1980ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಿಎಂ ವೀರೇಂದ್ರ ಪಾಟೀಲ ಸ್ಪರ್ಧಿಸಿ ಗೆದ್ದಿದ್ದರು. ರಾಜ್ಯದಲ್ಲಿ ವೀರೇಂದ್ರ ಪಾಟೀಲರದ್ದು ದೊಡ್ಡ ಹೆಸರು. ರಾಜ್ಯದ ಯಾವುದೇ ಮೂಲೆಯಲ್ಲಿ ನಿಂತರೂ ಗೆಲುವು ಸಾಧಿಸಬಹುದಾದ ಧೀರ. ಕಾಂಗ್ರೆಸ್ ಪಕ್ಷ ಹೋಳಾಗಿದ್ದ ಸಂಕಷ್ಟದ ಸಮಯದಲ್ಲಿ ರಾಜಕೀಯ ಪುನರ್ ಜೀವನ ಕೊಟ್ಟಿದ್ದೇ ಬಾಗಲಕೋಟೆಯ ಮತದಾರರು. ಅಂದ್ ಹಾಗೆ.. ಬಿಜೆಪಿ ಅನ್ನೋದಕ್ಕಿಂತ ಸಂಸದರ ವೈಯಕ್ತಿಕ ವರ್ಚಸ್ಸೇ ಹೆಚ್ಚಿದೆ. ಹೀಗಾಗಿ ಬಾಗಲಕೋಟೆ ರಣಕಣದಲ್ಲಿ ಪಿಸಿ ಗದ್ದಿಗೌಡರ್ ಪ್ಲಸ್ ಮತ್ತು ಮೈನಸ್ ಏನೇನು ಅಂತ ನೋಡೋಣ..