Former India Junior Hockey Player: ಹೆಚ್ಚಿನ ಭಾರತೀಯರಿಗೆ ಕ್ರೀಡೆ ಎಂದರೆ ಕ್ರಿಕೆಟ್. ಕ್ರಿಕೆಟ್ನ ಹೊರತಾಗಿ, ಆಟಗಾರರು ತಮ್ಮ ದೇಶವನ್ನು ಪ್ರತಿನಿಧಿಸುವ ಅನೇಕ ಕ್ರೀಡೆಗಳಿವೆ. ರಾಜ್ಯ ಮಟ್ಟದ ಭರವಸೆಯ ಪಂಜಾಬ್ ಹಾಕಿ ಆಟಗಾರ ಪರಮ್ಜಿತ್ ಕುಮಾರ್ ಒಮ್ಮೆ ಪಂಜಾಬ್ಗೆ ರಾಜ್ಯ ಮಟ್ಟದ ಹಾಕಿ ಆಟಗಾರನಾಗಿ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು. ಅಲ್ಲದೇ ಜೂನಿಯರ್ ಹಾಕಿ ನ್ಯಾಷನಲ್ಸ್ನಲ್ಲಿ ಪದಕಗಳನ್ನು ಗೆದ್ದರು. ಅವರು 2007 ರಲ್ಲಿ ಭಾರತೀಯ ಜೂನಿಯರ್ ಹಾಕಿ ತಂಡದ ಭಾಗವಾಗಿದ್ದರು. ಆದರೆ, ಇಂದು ಫರೀದ್ಕೋಟ್ ಮಂಡಿಯಲ್ಲಿ ಕೂಲಿ ಕಾರ್ಮಿಕನಾಗಿ ದಿನದ ಪಾಳಿಯಲ್ಲಿ ಗೋಣಿ ಚೀಲಗಳನ್ನು ಲೋಡ್ ಮತ್ತು ಅನ್ಲೋಡ್ ಮಾಡುತ್ತಾರೆ.
ಮಾಧ್ಯಮ ವರದಿಗಳ ಪ್ರಕಾರ, ಮಾಜಿ ಹಾಕಿ ಆಟಗಾರನು ಪ್ರತಿ ಗೋಣಿಚೀಲಕ್ಕೆ ರೂ 1.25 ಗಳಿಸುತ್ತಾನೆ ಮತ್ತು ಜೀವನೋಪಾಯಕ್ಕಾಗಿ ದಿನಕ್ಕೆ 450 ಗೋಣಿಚೀಲಗಳನ್ನು ಸಾಗಿಸುತ್ತಾರೆ. ರಾಜ್ಯ ಮಟ್ಟದ ಹಾಕಿ ಆಟಗಾರನ ಈ ದುಸ್ಥಿತಿಗೆ ಸಾಮಾಜಿಕ ಜಾಲತಾಣ ಬಳಕೆದಾರರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಪರಮ್ಜಿತ್ ಕುಮಾರ್ಗೆ ಸಹಾಯ ಮಾಡುವಂತೆ ಕೆಲವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇತರರು ಆಟಗಾರನಿಗೆ ಸಹಾಯ ಮಾಡುವ ಮಾರ್ಗಗಳನ್ನು ಹುಡುಕಲು ಮುಂದೆ ಬಂದಿದ್ದಾರೆ ಮತ್ತು ಪರಿಸ್ಥಿತಿಯ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IND vs NZ ಏಕದಿನ ಸರಣಿ ಜೊತೆ ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನವೂ ಕೊನೆಗೊಂಡಿತು!
"ನಮ್ಮ ರಾಷ್ಟ್ರೀಯ ಕ್ರೀಡಾ ಆಟಗಾರನ ಅವಸ್ಥೆಯನ್ನು ನೋಡಿ ನಾಚಿಕೆಯಾಗುತ್ತಿದೆ, ಆದರೆ ಇದು ಆಶ್ಚರ್ಯವೇನಿಲ್ಲ. ಪೋಷಕರು ತಮ್ಮ ಮಕ್ಕಳಿಗೆ ಕ್ರೀಡೆಯನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಳ್ಳಲು ಪ್ರೋತ್ಸಾಹಿಸದಿರಲು ಇದೇ ಕಾರಣ" ಎಂದು ಟ್ವೀಟ್ ನಲ್ಲಿ ಒಬ್ಬ ಬಳಕೆದಾರರು ಬರೆದಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಪರಮ್ಜಿತ್ ಕುಮಾರ್, ಅವರ ಕೆಲಸದ ಬಗ್ಗೆ ಅನೇಕರಿಗೆ ತಿಳಿದಿಲ್ಲ, ಆದರೆ ಅದು ತಿಳಿದ ನಂತರ ಅವರು ಯಾವಾಗಲೂ ತಮ್ಮ ಬೆನ್ನು ತಟ್ಟುತ್ತಾರೆ. ಈ ಆಟದಿಂದ ಸಿಕ್ಕ ಏಕೈಕ ಬಹುಮಾನ ಇದಾಗಿದೆ ಎಂದು ಹೇಳಿದ್ದಾರೆ.
ಪರಮ್ಜಿತ್ ಫರೀದ್ಕೋಟ್ನಲ್ಲಿ ಬೆಳೆದರು ಮತ್ತು ಸರ್ಕಾರಿ ಬಿಜೇಂದ್ರ ಕಾಲೇಜಿನಲ್ಲಿ ತರಬೇತುದಾರ ಬಲ್ತೇಜ್ ಇಂದ್ಪಾಲ್ ಸಿಂಗ್ ಬಬ್ಬು ಅವರಿಂದ ಹಾಕಿ ತರಬೇತಿ ಪಡೆದರು. ಪರಮ್ಜಿತ್ 2004 ರಲ್ಲಿ ಪಟಿಯಾಲದ NIS ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ತರಬೇತಿ ಕೇಂದ್ರಕ್ಕೆ ಆಯ್ಕೆಯಾದರು. ನಂತರ 2007 ರಲ್ಲಿ ಅವರು ಪಟಿಯಾಲಾದ NIS ನಲ್ಲಿ ಹಾಕಿಯ ಉತ್ಕೃಷ್ಟತಾ ಕೇಂದ್ರಕ್ಕೆ ಆಯ್ಕೆಯಾದರು.
ಇದನ್ನೂ ಓದಿ: Video: ರೋಹಿತ್ ಶತಕ ಸಿಡಿಸುವುದನ್ನು ತಡೆಯಲು ಕಿವೀಸ್ ಬೌಲರ್ ಚೀಪ್ ಟ್ರಿಕ್.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.