿವಿಯಲ್ಲಿ ನಿಂತ ಉರ್ಫಿ ಮಾನ!! “ಹಣ್ಣು ಬೇಕೆಂದು ತಿಂದುಬಿಟ್ಟೀರಾ… ಹುಷಾರ್!”
 
ಈತನ ಇನ್ನೊಂದು ವಿಶೇಷತೆ ಎಂದರೆ, ಇವನು ಧರಿಸುವ ವಿವಿಧ ವಿನ್ಯಾಸದ ಉಡುಗೆಗಳು "ಕಸದಿಂದ ರಸ" ಅನ್ನೊ ಗಾದೆ ಮಾತಿಗೆ ಪೂರಕವಾಗಿವೆ. ಸಾಮಾನ್ಯವಾಗಿ ಸಿಗುವ ತೆಂಗಿನ ಗರಿ, ಪ್ಲಾಸ್ಟಿಕ್, ಮೆಣಸಿಕಾಯಿ, ಪಾತ್ರೆ ಇನ್ನೂ ಹಲವಾರು ವಸ್ತುಗಳಿಂದ ವಿವಿಧ ವಿನ್ಯಾಸದ ಬಟ್ಟೆಯನ್ನು ತಯಾರಿಸಿ ಧರಿಸಿಕೊಳ್ಳುತ್ತಾನೆ.

ಟ್ರೋಲರ್ ಗಳು ಈತನ ರೀಲ್ಸ್ ಗಳನ್ನು ಟ್ರೊಲ್ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರೆ. ಈತ ಮಾತ್ರ ಯಾವುದಕ್ಕೂ ತಲೆಕೆಡಿಸಿ ಕೊಳ್ಳದೆ ಭರಪೂರ ಎಂಟೇಟೇನ್ಮೆಂಟ ನೀಡುತ್ತಿದ್ದಾನೆ. ಇವನು ಮಾಡೋ ಪ್ರತಿಯೊಂದು ರೀಲ್ಸ್  ಕ್ಷಣ ಮಾತ್ರದಲ್ಲಿ ಲಕ್ಷಾಂತರ ಮೆಚ್ಚಗೆ ಪಡೆಯುತ್ತೆ ಹಾಗೂ ಕಾಮೆಂಟ್ ಬಾಕ್ಸ್ ನಲ್ಲಿ ಮಜವಾಗಿ ವೀಕ್ಷಕರು ಕಾಮೆಂಟ್ ಮಾಡುತ್ತಾರೆ. 
    
ಇದನ್ನೂ ಓದಿ- ʼಅದನ್ನಾದ್ರೂ ಯಾಕ್‌ ಹಾಕ್ಕೊಂಡಿʼ... ಇದ್ಯಾವ ಫ್ಯಾಶನ್‌..! ಉರ್ಫಿ ಲುಕ್‌ಗೆ ನೆಟ್ಟಿಗರು ಗರಂ
    
ಈತನ ಫ್ಯಾಷನ್ ಡಿಸೈನಿಂಗ್ ಡ್ರೆಸ್ಗಳನ್ನು ನೋಡಿ ಬಾಯಿಯ ಮೇಲೆ ಬೆರಳು ಇಟ್ಟಿಕೊಳ್ಳಬೇಕು. ಕೆಲವರು ಈತನ ಉಡುಗೆ ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕರೆ, ಇನ್ನೂ ಕೆಲವರು ಹೀಗೂ ಉಂಟೆ ಎಂದು ಅಚ್ಚರಿ ಪಡುತ್ತಾರೆ. 

ಒಟ್ಟಿನಲ್ಲಿ ಈತ ಧರಿಸುವ ಬಟ್ಟೆಗಳು ವಿಚಿತ್ರ ಎಂದೆನಿಸಿದರೂ ಮನರಂಜನೆಗೆ ಮಾತ್ರ ಕೊರತೆ ಇಲ್ಲ. ಇಲ್ಲಿದೆ, ಈತನ ಕೆಲವು ರೀಲ್ಸ್ ವೈರಲ್ ವಿಡಿಯೋಗಳು...  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News