ಕಾಂಗ್ರೆಸ್ ಅಭ್ಯರ್ಥಿ ಕೆ. ಸಿ. ವೀರೇಂದ್ರ ಪಪ್ಪಿ ಭರ್ಜರಿ ಪ್ರಚಾರ

  • Zee Media Bureau
  • May 4, 2023, 01:22 PM IST

ಕೋಟೆನಾಡು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಪಪ್ಪಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ಅಖಾಡಕ್ಕಿಳಿದ ವೀರೇಂದ್ರ ಪಪ್ಪಿ, ಬಿಜೆಪಿ‌ ಭದ್ರಕೋಟೆ ಬೇಧಿಸಲು ಸತತ ಪ್ರಯತ್ನ ನಡೆಸುತ್ತಿದ್ದಾರೆ‌. ದಂಡಿನ ಕುರುಬರ ಹಟ್ಟಿ, ದೊಡ್ಡಸಿದ್ದವ್ವನಹಳ್ಳಿ, ತೋಪರ ಮಾಳಿಗೆ, ಬೊಮ್ಮನಹಳ್ಳಿ, ಹಂಪಯ್ಯನ ಮಾಳಿಗೆ, ಕಸವನಹಳ್ಳಿ, ಕ್ಯಾದಿಗೆರೆ ಇತರ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ರೋಡ್ ಶೋ, ಪಾದಯಾತ್ರೆ, ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿರುವ ವೀರೇಂದ್ರ ಪಪ್ಪಿ, ಮದುವೆ ಮನೆಗಳಲ್ಲೂ ಮತಯಾಚಿಸಿ ಗಮನ ಸೆಳೆದರು. 

Trending News