ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ

  • Zee Media Bureau
  • Aug 12, 2022, 05:33 PM IST

ಕೊಪ್ಪಳ ಜಿಲ್ಲೆಯ ಗಂಗಾವತಿಯ ದೇವಘಟ್ಟ ಸಮೀಪದ ನದಿಯಲ್ಲಿನ ನಡುಗಡ್ಡೆಯಲ್ಲಿ ಇಬ್ಬರು ಕುರಿಗಾಹಿಗಳು ಸಿಲುಕಿಕೊಂಡಿರುವ ಘಟನೆ  ಬೆಳಕಿಗೆ ಬಂದಿದೆ. ಮಲೆನಾಡಿನ ಪ್ರದೇಶದಲ್ಲಿ  ಕಳೆದ 15 ದಿನಗಳಿಂದ ಅಧಿಕ ಪ್ರಮಾಣದಲ್ಲಿ ಮಳೆ ಬಿಳುತ್ತಿರುವ ಹಿನ್ನೆಲೆಯಲ್ಲಿ 105 ಟಿಎಂಸಿ ಸಾಮಾರ್ಥ್ಯದ  ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಒಳಹರಿವಿನ ಪ್ರಮಾಣ ಕೂಡ ಜಾಸ್ತಿಯಾಗಿದೆ. ಇದರಿಂದ ಸದ್ಯ ಜಲಾಶಯದಿಂದ ತುಂಗಭದ್ರ ನದಿಗೆ 1 ಲಕ್ಷ 70 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

Trending News