Flying Fish Video: ಹಕ್ಕಿಯಂತೆ ಗಾಳಿಯಲ್ಲಿ ಹಾರುವ ಮೀನು.. ಅಪರೂಪದ ಜಲಚರದ ವಿಡಿಯೋ ಇಲ್ಲಿದೆ ನೋಡಿ! ಇದರ ವಿಶೇಷತೆಗಳೇನು ಗೊತ್ತಾ?

Flying Fish Video: ಸಮುದ್ರ ಮತ್ತು ನದಿಗಳಲ್ಲಿ ಮೀನುಗಳು ಈಜುವುದನ್ನು ಅಥವಾ ಡೈವಿಂಗ್ ಮಾಡುವುದನ್ನು ನೀವು ಹೆಚ್ಚಾಗಿ ನೋಡಿರಬೇಕು. ಆದರೆ ಹಕ್ಕಿಯಂತೆ ಹಾರಾಡುವ ಮೀನನ್ನು ನೋಡಿದ್ದೀರಾ?

Written by - Chetana Devarmani | Last Updated : Oct 28, 2024, 01:37 PM IST
  • ಹಕ್ಕಿಯಂತೆ ಹಾರಾಡುವ ಮೀನನ್ನು ನೋಡಿದ್ದೀರಾ?
  • ಅಪರೂಪದ ಜಲಚರದ ವಿಡಿಯೋ ಇಲ್ಲಿದೆ ನೋಡಿ!
  • ಇದರ ವಿಶೇಷತೆಗಳೇನು ಗೊತ್ತಾ?
Flying Fish Video: ಹಕ್ಕಿಯಂತೆ ಗಾಳಿಯಲ್ಲಿ ಹಾರುವ ಮೀನು.. ಅಪರೂಪದ ಜಲಚರದ ವಿಡಿಯೋ ಇಲ್ಲಿದೆ ನೋಡಿ! ಇದರ ವಿಶೇಷತೆಗಳೇನು ಗೊತ್ತಾ? title=

Marine Life: ಸಮುದ್ರ ಮತ್ತು ನದಿಗಳಲ್ಲಿ ಮೀನುಗಳು ಈಜುವುದನ್ನು ಅಥವಾ ಡೈವಿಂಗ್ ಮಾಡುವುದನ್ನು ನೀವು ಹೆಚ್ಚಾಗಿ ನೋಡಿರಬೇಕು. ಆದರೆ ಹಕ್ಕಿಯಂತೆ ಹಾರಾಡುವ ಮೀನನ್ನು ನೋಡಿದ್ದೀರಾ?. ಇದು ಅಚ್ಚರಿ ಎನಿಸಬಹುದು. ಆದರೆ ಕೆಲವೊಮ್ಮೆ ಕೆಲವು ಮೀನುಗಳು ನೀರಿನ ಮೇಲೆ ಹಾರುತ್ತವೆ. ನೂರಾರು ಮೀಟರ್‌ಗಳಷ್ಟು ಎತ್ತರದಲ್ಲಿ ಅತಿ ವೇಗದಲ್ಲಿ ಹಾರುತ್ತವೆ. ಕೆಲವು ಮೀನುಗಳು 650 ಅಡಿಗಳವರೆಗೆ ಹಾರಬಲ್ಲವು.

ಇದಲ್ಲದೇ 1300 ಅಡಿ ಎತ್ತರಕ್ಕೆ ಹಾರುವ ಮೀನುಗಳೂ ಇವೆ. ಈ ಮೀನು ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ನೀರಿನ ಮೇಲೆ ಹಾರುತ್ತದೆ. ಇದರ ಹೆಸರು ಎಕ್ಸೋಕೋಟೈಡ್. ಪ್ರಪಂಚದಾದ್ಯಂತ ಈ ಮೀನಿನ ಸುಮಾರು 64 ಜಾತಿಗಳಿವೆ. ಅವು ಪಕ್ಷಿಗಳಂತೆ ಹಾರಲಾರವು. ಆದರೆ ಅವು ನೀರಿನ ಮೇಲ್ಮೈಯಲ್ಲಿ ಹಾರುತ್ತವೆ. ನೀರಿನ ಮೇಲ್ಮೈಗೆ ಬಂದು ಜಿಗಿಯುತ್ತವೆ. ಇವುಗಳಿಗೆ ಹಕ್ಕಿಗಳಂತೆ ರೆಕ್ಕೆ ಇದ್ದು, ತನ್ನ ರೆಕ್ಕೆಗಳ ಸಹಾಯದಿಂದ ನೀರಿನ ಮೇಲ್ಮೈಯಿಂದ ಗಾಳಿಯಲ್ಲಿ ಬಹಳ ದೂರದವರೆಗೆ ವೇಗವಾಗಿ ಹಾರುತ್ತವೆ.  

ಇದನ್ನೂ ಓದಿ:Viral Video: ಈ ಮುದ್ದಾದ ಆನೆ ಮರಿಗೆ ನೀವೇನೆಂದು ಹೆಸರಿಡ್ತಿರಾ..? ಕ್ಯೂಟ್‌ ವಿಡಿಯೋ ನೋಡಿ ಹೇಳಿ..!

ಸಮುದ್ರದ ಮೇಲ್ಮೈ ಮೇಲೆ ಗಾಳಿಯಲ್ಲಿ ಹಾರುವ ಮೀನು ಜಾತಿಗಳಲ್ಲಿ ಕತ್ತಿಮೀನು, ಮ್ಯಾಕೆರೆಲ್,  ಮಾರ್ಲಿನ್ ಸೇರಿವೆ. ಆದರೆ ಗಾಳಿಯಲ್ಲಿ ಹಾರುವುದು ಈ ಮೀನುಗಳಿಗೆ ಅಪಾಯಕಾರಿ. ಏಕೆಂದರೆ ಅವು ಮತ್ತೆ ಪರಭಕ್ಷಕ ಪಕ್ಷಿಗಳಿಗೆ ಆಹಾರವಾಗಬಹುದು.  

ಇಂಥಹ ಮೀನುಗಳ ಸಾಮಾನ್ಯ ಮೀನುಗಳಿಗಿಂತ ಕೊಂಚ ವಿಭಿನ್ನವಾಗಿರುತ್ತವೆ. ಸಮುದ್ರದ ಒಳಗೆ ಇರುವ ಮೀನುಗಳಿಗಿಂತೆ ಭಿನ್ನವಾದ ರೆಕ್ಕೆಗಳನ್ನು ಹೊಂದಿರುತ್ತವೆ. ಈ ಮೀನುಗಳ ರೆಕ್ಕೆಗಳು ಹಾರಾಟಕ್ಕೆ ಅನುಕೂಲವಾಗುವಂತೆ ಇರುತ್ತವೆ. ಈ ಮೀನುಗಳಲ್ಲಿ ಹೆಚ್ಚಿನವು ಸಮುದ್ರ ಮತ್ತು ಸಾಮಾನ್ಯ ನೀರಿನಲ್ಲಿ ವಾಸಿಸುತ್ತವೆ.

ಇದನ್ನೂ ಓದಿ:ಹರಿದಾಡುವ ಹಾವಲ್ಲ, ಹಾರಾಡುವ ಹಸಿರು ಹಾವಿನ ಅಪರೂಪದ ದಶ್ಯ ಇಲ್ಲಿದೆ.. ಮಿಸ್‌ ಮಾಡದೇ ಒಮ್ಮೆ ನೋಡಿ ವಿಡಿಯೋ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News