Viral Video: ರಾಜಸ್ಥಾನದ ಬಾರ್ಮರ್‌ನ ದಂತ ಚಿಕಿತ್ಸಾಲಯದಲ್ಲಿ ದಿನಪತ್ರಿಕೆ ಓದುತ್ತಿದ್ದಾಗ ರಾಜಸ್ಥಾನದ ಉದ್ಯಮಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಪ್ರಾಣ ಪಕ್ಷಿ ಹಾರಿಹೋಗುವ ದೃಶ್ಯಗಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ.
ಮೃತರನ್ನು ದಿಲೀಪ್ ಕುಮಾರ್ ಮದನಿ ಎಂದು ಗುರುತಿಸಲಾಗಿದೆ. ಅವರು ಹಲ್ಲುನೋವು ಎಂದು ದಂತ ವೈದ್ಯರನ್ನು ಭೇಟಿ ಮಾಡಲು ಬಂದಿದ್ದರು. ಆದರೆ ಕ್ಲಿನಿಕ್‌ನಲ್ಲಿ ವೈದ್ಯರನ್ನು ಭೇಟಿ ಮಾಡುವ ಮೊದಲು ಕುಸಿದುಬಿದ್ದರು. ಅವರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಇದನ್ನೂ ಓದಿ: Viral Video : ಪ್ರವಾಹದ ಮಧ್ಯೆ ಸಿಲುಕಿದ ಕೋತಿ, ಆಂಜನೇಯನ ಬಳಿ ಹೋದಾಗ ನಡೀತು ಪವಾಡ!?
ವೀಡಿಯೊದಲ್ಲಿ, ಮದನಿ ಇದ್ದಕ್ಕಿದ್ದಂತೆ ನೆಲದ ಮೇಲೆ ಬೀಳುವ ಮೊದಲು ಪತ್ರಿಕೆ ಓದುತ್ತಿರುವುದನ್ನು ಕಾಣಬಹುದು. ಕುಸಿದು ಬೀಳುತ್ತಿದ್ದಂತೆ ಅಲ್ಲಿಯೇ ಇದ್ದ ಸಿಬ್ಬಂದಿ ಅವರ ಬಳಿಗೆ ಓಡಿ ಬಂದಿದ್ದಾರೆ. ಚಿಕಿತ್ಸಾಲಯದ ವೈದ್ಯರು ಸಹ ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದರು. ತಕ್ಷಣವೇ ಅವರನ್ನು ನಹತಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅವರ ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
अखबार पढ़ते-पढ़ते अचानक आई मौत
◆ डॉक्टर के पास गए थे बिजनेसमैन, बैठे- बैठे जमीन पर गिर पड़े
◆ घटना राजस्थान के बाड़मेर की है#ViralVideos pic.twitter.com/cOcf5FluDx
— News24 (@news24tvchannel) November 7, 2022
ಕಳೆದ ಕೆಲ ದಿನಗಳ ಹಿಂದೆ ಇದೇ ರೀತಿಯ ಘಟನೆಗಳು ನಡೆದಿದ್ದು, ಆ ದೃಶ್ಯಗಳು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಅಕ್ಟೋಬರ್ ನಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಜಿಮ್ ತರಬೇತುದಾರರೊಬ್ಬರು ಕುರ್ಚಿಯ ಮೇಲೆ ಕುಳಿತಿದ್ದಾಗ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದರು. ಇನ್ನು ನವರಾತ್ರಿಯ ಸಂದರ್ಭದಲ್ಲಿ, ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ 21 ವರ್ಷದ ಯುವಕನೊಬ್ಬ ಗಾರ್ಬಾ ನೃತ್ಯ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದ.
ಸೆಪ್ಟೆಂಬರ್‌ನಲ್ಲಿ, ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುವಾಗ ಇದ್ದಕ್ಕಿದ್ದಂತೆ ಬಿದ್ದು ನೃತ್ಯ ಕಲಾವಿದರೊಬ್ಬರು ಸಾವನ್ನಪ್ಪಿದರು. ಈತನನ್ನು 20 ವರ್ಷದ ಯೋಗೇಶ್ ಗುಪ್ತಾ ಎಂದು ಗುರುತಿಸಲಾಗಿದ್ದು, ಪಾರ್ವತಿ ದೇವಿಯ ವೇಷ ಧರಿಸಿ, ಬಿಷ್ನಾದಲ್ಲಿ ಗಣೇಶ ಉತ್ಸವದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಏಕಾಏಕಿ ಕುಸಿದು ವೇದಿಕೆ ಮೇಲೆ ಬಿದ್ದಿದ್ದರು.
ಇದನ್ನೂ ಓದಿ: Viral Video: ಕೋತಿಯನ್ನು ನುಂಗಲು ಯತ್ನಿಸುತ್ತಿರುವ ಹೆಬ್ಬಾವು: ಪಕ್ಕದಲ್ಲೇ ಇದ್ದ ಇತರ ಮಂಗಗಳು ಮಾಡಿದ್ದೇನು ನೋಡಿ
ಅದಕ್ಕೂ ಮುನ್ನ ಉತ್ತರ ಪ್ರದೇಶದ ಬರೇಲಿಯಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ 48 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಮೃತರನ್ನು ಪ್ರಭಾತ್ ಕುಮಾರ್ ಎಂದು ಗುರುತಿಸಲಾಗಿದ್ದು, ಬರೇಲಿ ಇಂಡಿಯನ್ ವೆಟರ್ನರಿ ರಿಸರ್ಚ್ ಲ್ಯಾಬ್‌ನಲ್ಲಿ (ಐವಿಆರ್‌ಐ) ಅಸಿಸ್ಟೆಂಟ್ ಟೆಕ್ನಿಕಲ್ ಆಗಿ ಕೆಲಸ ಮಾಡುತ್ತಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.