ಟಿಟಿಡಿಯಿಂದ 2 ತಿಂಗಳ ವಿಶೇಷ ಪ್ರವೇಶ ಟಿಕೆಟ್ ಬಿಡುಗಡೆ

  • Zee Media Bureau
  • Apr 27, 2023, 06:08 PM IST

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಯಾವುದೇ ಟಿಕೆಟ್​ ತೆಗೆದುಕೊಳ್ಳದೆ ದೇವರ ದರ್ಶನಕ್ಕೆ ಹೋದರೆ ಗಂಟೆ ಗಂಟೆ ಕಾಲ ಕಾಯಬೇಕಾಗುತ್ತದೆ. ಟೈಮ್​ ಸ್ಲಾಟ್​ ಟಿಕೆಟ್​​, ದಿವ್ಯಾ ದರ್ಶನ ಟಿಕೆಟ್​​ ತೆಗೆದುಕೊಂಡು ಬಂದರೆ ದೇವರ ದರ್ಶನಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಆದ್ದರಿಂದ ಹಲವು ಭಕ್ತರು ದೇವರ ದರ್ಶನ ಪಡೆಯಲು 300 ರೂಪಾಯಿಯ ವಿಶೇಷ ದರ್ಶನ ಟಿಕೆಟ್​ ಪಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಒಂದು ತಿಂಗಳಿಗೆ ಸಂಬಂಧಿಸಿದ 300 ರೂಪಾಯಿ ಟಿಕೆಟ್​ಗಳನ್ನು ಒಂದು ವಾರದ ಮುನ್ನ ಆನ್​ಲೈನ್​ನಲ್ಲಿ ಬಿಡುಗಡೆ ಮಾಡುತ್ತಾರೆ. ಇದೀಗ ಮೇ ಮತ್ತು ಜೂನ್​ ತಿಂಗಳ ವಿಶೇಷ ಪ್ರವೇಶ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ. 

Trending News