Viral Video: ಮಂಟಪದಲ್ಲೇ ನಿದ್ದೆಗೆ ಜಾರಿದಳು ಸುಂದರಾಂಗಿ ವಧು: ಎಲ್ಲರೆದುರು ಪೇಚಿಗೆ ಸಿಲುಕಿದ ವರ ಮಾಡಿದ್ದು…!

Marriage Viral video: ವೈರಲ್ ವೀಡಿಯೊದ ಆರಂಭದಲ್ಲಿ, ಲೆಹೆಂಗಾದಲ್ಲಿ ವಧು ಸೋಫಾದಲ್ಲಿ ಮಲಗಿರುವುದನ್ನು ನೀವು ನೋಡಬಹುದು. ಮದುವೆಯ ವಿಧಿವಿಧಾನಗಳ ಮೊದಲು, ವಧು ಶಾಂತಿಯುತವಾಗಿ ಪವರ್ ನ್ಯಾಪ್ (ಕೊಂಚ ಸಮಯ ನಿದ್ದೆ ಮಾಡುವುದು) ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು.

Written by - Bhavishya Shetty | Last Updated : Jun 15, 2023, 08:07 AM IST
    • ರೆಡಿಯಾಗಿದ್ದು ವಧು ನಿದ್ದೆ ಮಾಡುತ್ತಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್
    • ವೈರಲ್ ವೀಡಿಯೊದ ಆರಂಭದಲ್ಲಿ, ಲೆಹೆಂಗಾದಲ್ಲಿ ವಧು ಸೋಫಾದಲ್ಲಿ ಮಲಗಿರುವುದನ್ನು ನೀವು ನೋಡಬಹುದು
    • ಹಿನ್ನೆಲೆಯಲ್ಲಿ ”ಓಹ್ ನೋ” ಎಂದು ಮ್ಯೂಸಿಕ್ ಕ್ಲಿಪ್‌ ನೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
Viral Video: ಮಂಟಪದಲ್ಲೇ ನಿದ್ದೆಗೆ ಜಾರಿದಳು ಸುಂದರಾಂಗಿ ವಧು: ಎಲ್ಲರೆದುರು ಪೇಚಿಗೆ ಸಿಲುಕಿದ ವರ ಮಾಡಿದ್ದು…! title=
Marriage Viral video

Marriage Viral video: ಮದುವೆಯ ವಿಧಿ ವಿಧಾನಗಳಿಗೂ ಮುನ್ನ ಸುಂದರವಾಗಿ ರೆಡಿಯಾಗಿದ್ದು ವಧು ನಿದ್ದೆ ಮಾಡುತ್ತಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ವೀಡಿಯೋವನ್ನು ಇಂಟರ್ ನೆಟ್ ಬಳಕೆದಾರರು ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ.

ಇದನ್ನೂ ಓದಿ: Uniform Civil Code ಕುರಿತು ಸಮಾಲೋಚನೆ ಪ್ರಕ್ರಿಯೆಗೆ ಚಾಲನೆ ನೀಡಿದ ಕೇಂದ್ರ ಕಾನೂನು ಆಯೋಗ

ಮದುವೆಯ ದಿನದಂದು ತುಂಬಾ ಕೆಲಸವಿರುತ್ತೆದೆ. ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯು ಸುಸ್ತಾಗಿರುತ್ತಾನೆ. ರಾತ್ರಿಯಲ್ಲಿ ಮದುವೆ ಸಮಾರಂಭವು ನಡೆದಾಗ ನಿದ್ದೆಗೆ ಅಡ್ಡಿಯಾಗುತ್ತದೆ. ಅಂತೆಯೇ ಇಲ್ಲೊಬ್ಬಳು ವಧು ಸುಸ್ತಾಗಿದ್ದು, ಮಂಟಪದಲ್ಲೇ ನಿದ್ದೆಗೆ ಜಾರಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಈ ವೈರಲ್ ವೀಡಿಯೊದ ಆರಂಭದಲ್ಲಿ, ಲೆಹೆಂಗಾದಲ್ಲಿ ವಧು ಸೋಫಾದಲ್ಲಿ ಮಲಗಿರುವುದನ್ನು ನೀವು ನೋಡಬಹುದು. ಮದುವೆಯ ವಿಧಿವಿಧಾನಗಳ ಮೊದಲು, ವಧು ಶಾಂತಿಯುತವಾಗಿ ಪವರ್ ನ್ಯಾಪ್ (ಕೊಂಚ ಸಮಯ ನಿದ್ದೆ ಮಾಡುವುದು) ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು.

ಮದುವೆಯಲ್ಲಿ ಅನೇಕ ಬಾರಿ ವಧು-ವರರು ಓಡಾಡುತ್ತಿರುವುದರಿಂದ ದಣಿದಿದ್ದಾರೆ ಎಂದೆನಿಸುತ್ತದೆ. ಒಂದು ಬದಿಯಲ್ಲಿ ವಧು ನಿದ್ದೆ ಮಾಡುತ್ತಿದ್ದರೆ, ಇನ್ನೊಂದು ಬದಿಯಲ್ಲಿ ವರನು ಮಂಟಪದ ಮೇಲೆ ಕುಳಿತು ವಿಧಿವಿಧಾನಗಳನ್ನು ಮಾಡುವುದನ್ನು ನಾವು ನೋಡಬಹುದು. ಪಂಡಿತರು ಅವರೊಂದಿಗೆ ಕುಳಿತು ಧಾರ್ಮಿಕ ವಿಧಿವಿಧಾನಗಳನ್ನು ಮಾಡಿಸುತ್ತಿದ್ದಾರೆ. ಈ ತಮಾಷೆಯ ಕ್ಷಣವನ್ನು ಸಂಬಂಧಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ವೀಡಿಯೊವನ್ನು ರೆಕಾರ್ಡ್ ಮಾಡಿದ ನಂತರ, ಹಿನ್ನೆಲೆಯಲ್ಲಿ ”ಓಹ್ ನೋ” ಎಂದು ಮ್ಯೂಸಿಕ್ ಕ್ಲಿಪ್‌ ನೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಪೇಜ್  'ಕ್ಯಾಂಡಿಡ್ ಇಂಪ್ರೆಷನ್ಸ್' ವೀಡಿಯೊವನ್ನು "ನಿದ್ರೆ ಅಗತ್ಯವಿದ್ದಾಗ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಆನ್‌ಲೈನ್‌ ನಲ್ಲಿ ಹಂಚಿಕೊಂಡಾಗಿನಿಂದ, ವೀಡಿಯೊವು ಲಕ್ಷ ವೀಕ್ಷಣೆಗಳೊಂದಿಗೆ ಸುಮಾರು 2 ಲಕ್ಷ ಲೈಕ್‌ ಗಳನ್ನು ಗಳಿಸಿದೆ.

 

 

ಇದನ್ನೂ ಓದಿ: IND vs WI: ರೋಹಿತ್ ಬದಲಿಗೆ ಟೆಸ್ಟ್ ಟೀಂನಲ್ಲಿ ಈ ಮಾರಕ ಬ್ಯಾಟ್ಸ್‌ಮನ್!! 'ಹಿಟ್‌ಮ್ಯಾನ್' ಭವಿಷ್ಯಕ್ಕೆ ಕುತ್ತು?

ವೈರಲ್ ವೀಡಿಯೊ ಆಕೆಯ ಶಾಂತಿಯುತ ನಿದ್ರೆಯನ್ನು ಪ್ರೀತಿಸುವ ನೆಟಿಜನ್‌ ಗಳ ಹೃದಯವನ್ನು ಮುಟ್ಟಿದೆ. ಕೆಲವು ತಿಂಗಳುಗಳ ಹಿಂದೆಯೂ ವಧು ಈ ರೀತಿಯೇ ಮಲಗಿದ್ದಳು. ಆಕೆ ಕೆಲವು ಸೆಕೆಂಡುಗಳ ಕಾಲ ನಿದ್ರಿಸಿ, ನಂತರ ಇದ್ದಕ್ಕಿದ್ದಂತೆ ಎಚ್ಚರಗೊಂಡು ಸುತ್ತಲೂ ನೋಡುತ್ತಾಳೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News