Viral Video: ಮಗನ ಶಿಕ್ಷಣಕ್ಕೆ ಹಣ ಹೊಂದಿಸಲು ಆತ್ಮಹತ್ಯೆಗೆ ಶರಣಾದ ತಾಯಿ

ಸೇಲಂನ ಕಲೆಕ್ಟರ್ ಕಛೇರಿಯಲ್ಲಿ ‘ಸಫಾಯಿ ಕರ್ಮಚಾರಿ’ಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಪಾಪತಿ ಮಗನ ಕಾಲೇಜು ಶುಲ್ಕ 45,000 ರೂ.ಗಳನ್ನು ಪಾವತಿಸಲು ಸರ್ಕಾರದಿಂದ ಹಣಕಾಸಿನ ನೆರವು ಪಡೆಯಲು ಉದ್ದೇಶಪೂರ್ವಕವಾಗಿ ಬಸ್‌ನ ಮುಂದೆ ಜಿಗಿದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಸಖತ್ ವೈರಲ್ ಆಗುತ್ತಿದೆ. 

Written by - Yashaswini V | Last Updated : Jul 18, 2023, 04:39 PM IST
  • ಮಗನ ಶಿಕ್ಷಣದ ವೆಚ್ಚ ಭರಿಸಲು ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
  • ಪತಿಯಿಂದ ಬೇರ್ಪಟ್ಟ ನಂತರ ಮಹಿಳೆ ಪಾಪತಿ ಕಳೆದ 18 ವರ್ಷಗಳಿಂದ ಮಗಳು ಮತ್ತು ಮಗನೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದರು.
  • ಅವಳಿಗೆ ಜೀವನ ಸಾಗಿಸುವುದು ತುಂಬಾ ಕಷ್ಟವಾಗಿತ್ತು.
Viral Video: ಮಗನ ಶಿಕ್ಷಣಕ್ಕೆ ಹಣ ಹೊಂದಿಸಲು ಆತ್ಮಹತ್ಯೆಗೆ ಶರಣಾದ ತಾಯಿ  title=
Viral Video

Accident Viral Video: ಮಗನ ಶಿಕ್ಷಣದ ವೆಚ್ಚ ಭರಿಸಲು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮಗನ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸುವ ಸಲುವಾಗಿ ಇಂತಹ ನಿರ್ಧಾರ ಕೈಗೊಂಡಿರುವ ತಾಯಿಯನ್ನು ಪಾಪತಿ ಎಂದು ಗುರುತಿಸಲಾಗಿದ್ದು, ಈಕೆ ಸೇಲಂನ ಕಲೆಕ್ಟರ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 

ಲಭ್ಯವಿರುವ ಮಾಹಿತಿಗಳ ಪ್ರಕಾರ, ಸೇಲಂನ ಕಲೆಕ್ಟರ್ ಕಛೇರಿಯಲ್ಲಿ ‘ಸಫಾಯಿ ಕರ್ಮಚಾರಿ’ಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಪಾಪತಿ ಮಗನ ಕಾಲೇಜು ಶುಲ್ಕ 45,000 ರೂ.ಗಳನ್ನು ಪಾವತಿಸಲು ಸರ್ಕಾರದಿಂದ ಹಣಕಾಸಿನ ನೆರವು ಪಡೆಯಲು ಉದ್ದೇಶಪೂರ್ವಕವಾಗಿ ಬಸ್‌ನ ಮುಂದೆ ಜಿಗಿದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಇದನ್ನೂ ಓದಿ- Snake Viral Video: ಅಡುಗೆ ಮನೆಗೆ ಎಂಟ್ರಿ ಕೊಟ್ಟ ನಾಗರಹಾವು, ಮುಂದೆ... 

ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ರಸ್ತೆಯ ಬದಿಯಲ್ಲಿ ವೇಗವಾಗಿ ನಡೆಯುತ್ತಿರುವುದು ಕಂಡುಬಂದಿದೆ. ಸಮೀಪಿಸುತ್ತಿರುವ ಬಸ್ಸನ್ನು ಗಮನಿಸಿದ ಅವಳು ಅದರ ಕಡೆಗೆ ಓಡಿ ಹೋಗಿ ಕೆಳಗೆ ಬೀಳುತ್ತಾಳೆ. ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾರೆ. ವರದಿಯೊಂದರ ಪ್ರಕಾರ,  ಜೂನ್ 28 ರಂದು ತಮಿಳುನಾಡಿನ ಸೇಲಂನ 2 ನೇ ಅಗ್ರಹಾರಂ ಬೀದಿಯಲ್ಲಿ ಈ ಘಟನೆ ನಡೆದಿದೆ. 

ಇದನ್ನೂ ಓದಿ- ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ, ಮಕ್ಕಳ ಜೀವದ ಜೊತೆಯೇ ಚೆಲ್ಲಾಟ

ಸೇಲಂ ಕಲೆಕ್ಟರೇಟ್‌ನಲ್ಲಿ ತಾತ್ಕಾಲಿಕ  ‘ಸಫಾಯಿ ಕರ್ಮಚಾರಿ’ಯಾಗಿ ಕೆಲಸ ಮಾಡುತ್ತಿದ್ದ ಪಾಪತಿ ಸಿಂಗಲ್ ಪೇರೆಂಟ್ ಆಗಿದ್ದು, ಪತಿಯಿಂದ ದೂರವಾದ ಬಳಿಕ ಮಗ, ಮಗಳು ಮತ್ತು ತಾಯಿಯ ಜವಾಬ್ದಾರಿಯನ್ನು ಹೊತ್ತಿದ್ದರು. ಮಗ ಕಾಲೇಜಿಗೆ ಹೋಗುತ್ತಿದ್ದು ವಾರ್ಷಿಕ ಶುಲ್ಕ 45,000 ರೂ.ಗಳನ್ನು ಕಾಲೇಜಿಗೆ ಪಾವತಿಸಬೇಕಿತ್ತು. ಆದರೆ, ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಆಕೆ ತುಂಬಾ ಆತಂಕಕ್ಕೆ ಒಳಗಾಗಿದ್ದರು. ವರದಿಗಳ ಪ್ರಕಾರ, "ಅಪಘಾತ"ದಲ್ಲಿ ಮೃತಪಟ್ಟರೆ ಕುಟುಂಬದವರಿಗೆ ಪರಿಹಾರದ ಹಣ ಸಿಗುತ್ತದೆ ಎಂಬ ಕಾರಣಕ್ಕಾಗಿ ಈಕೆ ಚಲಿಸುತ್ತಿದ್ದ ಬಸ್ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಇನ್ನೂ ಪ್ರಕರಣ ಕುರಿತಂತೆ ತನಿಖೆ ನಡೆಸಿರುವ ಪೊಲೀಸರು, ಪತಿಯಿಂದ ಬೇರ್ಪಟ್ಟ ನಂತರ ಮಹಿಳೆ ಪಾಪತಿ ಕಳೆದ 18 ವರ್ಷಗಳಿಂದ ಮಗಳು ಮತ್ತು ಮಗನೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದರು. ಅವಳಿಗೆ ಜೀವನ ಸಾಗಿಸುವುದು ತುಂಬಾ ಕಷ್ಟವಾಗಿತ್ತು. ಅವರ ಮಗಳು ಈಗ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಆಕೆಯ ಮಗ ಖಾಸಗಿ ಕಾಲೇಜಿನಲ್ಲಿ ಆರ್ಕಿಟೆಕ್ಚರ್‌ನಲ್ಲಿ ಡಿಪ್ಲೊಮಾ ಓದುತ್ತಿದ್ದಾರೆ. ಇಲ್ಲಿಯವರೆಗೆ ಸಾಲ ಪಡೆದು ಮರುಪಾವತಿ ಮಾಡುವ ಮೂಲಕ ಆರ್ಥಿಕ ನಿರ್ವಹಣೆ ಮಾಡುತ್ತಿದ್ದಳು. ಇದೀಗ  ಮಗನ ವಿದ್ಯಾಭ್ಯಾಸದ ವೆಚ್ಚದ ಬಗ್ಗೆ ಆಕೆ ಒತ್ತಡದಲ್ಲಿದ್ದಳು. ಅಪಘಾತ ಸಂಭವಿಸಿದ ರಸ್ತೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಅವರು ಬಸ್‌ನಿಂದ ಕೆಳಗಿಳಿಯುವ ಮೊದಲು, ಪಾಪತಿ ಹಿಂದಿನ ದಿನವೂ ಇದೇ ರೀತಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಆಕೆ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದರು ಎಂದು ನಮ್ಮ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News