Viral Video: ಬಿರಿಯಾನಿ ಪ್ರಿಯರು ಈ ವಿಡಿಯೋ ನೋಡಬೇಡಿ: ಹೃದಯ ಒಡೆಯುವುದು ಗ್ಯಾರಂಟಿ!

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆಯಲ್ಲೂ ನೀರು ತುಂಬಿದೆ. ಆ ನೀರಿನಲ್ಲಿ ಬಿರಿಯಾನಿ ತುಂಬಿರುವ ದೊಡ್ಡ ಎರಡು ಪಾತ್ರೆಗಳು ತೇಲುತ್ತಾ ಹೋಗುತ್ತಿದೆ. ಇದನ್ನು ಕಂಡ ಬಿರಿಯಾನಿ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. 

Written by - Bhavishya Shetty | Last Updated : Aug 1, 2022, 04:00 PM IST
  • ನೀರಿನಲ್ಲಿ ತೇಲುತ್ತಾ ಹೋಗುತ್ತಿವೆ ಬಿರಿಯಾನಿ ತುಂಬಿದ ಎರಡು ಪಾತ್ರೆ
  • ಟ್ವಿಟರ್‌ನಲ್ಲಿ ವೇಗವಾಗಿ ಹರಡುತ್ತಿದೆ ಈ ವಿಡಿಯೋ
  • ಬಿರಿಯಾನಿ ಕೊಚ್ಚಿಹೋಗುವುದನ್ನು ಕಂಡ ಜನರಿಗೆ ಬೇಸರ
Viral Video: ಬಿರಿಯಾನಿ ಪ್ರಿಯರು ಈ ವಿಡಿಯೋ ನೋಡಬೇಡಿ: ಹೃದಯ ಒಡೆಯುವುದು ಗ್ಯಾರಂಟಿ!  title=
Biryani

ಹೈದರಾಬಾದ್‌ನ ಬಿರಿಯಾನಿಯ ರುಚಿ ಮತ್ತು ನೋಟವು ಯಾರ ಬಾಯಲ್ಲಿಯೂ ನೀರೂರಿಸುತ್ತದೆ. ಇಲ್ಲಿ ಬಿರಿಯಾನಿ ತಿನ್ನುವ ಅವಕಾಶವನ್ನು ಯಾವುದೇ ಆಹಾರ ಪ್ರೇಮಿಗಳು ಕಳೆದುಕೊಳ್ಳುವುದಿಲ್ಲ. ನೀವೂ ಇಂತಹ ಆಹಾರ ಪ್ರೇಮಿಗಳಾಗಿದ್ರೆ ಈ ವಿಡಿಯೋ ನೋಡಿದ ನಂತರ ನಿಮಗೆ ಬೇಸರವಾಗುತ್ತದೆ. ಭಾರತದಲ್ಲಿ ಈಗ ಮಳೆಗಾಲ ಅಬ್ಬರ ಜೋರಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಜನರು ಹೊರಗಡೆಯಿಂದ ಆಹಾರವನ್ನು ಆರ್ಡರ್ ಮಾಡುತ್ತಾರೆ. ಆದರೆ ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಂದ ಆರ್ಡರ್‌ ಮಾಡುವ ಫುಡ್‌ಗಳು ಮನೆಗೆ ತಲುಪುವುದು ಕಷ್ಟವಾಗುತ್ತದೆ. ಇನ್ನೊಂದೆಡೆ ಈ ವಿಡಿಯೋದಲ್ಲಿ ಬಿರಿಯಾನಿ ತುಂಬಿರುವ ದೊಡ್ಡ ಎರಡು ಪಾತ್ರೆಗಳು ನೀರಿನಲ್ಲಿ ತೇಲುತ್ತಾ ಹೋಗುತ್ತಿದೆ. ಈ ದೃಶ್ಯ ಆಹಾರ ಪ್ರಿಯರು ಅದರಲ್ಲೂ ಬಿರಿಯಾನಿ ಪ್ರಿಯರಿಗೆ ನೋವುಂಟು ಮಾಡಿದೆ. 

ಇದನ್ನೂ ಓದಿ: ಹಲವು ವರ್ಷಗಳ ಬಳಿಕ ನಾಗ ಪಂಚಮಿಯಂದು ಈ ಅದ್ಭುತ ಯೋಗ ನಿರ್ಮಾಣಗೊಳ್ಳುತ್ತಿದೆ

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆಯಲ್ಲೂ ನೀರು ತುಂಬಿದೆ. ಆ ನೀರಿನಲ್ಲಿ ಬಿರಿಯಾನಿ ತುಂಬಿರುವ ದೊಡ್ಡ ಎರಡು ಪಾತ್ರೆಗಳು ತೇಲುತ್ತಾ ಹೋಗುತ್ತಿದೆ. ಇದನ್ನು ಕಂಡ ಬಿರಿಯಾನಿ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. 

 

ಈ ವಿಡಿಯೋದಲ್ಲಿ ಎರಡು ಬಿರಿಯಾನಿ ಪಾತ್ರೆಗಳು ಮಳೆಯ ನೀರಿನಲ್ಲಿ ಹರಿಯುತ್ತಿರುವುದು ಕಂಡು ಬಂದಿದೆ. ಬಿರಿಯಾನಿ ಪ್ರಿಯರು ಈ ವೀಡಿಯೋ ನೋಡಿದ್ರೆ ಬೇಜಾರು ಮಾಡಿಕೊಳ್ಳಬಹುದು. ಈ ವೀಡಿಯೊಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. 

ಇದನ್ನೂ ಓದಿ: ಮಾಜಿ ಗೃಹ ಸಚಿವರ ಮನೆಯಲ್ಲೇ ಕಳ್ಳನ ಕೈಚಳಕ: ಕೊನೆಗೂ ಸಿಕ್ಕಿಬಿದ್ದ ಆರೋಪಿ

ಈ ವಿಡಿಯೋ ಟ್ವಿಟರ್‌ನಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಕೇವಲ 13 ಸೆಕೆಂಡುಗಳ ಈ ವೀಡಿಯೊವನ್ನು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಈ ವಿಡಿಯೋದಲ್ಲಿ ಹಲವರು ಜೋಕ್‌ ಮಾಡುತ್ತಿರುವುದು ಕಂಡುಬಂದಿದೆ. ಕಾಮೆಂಟ್ ವಿಭಾಗದಲ್ಲಿ, ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News