ಮಗಳ ಮದುವೆಯಲ್ಲಿ ಮಾಜಿ ಪತ್ನಿಗೆ ಸ್ವೀಟ್ ಕಿಸ್ ಕೊಟ್ಟ ಅಮೀರ್‌ ಖಾನ್‌: ವೈರಲ್‌ ವಿಡಿಯೋ!

Amir Khan Daughter Marriage: ಬಾಲಿವುಡ್ ಸ್ಟಾರ್‌ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಮದುವೆಯ ಸಂತೋಷದ ಸಂದರ್ಭದಲ್ಲಿ, ಮಾಜಿ ಪತ್ನಿ  ರೀನಾ ದತ್ತಾರಾ ಕೆನ್ನೆಗೆ ಅಮೀರ್ ಖಾನ್ ಮುತ್ತು ಕೊಟ್ಟಿದ್ದು, ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.

Written by - Zee Kannada News Desk | Last Updated : Jan 4, 2024, 11:07 AM IST
  • ಅಮೀರ್ ಖಾನ್ ಪುತ್ರಿ ಇರಾ ಖಾನ್ ನೂಪುರ್ ಶಿಖರೆಯನ್ನು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಜನವರಿ 3 ಬುಧವಾರದಂದು ಆಪ್ತ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
  • ಮದುವೆಯ ಸಂತೋಷದ ಸಂದರ್ಭದಲ್ಲಿ ಅಮೀರ್ ಅವರ ಮೊದಲ ಪತ್ನಿ ರೀನಾ ದತ್ತಾ, ಪುತ್ರ ಜುನೈದ್ ಖಾನ್ ಕೂಡಾ ಪಾಲುಗೊಂಡಿದ್ದರು.
  • ಮಾಜಿ ಪತ್ನಿ ರೀನಾ ದತ್ತಾರಾ ಕೆನ್ನೆಗೆ ಅಮೀರ್ ಖಾನ್ ಮುತ್ತು ಕೊಟ್ಟಿರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.
ಮಗಳ ಮದುವೆಯಲ್ಲಿ ಮಾಜಿ ಪತ್ನಿಗೆ ಸ್ವೀಟ್ ಕಿಸ್ ಕೊಟ್ಟ ಅಮೀರ್‌ ಖಾನ್‌: ವೈರಲ್‌ ವಿಡಿಯೋ! title=

Amir Khan Kisses His First Wife: ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ನೂಪುರ್ ಶಿಖರೆಯನ್ನು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಜನವರಿ 3 ಬುಧವಾರದಂದು  ವಿವಾಹವಾಗಿದ್ದು, ಕಾರ್ಯಕ್ರಮ ಆಪ್ತ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಈ ವಿವಾಹ ನಡೆದಿದೆ. ಈ ಸಮಾರಂಭದ ವಿಶೇಷವೆಂದರೆ ಈ ಮದುವೆಯಲ್ಲಿ ಇರಾ ಖಾನ್ ತಾಯಿ ಅಂದರೆ ಅಮೀರ್ ಖಾನ್ ಮೊದಲನೇ ಮಾಜಿ ಪತ್ನಿ ಮಾತ್ರವಲ್ಲದೆ, ಎರಡನೇ ಮಾಜಿ ಪತ್ನಿ ಕಿರಣ್ ರಾವ್ ಕೂಡಾ ಮಗನೊಂದಿಗೆ ಭಾಗಿಯಾಗಿದ್ದರು. 

ಅಮೀರ್ ಖಾನ್ ಮಗಳ ಮದುವೆಗಾಗಿ ಕೆನೆ ಬಣ್ಣದ ಶೇರ್ವಾನಿ ಮತ್ತು ಗುಲಾಬಿ ಬಣ್ಣದ ಪೇಟವನ್ನು ಧರಿಸಿದ್ದು, ಅವರ ಮೊದಲ ಪತ್ನಿ ರೀನಾ ದತ್ತಾ ಬಿಳಿ ನೀಲಿ ಮತ್ತು ಗೋಲ್ಡನ್ ಉಡುಪಿನಲ್ಲಿ ಕಾಣಿಸಿಕೊಂಡರೆ, ಕಿರಣ್ ಗೋಲ್ಡನ್ ಮತ್ತು ಗ್ರೀನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡರು. ಇರಾ ಖಾನ್ ಗುಲಾಬಿ ಮತ್ತು ನೀಲಿ ಬಣ್ಣದ ಧೋತಿ ಪ್ಯಾಂಟ್‌ಗಳೊಂದಿಗೆ ಡೀಪ್ ಕಟ್ ಚೋಲಿ ಮತ್ತು ಸಿಲ್ವರ್ ದುಪಟ್ಟಾವನ್ನೂ ಧರಿಸಿ ಸಿಂಪಲ್ ಆಗಿ ಸುಂದರವಾಗಿ ಗಮನ ಸೆಳೆದಿದ್ದಾರೆ. ಇತ್ತ ವರ ನೂಪುರ್ ನೀಲಿ ಬಂಧಗಾಲಾ ಸೂಟ್ ಧರಿಸಿದ್ದರು.

ಇದನ್ನೂ ಓದಿ: ಟಾಲಿವುಡ್‌ನಲ್ಲಿ ಸಂಕ್ರಾಂತಿ ಸಮರ: 'ಗುಂಟೂರು ಖಾರಂ' Vs 'ಸೈಂಧವ'!

ಮದುವೆಯ ಸಂತೋಷದ ಸಂದರ್ಭದಲ್ಲಿ ಅಮೀರ್ ಅವರ ಮೊದಲ ಪತ್ನಿ ರೀನಾ ದತ್ತಾ, ಪುತ್ರ ಜುನೈದ್ ಖಾನ್ ಕೂಡಾ ಪಾಲುಗೊಂಡಿದ್ದು, ಹಾಗೆ ಅಮೀರ್ ಎರಡನೇ ಪತ್ನಿ ಕಿರಣ್ ರಾವ್ ಮತ್ತು ಮಗ ಆಜಾದ್ ರಾವ್ ಖಾನ್ ಕೂಡ ಈ ಸಂಭ್ರಮದಿಂದ ಭಾಗವಹಿಸಿದ್ದಾರೆ. ಮದುವೆಯ ನಂತರ ಕುಟುಂಬವು ಪಾಪರಾಜಿಗಳಿಗೆ ಪೋಸ್ ನೀಡುತ್ತಿದ್ದು, ಇದರ ಹಲವಾರು ವೀಡಿಯೊಗಳು ಮತ್ತು ಫೋಟೋಗಳು ಸೋಷಿಯಲ್‌ ಮಿಡಿಯಾ ಪ್ಲಾಟ್‌ಫಾಮ್‌ಗಳಲ್ಲಿ ವೈರಲ್ ಆಗಿವೆ.

ಸದ್ಯ ಈ ವೀಡಿಯೊವೊಂದರಲ್ಲಿ ಅಮೀರ್ ಪತ್ನಿ ಕಿರಣ್‌ ರಾವ್ ಕಡೆಗೆ ನಡೆದು ಬಂದು ಆಜಾದ್‌ನೊಂದಿಗೆ ನಿಂತು ಮಾತನಾಡಿದರು. ಅವರು ಗ್ರೂಪ್ ಫೋಟೋಗೆ ನಿಂತುಕೊಂಡು ಪೋಸ್ ನೀಡಿದಾಗ, ಮಾಜಿ ಪತ್ನಿ  ರೀನಾ ದತ್ತಾರಾ ಕೆನ್ನೆಗೆ ಅಮೀರ್ ಖಾನ್ ಮುತ್ತು ಕೊಟ್ಟಿದ್ದಾರೆ. ಕಿರಣ್ ನಂತರ ಗುಂಪಿನಿಂದ ದೂರ ಹೋಗುತ್ತಿರುವುದು ಕಂಡಿದ್ದು, ಆದರೆ ಅಮೀರ್ ಖಾನ್‌ ಫೋಟೋಗಳಿಗೆ ಅವರೊಂದಿಗೆ ಪೋಸ್ ಕೊಡಲು ಕೇಳಿಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News