ಈ ರಾಜ್ಯದಲ್ಲಿ ತಲೆಕೆಳಗಾಗಿ ಹರಿಯುತ್ತೆ ಜಲಪಾತ: ಮಳೆಗಾಲದಲ್ಲಿ ಸಿಗೋ ಸೌಂದರ್ಯದ ವಿಡಿಯೋ ಇಲ್ಲಿದೆ

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಜಲಪಾತವೊಂದರ ನಯನ ಮನೋಹರ ದೃಶ್ಯ ಕಂಡುಬರುತ್ತಿದೆ. ಈ ಜಲಪಾತದ ವಿಶೇಷತೆ ಏನೆಂದರೆ, ಪರ್ವತದ ಬದಿಯಿಂದ ಜಲಪಾತದ ನೀರು ಅತಿವೇಗದಲ್ಲಿ ಕೆಳಗೆ ಬೀಳುತ್ತದೆ. ಆದರೆ ಅಚ್ಚರಿಯ ಸಂಗತಿ ಎಂದರೆ ನೀರು ಕೆಳಗೆ ಬೀಳುವ ಬದಲು ಹಿಮ್ಮುಖವಾಗಿ ಮೇಲೆ ಚಿಮ್ಮುತ್ತಿದೆ. ಇದಕ್ಕೇ ವೈಜ್ಞಾನಿಕ ಕಾರಣವೂ ಇದೆ.  

Written by - Bhavishya Shetty | Last Updated : Jul 11, 2022, 09:21 AM IST
  • ಮಳೆಗಾಲದ ಸಂದರ್ಭದಲ್ಲಿ ಜಲಪಾತಗಳು ತುಂಬಿ ಹರಿಯುತ್ತದೆ
  • ಪುಣೆಯಲ್ಲಿದೆ ತಲೆಕೆಳಗಾಗಿ ಹರಿಯುವ ಜಲಪಾತ
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌
ಈ ರಾಜ್ಯದಲ್ಲಿ ತಲೆಕೆಳಗಾಗಿ ಹರಿಯುತ್ತೆ ಜಲಪಾತ: ಮಳೆಗಾಲದಲ್ಲಿ ಸಿಗೋ ಸೌಂದರ್ಯದ ವಿಡಿಯೋ ಇಲ್ಲಿದೆ title=
Nanaghat Waterfall

ದೇಶಕ್ಕೆ ಮುಂಗಾರು ಆಗಮಿಸಿದ್ದೇ ತಡ ಅನೇಕ ರಾಜ್ಯಗಳಲ್ಲಿ ಉತ್ತಮ ವಾತಾವರಣ ಮನೆ ಮಾಡಿದೆ. ಮಳೆಯ ಆರ್ಭಟ ಜನತೆಗೆ ಬಿಸಿಲಿನ ತಾಪದಿಂದ ನೆಮ್ಮದಿ ತಂದಿದೆ. ತೇವಾಂಶ ಮತ್ತು ಶಾಖದಿಂದ ಬಳಲುತ್ತಿರುವ ಜನರು ಮಳೆಗಾಗಿ ಕಾಯುತ್ತಿದ್ದರು ಎನ್ನಬಹುದು. ಇನ್ನು ಈ ಮಳೆಗಾಲದ ಸಂದರ್ಭದಲ್ಲಿ ಜಲಪಾತಗಳು ತುಂಬಿ ಹರಿಯುತ್ತದೆ. ಈ ಪ್ರಕೃತಿ ಸೌಂದರ್ಯವನ್ನು ನೋಡಲೆಂದು ಅನೇಕ ಜನರು ಪ್ರವಾಸಿ ತಾಣಗಳ ಕಡೆ ಮುಖ ಮಾಡುತ್ತಾರೆ. ಹೀಗಾಗಿ ಅಂತಹ ಪ್ರವಾಸಿ ಪ್ರಿಯರಿಗಾಗಿ ಇಲ್ಲೊಂದು ಸ್ಥಳದ ಬಗ್ಗೆ ಮಾಹಿತಿ ನೀಡಲಿದ್ದೇವೆ. 

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಜಲಪಾತವೊಂದರ ನಯನ ಮನೋಹರ ದೃಶ್ಯ ಕಂಡುಬರುತ್ತಿದೆ. ಈ ಜಲಪಾತದ ವಿಶೇಷತೆ ಏನೆಂದರೆ, ಪರ್ವತದ ಬದಿಯಿಂದ ಜಲಪಾತದ ನೀರು ಅತಿವೇಗದಲ್ಲಿ ಕೆಳಗೆ ಬೀಳುತ್ತದೆ. ಆದರೆ ಅಚ್ಚರಿಯ ಸಂಗತಿ ಎಂದರೆ ನೀರು ಕೆಳಗೆ ಬೀಳುವ ಬದಲು ಹಿಮ್ಮುಖವಾಗಿ ಮೇಲೆ ಚಿಮ್ಮುತ್ತಿದೆ. ಇದಕ್ಕೇ ವೈಜ್ಞಾನಿಕ ಕಾರಣವೂ ಇದೆ.  

ಇದನ್ನೂ ಓದಿ: ಗೋವಾದಲ್ಲಿ ʼಕೈʼ ಬಂಡಾಯ: ನಾಪತ್ತೆಯಾದ 5 ಶಾಸಕರು-ಆತಂಕದಲ್ಲಿ ಸೋನಿಯಾ-ರಾಹುಲ್!

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್‌ನಲ್ಲಿ ಸುಂದರವಾದ ಜಲಪಾತದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 'ಗಾಳಿಯ ವೇಗವು ಗುರುತ್ವಾಕರ್ಷಣೆಯ ಬಲಕ್ಕೆ ಸಮಾನವಾಗಿ ಮತ್ತು ವಿರುದ್ಧವಾಗಿದ್ದಾಗ ಈ ರೀತಿಯಾಗುತ್ತದೆ. ಮುಂಗಾರು ಮಳೆಯ ಸೊಬಗು" ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಜಲಪಾತದಿಂದ ನೀರು ಹರಿಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. 

 

 

ಇದು ಹೇಗೆ ಸಾಧ್ಯ?: 
ಗಾಳಿಯ ವೇಗದ ಪ್ರಮಾಣವು ಸಮಾನವಾಗಿದ್ದಾಗ ಮತ್ತು ಗುರುತ್ವಾಕರ್ಷಣೆಯ ಬಲಕ್ಕೆ ವಿರುದ್ಧವಾಗಿದ್ದಾಗ ಈ ವಿದ್ಯಮಾನವು ಸಂಭವಿಸುತ್ತದೆ. ಇದು ಖಂಡಿತವಾಗಿಯೂ ಆಶ್ಚರ್ಯಕರ ಸಂಗತಿ. ಈ ವಿಡಿಯೋವನ್ನು 24,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 2,500 ಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. 

ಇದನ್ನೂ ಓದಿ: ನಾಳೆಯಿಂದ ಈ ರಾಶಿಯವರಿಗೆ ಏಳೂವರೆ ಮತ್ತು ಎರಡೂವರೆ ವರ್ಷದ ಶನಿ ದೆಸೆ ಆರಂಭ .!

ಈ ಜಲಪಾತ ಎಲ್ಲಿದೆ?
ನಾನಾಘಾಟ್ ಎಂದೂ ಕರೆಯಲ್ಪಡುವ ನಾನೇಘಾಟ್, ಕೊಂಕಣ ಕರಾವಳಿ ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಪುರಾತನ ನಗರವಾದ ಜುನ್ನಾರ್ ನಡುವಿನ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿರುವ ಒಂದು ಪರ್ವತ ಮಾರ್ಗವಾಗಿದೆ. ಇದು ಪುಣೆಯಿಂದ ಉತ್ತರಕ್ಕೆ 120 ಕಿಮೀ ಮತ್ತು ಮುಂಬೈನಿಂದ ಪೂರ್ವಕ್ಕೆ 165 ಕಿಮೀ ದೂರದಲ್ಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News