Viral News: 61 ವರ್ಷದ ಮುದುಕನೇ ಬೇಕೆಂದು ಪಟ್ಟು ಹಿಡಿದು ಮದುವೆಯಾದ 18ರ ಯುವತಿ; ಕಣ್ಣೀರು ಹಾಕುತ್ತಿರುವ ಸಿಂಗಲ್ಸ್‌!

Asia-Rana Shamshad Love Story: ಯುವತಿಯೇ ದಂಬಾಲು ಬಿದ್ದು ಶಂಶಾದ್‌ರನ್ನು ವಿವಾಹವಾಗಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ. ರಾವಲ್ಪಿಂಡಿ ಮೂಲದ ಆಸಿಯಾ ತನಗಿಂತ 43 ವರ್ಷ ಹಿರಿಯ ವ್ಯಕ್ತಿಗೆ ಆಕರ್ಷಿತಳಾಗಿದ್ದಾಳೆ ಇದಕ್ಕೆ ಕಾರಣ ಶಂಶಾದ್ ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳು. ​

Written by - Puttaraj K Alur | Last Updated : Nov 10, 2024, 04:50 PM IST
  • 61 ವರ್ಷದ ಮುದುಕನೇ ಬೇಕೆಂದು ಪಟ್ಟುಹಿಡಿದು ಮದುವೆಯಾದ 18ರ ಯುವತಿ!
  • ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾಕಿಸ್ತಾನ ಮೂಲದ ಪ್ರೇಮಪಕ್ಷಿಗಳು
  • ʼನಮ್ಮ ಹೊಟ್ಟೆ ಯಾಕೆ ಉರುಸ್ತಿರೋʼ ಎಂದು ಕಣ್ಣೀರು ಹಾಕುತ್ತಿರುವ ಸಿಂಗಲ್ಸ್‌!
Viral News: 61 ವರ್ಷದ ಮುದುಕನೇ ಬೇಕೆಂದು ಪಟ್ಟು ಹಿಡಿದು ಮದುವೆಯಾದ 18ರ ಯುವತಿ; ಕಣ್ಣೀರು ಹಾಕುತ್ತಿರುವ ಸಿಂಗಲ್ಸ್‌! title=
ಮುದುಕನ ಮದುವೆಯಾದ ಯುವತಿ!

Viral News: ʼಪ್ರೀತಿ ಮಾಯೆ ಹುಷಾರುʼ ಅನ್ನೋ ಹಾಡು ನೀವೇ ಕೇಳಿಯೇ ಇರ್ತೀರಿ. ಪ್ರೀತಿಗೆ ವಯಸ್ಸಿನ ಇತಿಮಿತಿಯಿಲ್ಲ. ಕೆಲವರಿಗೆ ಯಾರ ಮೇಲೆ ಅದು ಹೇಗೆ ಪ್ರೇಮಾಂಕುರವಾಗುತ್ತೋ ಆ ದೇವರೇ ಬಲ್ಲ. ವಯಸ್ಸಾದ ಅಜ್ಜಿಯ ಮೇಲೆ ಯುವಕನಿಗೆ ಪ್ರೀತಿಯಾದರೆ, ಇನ್ನೇನು ಕೆಲವೇ ವರ್ಷ ಬದುಕುವ ತಾತನ ಮೇಲೂ ವಯಸ್ಸಿನ ಹುಡುಗಿಯರಿಗೆ ಪ್ರೇಮಾಂಕುರವಾಗಿರುತ್ತದೆ. ಮದುವೆಯಾಗಲು ಕೆಲವರಿಗೆ ವಯಸ್ಸಿನ ಅಡ್ಡಿಯೇ ಬರುವುದಿಲ್ಲ. ಪರಸ್ಪರ ಪ್ರೀತಿಸಿ ಕುಟುಂಬಸ್ಥರು, ಸಂಬಂಧಿಕರ ಸಮ್ಮುಖದಲ್ಲಿಯೇ ಕೆಲವರು ಅದ್ದೂರಿಯಾಗಿ ಮದುವೆಯಾಗುತ್ತಾರೆ. 

ಅದಕ್ಕೆ ಕೆಲವರು ʼಪ್ರೀತಿ ಮಾಯೆʼ ಎಂದರೆ, ಇನ್ನೂ ಕೆಲವರು ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅಂತಾ ಹೇಳುತ್ತಾರೆ. ಆದರೆ ಕೆಲವರ ಮದುವೆ ಸುದ್ದಿ ಕೇಳಿ ಅನೇಕರಿಗೆ ಆಘಾತವಾಗಿರುತ್ತದೆ. ಅಯ್ಯೋ ಹೀಗೂ ದೇವರು ಅವರ ಮದುವೆಯನ್ನ ನಿಶ್ಚಯ ಮಾಡಿರುತ್ತಾನಾ? ಅನ್ನೋ ಪ್ರಶ್ನೆ ಮೂಡಿರುತ್ತದೆ. ಇದಕ್ಕೆ ಸ್ಪಷ್ಟ ನಿದರ್ಶನವೆಂಬಂತೆ ಜೋಡಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಜೋಡಿಯ ಹೆಸರು ಶಂಶಾದ್ ಮತ್ತು ಆಸಿಯಾ.

ಇದನ್ನೂ ಓದಿ: ಶಾಕಿಂಗ್‌ ವಿಚಾರ ಬಹಿರಂಗ..!! ಇವಾಂಕಾ ಅಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ಟ್ರಂಪ್‌ಗೆ ಒಬ್ಬಳು ಮುಸ್ಲಿಂ ಮಗಳಿದ್ದಾಳೆ

ಹೌದು, ಪಾಕಿಸ್ತಾನ ಮೂಲದ ಈ ಪ್ರೇಮಪಕ್ಷಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಸುದ್ದಿ ಕೇಳಿ ಅವಿವಾಹಿತರು ಕಣ್ಣೀರು ಹಾಕುತ್ತಿದ್ದಾರೆ. ಏಕೆಂದರೆ ಇಲ್ಲಿ ವಧುವಿನ ವಯಸ್ಸು ಕೇವಲ 18 ಹಾಗೂ ವರನ ವಯಸ್ಸು ಬರೋಬ್ಬರಿ 61 ವರ್ಷ. ಈ ಜೋಡಿಯ ವಿವಾಹದ ಸುದ್ದಿ ಸಖತ್‌ ವೈರಲ್ ಆಗುತ್ತಿದ್ದಂತೆ ಮತ್ತೊಮ್ಮೆ ʼಪ್ರೀತಿ ಕುರುಡುʼ ಅನ್ನೋ ಡೈಲಾಗ್​ ಕೇಳಿ ಬರಲಾರಂಭಿಸಿದೆ. ಅಚ್ಚರಿಯ ಸಂಗತಿಯೆಂದರೆ ಶಂಶಾದ್​ರನ್ನು ಪ್ರೀತಿಸಿ ವಿವಾಹವಾಗಿದ್ದು ಆಸಿಯಾ. ಅಂದರೆ ಇದು ಒತ್ತಾಯದ ಮದುವೆಯಲ್ಲ. 

ಯುವತಿಯೇ ದಂಬಾಲು ಬಿದ್ದು ಶಂಶಾದ್‌ರನ್ನು ವಿವಾಹವಾಗಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ. ರಾವಲ್ಪಿಂಡಿ ಮೂಲದ ಆಸಿಯಾ ತನಗಿಂತ 43 ವರ್ಷ ಹಿರಿಯ ವ್ಯಕ್ತಿಗೆ ಆಕರ್ಷಿತಳಾಗಿದ್ದಾಳೆ ಇದಕ್ಕೆ ಕಾರಣ ಶಂಶಾದ್ ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳು. ಅಂದಹಾಗೆ ಶಂಶಾದ್ ಅವರು ರಾವಲ್ಪಿಂಡಿಯಾದ್ಯಂತ ಬಡ ಹುಡುಗಿಯರನ್ನು ಮದುವೆ ಮಾಡಿಸುತ್ತಿದ್ದರು. ಅಲ್ಲದೆ ಅನೇಕ ಕಡು-ಬಡವರಿಗೆ ನೆರವಾಗುತ್ತಿದ್ದರು. ಹೀಗೆ ಆಸಿಯಾಳ ಊರಿನಲ್ಲೂ ಒಂದಷ್ಟು ಹೆಣ್ಣು ಮಕ್ಕಳ ವಿವಾಹ ಮಾಡಿಸಿದ್ದಾರೆ. ಶಂಶಾದ್‌ರ ಈ ಸಮಾಜ ಸೇವೆಯೇ ಆಸಿಯಾಗೆ ಅವರ ಮೇಲೆ ಪ್ರೇಮಾಂಕುರವಾಗುವಂತೆ ಮಾಡಿದೆ. 

ಇದನ್ನೂ ಓದಿ: ಆಫೀಸ್ ಕೆಲಸದ ನಡುವೆಯೇ S*X ಮಾಡಿ..! ದೇಶದ ಅಧ್ಯಕ್ಷರೇ ಈ ಶಾಕಿಂಗ್‌ ಸಲಹೆ ನೀಡಲು ಕಾರಣವೇನು?

ಒಂದೆರಡು ಬಾರಿ ಶಂಶಾದ್ ಅವರನ್ನು ಆಸಿಯಾ ಭೇಟಿಯಾಗಿದ್ದಾಳೆ. ಶಂಶಾದ್ ಎಲ್ಲರೊಂದಿಗೆ ಬೆರೆಯುತ್ತ, ಸಮಾಜ ಸೇವೆ ಮಾಡಿಕೊಂಡು ಹೆಸರು ಗಳಿಸಿದ್ದರು. ಸ್ಥಳೀಯ ಜನರು ಸಹ ಅವರ ಗುಣಗಾನ ಮಾಡುತ್ತಿದ್ದರು. ಹೀಗೆ ಅವರ ಬಗ್ಗೆ ಎಲ್ಲೆಡೆ ಅತ್ಯುತ್ತಮ ಅಭಿಪ್ರಾಯವಿತ್ತು. ಹೀಗಾಗಿ ಶಂಶಾದ್‌ರ ವ್ಯಕ್ತಿತ್ವಕ್ಕೆ ಮನಸೋತ ಆಸಿಯಾ ತನ್ನ ಮನದ ಇಂಗಿತವನ್ನ ಅವರಿಗೆ ತಿಳಿಸಿದ್ದಾಳೆ. ದಿನ ಕಳೆದಂತೆ ಇಬ್ಬರ ನಡುವೆಯೂ ಪ್ರೇಮಾಂಕುರವಾಗಿದೆ. ಬಳಿಕ ಇಬ್ಬರು ಪರಸ್ಪರ ಕುಟುಂಬಸ್ಥರು, ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಈ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News