ವಿವಾಹದ ವೇಳೆ ವಧುವಿಗೆ ಸಿಹಿ ತಿನ್ನಿಸಲು ಮುಂದಾದ ವರ, ನಿರಾಕರಿಸಿದ ವಧು, ನಂತರ ನಡೆದಿದ್ದು ಮಹಾಭಾರತ!

Bride Groom Viral Video ಈ ವೀಡಿಯೊದಲ್ಲಿ, ಮದುವೆಯ ವರಮಾಲೆ ಸಮಾರಂಭದಲ್ಲಿ, ವರನು ತನ್ನ ವಧುವಿಗೆ ಹಾರವನ್ನು ಹಾಕಿದ ಬಳಿಕ, ಆಕೆಗೆ ಸಿಹಿ ತಿನ್ನಿಸಲು ಮುಂದಾಗುತ್ತಾನೆ, ಅದರ ಮೇಲೆ ವಧು ಬಾಯಿ ತೆರೆಯುವುದಿಲ್ಲ ಮತ್ತು ಅದನ್ನು ತಿನ್ನುವುದಿಲ್ಲ. (Viral News In Kannada)  

Written by - Nitin Tabib | Last Updated : Dec 2, 2023, 05:10 PM IST
  • ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನರು ತೀವ್ರತರವಾದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
  • ಒಬ್ಬ ಬಳಕೆದಾರ, 'ನಿಮಗೆ ಮದುವೆಯಾಗಲು ಇಷ್ಟವಿಲ್ಲದಿದ್ದರೆ, ನೀವು ಮದುವೆಯಾಗಬಾರದು' ಎಂದು ಬರೆದಿದ್ದಾರೆ.
  • ಮತ್ತೊಬ್ಬ ಬಳಕೆದಾರ, 'ಮದುವೆಗೆ ಮುಂಚೆಯೇ ಈ ಸ್ಥಿತಿಯಾಗಿದ್ದರೆ, ಮದುವೆಯ ನಂತರ ಏನಾಗುತ್ತದೆ' ಎಂದು ಬರೆದಿದ್ದಾರೆ.
ವಿವಾಹದ ವೇಳೆ ವಧುವಿಗೆ ಸಿಹಿ ತಿನ್ನಿಸಲು ಮುಂದಾದ ವರ, ನಿರಾಕರಿಸಿದ ವಧು, ನಂತರ ನಡೆದಿದ್ದು ಮಹಾಭಾರತ! title=

ನವದೆಹಲಿ: ಮದುವೆಯ ಸೀಸನ್ ಆರಂಭಗೊಂಡಾಗಿನಿಂದ ಇತ್ತೀಚಿನ ದಿನಗಳಲ್ಲಿ, ಮದುವೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಕೆಲವು ವೀಡಿಯೊಗಳು ಸಾಕಷ್ಟು ತಮಾಷೆಯಿಂದ ಕೂಡಿರುತ್ತವೆ ಮತ್ತು ಅವುಗಳನ್ನು ನೋಡಿದ ಜನರಿಗೆ ತಮ್ಮ ನಗು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಧು-ವರರು ಪರಸ್ಪರ ಮುನಿಸಿಕೊಂಡಂತೆ ಕಾಣುತ್ತಿದ್ದಾರೆ. ಮದುವೆ ವೇದಿಕೆಯ ಮೇಲೆಯೇ ವಧು-ವರರು ಇಂತಹ ಕೆಲಸಗಳನ್ನು ಮಾಡುತ್ತಾರೆ ಎಂದರೆ ಅಲ್ಲಿದ್ದವರಿಗೂ ಅದನ್ನು ನಂಬಲು ಆಗುತ್ತಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಪೋಸ್ಟ್‌ಗೆ ಜನರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. (Viral News In Kannada)

ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಮದುವೆಯ ವರಮಾಲೆ ಸಮಾರಂಭದಲ್ಲಿ, ವರನು ತನ್ನ ವಧುವಿಗೆ ಹಾರವನ್ನು ಹಾಕಿದ ಬಳಿಕ, ಆಕೆಗೆ ಸಿಹಿ ತಿನ್ನಿಸಲು ಮುಂದಾಗುತ್ತಾನೆ, ಅದರ ಮೇಲೆ ವಧು ಬಾಯಿ ತೆರೆಯುವುದಿಲ್ಲ ಮತ್ತು ಅದನ್ನು ತಿನ್ನುವುದಿಲ್ಲ. ಇದರ ಮೇಲೆ, ವರನು ಕೋಪಿಸಿಕೊಂಡು ವಧುವಿನ ಮುಖದ ಮೇಲೆ ಸಿಹಿ ಎಸೆಯುತ್ತಾನೆ. ಹೀಗಿರುವಾಗ, ಇದಾದ ಬಳಿಕ ವಧು ಕೂಡ ವರ ಮುಖಕ್ಕೆ ಹೊಡೆದ ಸಿಹಿಯನ್ನು ಎತ್ತಿಕೊಂಡು ಅವನ ಮುಖಕ್ಕೆ ಹೊಡೆದು ಸೇಡು ತೀರಿಸಿಕೊಳ್ಳುತ್ತಾಳೆ. ಆದರೆ ಇದರ ನಂತರ ಏನಾಗುತ್ತದೆ ಎಂಬುದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ವಧುವಿನ ಈ ಕೃತ್ಯಕ್ಕೆ ವರನ ಪಿತ್ತ ನೆಟ್ಟಿಗೆರುತ್ತದೆ ಮತ್ತು ವೇದಿಕೆಯಲ್ಲೇ ಎಲ್ಲರ ಸಮ್ಮುಖದಲ್ಲಿ ವಧುವಿಗೆ ಎರಡು ಮೂರು ಬಾರಿ ಕಪಾಳಮೋಕ್ಷ ಮಾಡಿ ಬಿಡುತ್ತಾನೆ. ಇದಾದ ಬಳಿಕ ಮದುವೆ ಸ್ಥಳದಲ್ಲಿ ಗಲಾಟೆ ನಡೆಯುತ್ತಿರುವುದು ಕಂಡು ಬಂದಿದೆ.

ವೈರಲ್ ಆಗಿರುವ ವಿಡಿಯೋಗೆ ಜನ ಇಂತಹ ಪ್ರತಿಕ್ರಿಯೆ ನೀಡುತ್ತಿದ್ದಾರೆ
ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನರು ತೀವ್ರತರವಾದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಬಳಕೆದಾರ, 'ನಿಮಗೆ ಮದುವೆಯಾಗಲು ಇಷ್ಟವಿಲ್ಲದಿದ್ದರೆ, ನೀವು ಮದುವೆಯಾಗಬಾರದು' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, 'ಮದುವೆಗೆ ಮುಂಚೆಯೇ ಈ ಸ್ಥಿತಿಯಾಗಿದ್ದರೆ, ಮದುವೆಯ ನಂತರ ಏನಾಗುತ್ತದೆ' ಎಂದು ಬರೆದಿದ್ದಾರೆ. ಇದೇ ಮೇಲೆ ಮೂರನೇ ಬಳಕೆದಾರ 'ತುಂಬಾ ತಮಾಷೆಯ ವೀಡಿಯೊ.' ಎಂದು ಬರೆದಿದ್ದಾನೆ. 

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News