ಉಮಂಗ್ ಆ್ಯಪ್ ಮೂಲಕ ಓಪನ್‌ ಮಾಡಬಹುದು ಇಪಿಎಫ್ ಪಾಸ್​ಬುಕ್

  • Zee Media Bureau
  • Apr 28, 2023, 05:32 PM IST

ಇಪಿಎಫ್​ನ ಅಧಿಕೃತ ಪೋರ್ಟಲ್​ನಲ್ಲಿ ಇ–ಪಾಸ್​ಬುಕ್ ಸೇವೆಯಲ್ಲಿ ದೋಷ ಕಾಣಿಸಿ, ಆ ಪುಟ ತೆರೆಯುತ್ತಿಲ್ಲ ಎಂದು ಈಗಾಗಲೇ ಬಹಳ ಮಂದಿ ಸದ್ಯಸರು ಇಂಟರ್ನೆಟ್​ನಲ್ಲಿ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಸಮಸ್ಯೆ ತಲೆದೋರಿ ಹಲವು ದಿನಗಳೇ ಆಗಿವೆ. ತಿಂಗಳುಗಳಿಂದಲೂ ಈ ತೊಂದರೆ ಇದೆ. ಆರೇಳು ತಿಂಗಳ ಹಿಂದೆಯೇ ಇಪಿಎಫ್​ನ ಇ–ಸೇವೆಗಳು ನಿಧಾನಗೊಂಡಿದ್ದವು. ಈಗ ಪೋರ್ಟಲ್​ನಲ್ಲಿ ಸರ್ವಿಸ್ ಪುಟವೇ ತೆರೆಯುತ್ತಿಲ್ಲ ಎನ್ನಲಾಗಿದೆ. ಈ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿರುವುದಾಗಿ ಇಪಿಎಫ್​ಒ ಸಂಸ್ಥೆ ಸ್ಪಷ್ಟಪಡಿಸಿದ್ದು, ಕೆಲ ದಿನಗಳವರೆಗೆ ಸಂಯಮದಿಂದ ಇರಬೇಕೆಂದು ಕೋರಿದೆ. ಆದಾಗ್ಯೂ ನಿಮ್ಮ ಇಪಿಎಫ್ ಖಾತೆಯ ವಿವರಗಳನ್ನು ನೋಡಲು ಬೇರೆ ಕೆಲ ಸರಳ ಮಾರ್ಗಗಳ ಆಯ್ಕೆ ನಿಮಗೆ ಇದೆ.

Trending News