ನಿತ್ಯದ ನಡಿಗೆಯಲ್ಲಿದೆ ನೂರಾರು ಪ್ರಯೋಜನ

  • Zee Media Bureau
  • Oct 23, 2023, 12:47 PM IST

ಪಕ್ಕದ ರಸ್ತೆಯಲ್ಲಿರೋ ಅಂಗಡಿಗೆ ಹೋಗಿ ಬರಲು ಹಲವರಿಗೆ ಬೈಕ್‌ ಬೇಕು. ಮನೆಯಿಂದ ಐದೇ ನಿಮಿಷದ ನಡಿಗೆಗೆ ಸಿಗುವ ಬಸ್‌ ಸ್ಟಾಪ್‌ಗೆ ಹೋಗೋಕೂ ಯಾರಾದ್ರೂ ಡ್ರಾಪ್‌ ಮಾಡ್ಬೇಕು. ಕೆಲವರಂತೂ ಹತ್ತಿರದಲ್ಲೇ ಇರೋ ತರಕಾರಿ - ಹಾಲಿನ ಅಂಗಡಿಗೂ ನಡೆದು ಹೋಗುವ ಜಾಯಮಾನದವರಲ್ಲ. ಅದೇನೇ ಇರ್ಲಿ, ಆದ್ರೆ ವಾಕಿಂಗ್‌ನಿಂದ ಸಿಗುವ ಅಪಾರ ಲಾಭಗಳನ್ನ ನೀವು ತಿಳಿದುಕೊಂಡ್ರೆ ಈ ಅಭ್ಯಾಸಗಳನ್ನೆಲ್ಲ ಬದಲಿಸಿಕೊಳ್ತೀರಿ. ಬಹುಮುಖ್ಯವಾಗಿ ನಡಿಗೆಯಿಂದ ನಿಮ್ಮ ಆಯಸ್ಸು ಹೆಚ್ಚಾಗತ್ತೆ.

Trending News