Viral News: ನೋಡನೋಡುತ್ತಲೇ ಮಹಿಳೆಯನ್ನ ಗಬಕ್ಕನೆ ನುಂಗಿದ ಹೆಬ್ಬಾವು: ಭಯಾನಕ ದೃಶ್ಯ ನೋಡಿ

Today Viral Video: ಕೆಲಸಕ್ಕೆಂದು ತೆರಳಿದ ಪತ್ನಿ ಸಂಜೆಯಾದರು ಮನೆಗೆ ಹಿಂತಿರುಗದಿದ್ದಾಗ ಪತಿ ಹುಡುಕಾಟ ನಡೆಸಿದ್ದಾನೆ. ಆ ಸಂದರ್ಭದಲ್ಲಿ ಆಕೆಯ ಚಪ್ಪಲಿ, ತಲೆಗೆ ಧರಿಸಿದ್ದ ಬಟ್ಟೆ, ಆಕೆ ಕೆಲಸದಲ್ಲಿ ಬಳಸಿದ ಉಪಕರಣಗಳು ಪತ್ತೆಯಾಗಿವೆ. ತಕ್ಷಣವೇ ಸಹಾಯಕ್ಕಾಗಿ ಇತರರನ್ನು ಕರೆದಿದ್ದಾರೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Written by - Bhavishya Shetty | Last Updated : Oct 28, 2022, 12:31 PM IST
    • ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ನುಂಗಿದ ಹೆಬ್ಬಾವು
    • ಏಳು ಮೀಟರ್ ಉದ್ದದ ಹೆಬ್ಬಾವು ನುಂಗಿದೆ ಎಂದು ವರದಿಯಾಗಿದೆ
    • ಸುಮಾತ್ರಾ ದ್ವೀಪದ ಜಂಬಿ ಪ್ರಾಂತ್ಯದ ತೋಟದಲ್ಲಿ ಘಟನೆ
Viral News: ನೋಡನೋಡುತ್ತಲೇ ಮಹಿಳೆಯನ್ನ ಗಬಕ್ಕನೆ ನುಂಗಿದ ಹೆಬ್ಬಾವು: ಭಯಾನಕ ದೃಶ್ಯ ನೋಡಿ title=
snake swallows woman

Today Viral Video: ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಹೆಬ್ಬಾವೊಂದು ನುಂಗಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಜಹ್ರಾಹ್ (54) ಎಂಬಾಕೆಯನ್ನು ಏಳು ಮೀಟರ್ ಉದ್ದದ ಹೆಬ್ಬಾವು ನುಂಗಿದೆ ಎಂದು ವರದಿಯಾಗಿದೆ. ಭಾನುವಾರ ಬೆಳಿಗ್ಗೆ ಸುಮಾತ್ರಾ ದ್ವೀಪದ ಜಂಬಿ ಪ್ರಾಂತ್ಯದ ತೋಟಕ್ಕೆ ಕೆಲಸದ ಸಲುವಾಗಿ ಹೋಗಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Viral Video: ಸೌಂದರ್ಯ ಸ್ಪರ್ಧೆಗೆ ಆಗಮಿಸಿದ್ದ ಅತಿಥಿಗಳ ಮಾರಾಮಾರಿ: ಜಡ್ಜ್ ಜಸ್ಟ್ ಮಿಸ್! ವಿಡಿಯೋ ನೋಡಿ

ಕೆಲಸಕ್ಕೆಂದು ತೆರಳಿದ ಪತ್ನಿ ಸಂಜೆಯಾದರು ಮನೆಗೆ ಹಿಂತಿರುಗದಿದ್ದಾಗ ಪತಿ ಹುಡುಕಾಟ ನಡೆಸಿದ್ದಾನೆ. ಆ ಸಂದರ್ಭದಲ್ಲಿ ಆಕೆಯ ಚಪ್ಪಲಿ, ತಲೆಗೆ ಧರಿಸಿದ್ದ ಬಟ್ಟೆ, ಆಕೆ ಕೆಲಸದಲ್ಲಿ ಬಳಸಿದ ಉಪಕರಣಗಳು ಪತ್ತೆಯಾಗಿವೆ. ತಕ್ಷಣವೇ ಸಹಾಯಕ್ಕಾಗಿ ಇತರರನ್ನು ಕರೆದಿದ್ದಾರೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಇನ್ನು ಪೊಲೀಸರು, ಸ್ಥಳೀಯರು ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ಏಳು ಮೀಟರ್ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ತಕ್ಷಣವೇ ಕಾರ್ಯಾಚರಣೆ ಕೈಗೊಂಡು ಹೆಬ್ಬಾವನ್ನು ಸೆರೆಹಿಡಿದು ಪರಿಶೀಲಿಸಿದಾಗ ಮಹಿಳೆಯ ದೇಹ ಹೊಟ್ಟೆಯಲ್ಲಿರುವುದು ಕಂಡುಬಂದಿದೆ.   

 

ಇದೇ ರೀತಿಯ ಘಟನೆ 2018 ರಲ್ಲಿ, ಸುಲಾವೆಸಿಯ ಮುನಾ ದ್ವೀಪದಲ್ಲಿ ನಡೆದಿತ್ತು. ಅಲ್ಲಿಯೂ ಸಹ ಮಹಿಳೆಯೊಬ್ಬರನ್ನು ದೈತ್ಯ ಹೆಬ್ಬಾವು ನುಂಗಿ ಹಾಕಿರುವುದು ಕಂಡುಬಂದಿತ್ತು.

ಇದನ್ನೂ ಓದಿ: World's Dirtiest Man: ವಿಶ್ವದ ಅತ್ಯಂತ ಕೊಳಕು ಮನುಷ್ಯ ಇನ್ನಿಲ್ಲ..!

ಇನ್ನು ಹೆಚ್ಚಿನ ಸಂಖ್ಯೆಯ ಜನರು ಹಾವು ಕಡಿತದಿಂದ ಬಳಲುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಸುಮಾರು 5.4 ಮಿಲಿಯನ್ ಹಾವು ಕಡಿತದ ಪ್ರಕರಣಗಳಿವೆ. ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವವರು ಬಡ, ಗ್ರಾಮೀಣ ಸಮುದಾಯಗಳಲ್ಲಿ ಮಕ್ಕಳು ಮತ್ತು ಕೃಷಿ ಕಾರ್ಮಿಕರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News