Viral News: ಬರ್ಗರ್ ಕೊಟ್ಟು 20 ವರ್ಷದ ಯುವತಿಯನ್ನು ಮದುವೆಯಾದ ವ್ಯಕ್ತಿ!

Pakistani  Burger Love Story: ಬರ್ಗರ್‌ ತಂದುಕೊಟ್ಟ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದ ಪಾಕಿಸ್ತಾನದ ಯುವತಿಯೊಬ್ಬಳು ತನಗಿಂತ 20 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ್ದಾಳೆ. ಈ ವಿಡಿಯೋವನ್ನು ಕಂಡು ಸಾಮಾಜಿಕ ಬಳಕೆದಾರರು ಶಾಕ್‌ ಆಗಿದ್ದಾರೆ.

Written by - Puttaraj K Alur | Last Updated : Mar 5, 2024, 08:18 PM IST
  • ಪಾಕಿಸ್ತಾನದಲ್ಲಿ ಬರ್ಗರ್‌ ತಂದುಕೊಟ್ಟ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದ ಯುವತಿ
  • ತನಗಿಂತಲೂ 20 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾದ ಯುವತಿ
  • ಸಖತ್‌ ವೈರಲ್‌ ಆಗುತ್ತಿರುವ ಪಾಕಿಸ್ತಾನಿ ಬರ್ಗರ್‌ ಲವ್‌ ಸ್ಟೋರಿ
Viral News: ಬರ್ಗರ್ ಕೊಟ್ಟು 20 ವರ್ಷದ ಯುವತಿಯನ್ನು ಮದುವೆಯಾದ ವ್ಯಕ್ತಿ! title=
ಪಾಕಿಸ್ತಾನಿ ಬರ್ಗರ್‌ ಲವ್‌ ಸ್ಟೋರಿ!

ನವದೆಹಲಿ: ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿದಿನ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಕೆಲವು ನಿಮ್ಮ ಮೊಗದಲ್ಲಿ ಮಂದಹಾಸ ಮೂಡಿಸಿದರೆ, ಇನ್ನೂ ಕೆಲವು ನಿಮಗೆ ಕಣ್ಣೀರು ತರಿಸುತ್ತವೆ. ಕೆಲವು ವಿಡಿಯೋಗಳನ್ನು ನೋಡಿದ್ರೆ ಸಾಕು ಹೊಟ್ಟೆ ಹುಣ್ಣಾಗುವಂತೆ ನಗಬೇಕಾಗುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಮತ್ತೊಂದು ನಗೆಯುಕ್ಕಿಸುವ ಸಖತ್‌ ಸೌಂಡ್‌ ಮಾಡುತ್ತಿದೆ. ವ್ಯಕ್ತಿಯೊಬ್ಬ ಬರ್ಗರ್‌ ಕೊಟ್ಟು 20 ವರ್ಷದ ಯುವತಿಯನ್ನು ಮದುವೆಯಾಗಿರುವ ಘಟನೆ ನಡೆದಿದೆ. 

ಹೌದು, ಇದನ್ನು ನೀವು ನಂಬಲೇಬೇಕು. ಈ ಘಟನೆ ನಡೆದಿರುವುದು ಪಾಕಿಸ್ತಾನದಲ್ಲಿ. ಬರ್ಗರ್‌ ತಂದುಕೊಟ್ಟ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದ ಪಾಕಿಸ್ತಾನದ ಯುವತಿಯೊಬ್ಬಳು ತನಗಿಂತ 20 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ್ದಾಳೆ. ಈ ವಿಡಿಯೋವನ್ನು ಕಂಡು ಸಾಮಾಜಿಕ ಬಳಕೆದಾರರು ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: Terrorist Death: ಮತ್ತೋರ್ವ ಮೋಸ್ಟ್ ವಾಂಟೆಡ್ ಭಯೋತ್ಪಾದಕನ ನಿಗೂಢ ಸಾವು.!

 
 
 
 

 
 
 
 
 
 
 
 
 
 
 

A post shared by Fahad Khan (@fadi_wri8s_)

ಸೋದರ ಸಂಬಂಧಿ ತಂದುಕೊಟ್ಟ ಬರ್ಗರ್ ಸೇವಿಸಿದ ಯುವತಿಗೆ ಆತನ ಮೇಲೆ ಲವ್ ಆಗಿದೆ. ತನಗಿಂತ 20 ವರ್ಷ ದೊಡ್ಡವನಾಗಿದ್ದರೂ ಆಕೆ ಆತನನ್ನೇ ಮದುವೆಯಾಗಿದ್ದಾಳೆ. ಈ ಬರ್ಗರ್ ಪ್ರೇಮ ಕಥೆ ಇದೀಗ ಸಖತ್‌ ಸೌಂಡ್‌ ಮಾಡುತ್ತಿದೆ. @fadi_wri8s_ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ʼ1 Shawarma + 2 Zinger Burger= Loveʼ ಎಂದು ಬರೆದಿರುವ ಈ ವಿಡಿಯೋಗೆ ʼ🤔Deal is good or not😂ʼ ಎಂಬ ಕ್ಯಾಪ್ಶನ್‌ ನೀಡಲಾಗಿದೆ.  

ಈ ವಿಡಿಯೋವನ್ನು ಇದುವರೆಗೆ ಸಾವಿರಾರು ಜನರು ವೀಕ್ಷಿಸಿದ್ದು, ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರು ಇದು ʼAverage pakistani love storyʼ ಎಂದು ಕಾಮೆಂಟ್‌ ಮಾಡಿದ್ದರೆ, ಇನ್ನೂ ಕೆಲವರು ಕೇವಲ ಬರ್ಗರ್‌ ನೀಡಿ ಹುಡಿಗಿಯನ್ನು ಬೀಳಿಸಿಕೊಳ್ಳಬಹುದಾ?ʼ ಅಂತಾ ತಮಾಷೆಯಾಗಿ ಕಾಮೆಂಟ್‌ ಮಾಡಿದ್ದಾರೆ. ಒಟ್ನಲ್ಲಿ ಈ ಪಾಕಿಸ್ತಾನಿ ಬರ್ಗರ್‌ ಲವ್‌ ಸ್ಟೋರಿ ಇಂಟರ್ನೆಟ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ.  

ಇದನ್ನೂ ಓದಿ: Haiti Prison: ಹೈಟಿಯಲ್ಲಿ ಉದ್ವಿಗ್ನ ಪರಿಸ್ಥಿತಿ..! ಜೈಲು ಗಲಭೆ ಭೇದಿಸಿ ನೂರಾರು ಕೈದಿಗಳು ಪರಾರಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
 

Trending News