Yamaha 2023 AEROX 155 Bike: ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಯಮಹಾ ಪ್ರೈವೇಟ್ ಲಿಮಿಟೆಡ್ ತನ್ನ ಸ್ಪೋರ್ಟ್ಸ್ ಸ್ಕೂಟರ್ 2023 ಏರಾಕ್ಸ್ 155 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್ ಶೋ ರೂಂ ಬೆಲೆ 1.43 ಲಕ್ಷ ರೂ. ಈ ಹೊಸ ಸ್ಕೂಟರ್ ನಲ್ಲಿ ಕಂಪನಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ವೈಶಿಷ್ಟ್ಯದ ರೂಪದಲ್ಲಿ ನೀಡಿದೆ. ಕಂಪನಿಯು ಈ ಸ್ಪೋರ್ಟ್ಸ್ ಸ್ಕೂಟರ್ನಲ್ಲಿ 155 ಸಿಸಿ ಎಂಜಿನ್ ಅನ್ನು ಸಹ ನೀಡಿದೆ. ಕಂಪನಿಯು ಎಂಜಿನ್ನಲ್ಲಿ E20 ಇಂಧನ ಕಂಪ್ಲೈಂಟ್ ಅನ್ನು ನೀಡಿದೆ. ಇದಲ್ಲದೆ, ಸ್ಕೂಟರ್ನಲ್ಲಿ ಆನ್-ಬೋರ್ಡ್ ಡಯಾಗ್ನೋಸ್ಟಿಕ್ಸ್ (OBD-II) ವ್ಯವಸ್ಥೆಯನ್ನು ಸಹ ನೀಡಲಾಗಿದೆ. ಕಂಪನಿಯು ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಈ ಮಾಹಿತಿಯನ್ನು ನೀಡಿದೆ.
ಪ್ರೀಮಿಯಂ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ
ಇದಲ್ಲದೆ, ಕಂಪನಿಯು ತನ್ನ ಪ್ರೀಮಿಯಂ ಶ್ರೇಣಿಯ ದ್ವಿಚಕ್ರ ವಾಹನಗಳ 2023 ರೂಪಾಂತರಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇವುಗಳಲ್ಲಿ R155, MT-15 V2 ಮತ್ತು R15 V4 ನಂತಹ ಪ್ರೀಮಿಯಂ ದ್ವಿಚಕ್ರ ವಾಹನಗಳನ್ನು ಶಾಮೀಳಾಗಿವೆ. ಅವುಗಳ ಬೆಲೆ 1.63 ಲಕ್ಷದಿಂದ 1.86 ಲಕ್ಷದವರೆಗೆ (ಎಕ್ಸ್ ಶೋ ರೂಂ ಬೆಲೆ) ಇರುವ ಸಾಧ್ಯತೆ ಇದೆ.
ಇದನ್ನೂ ಓದಿ-Big Update: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!
Yamaha 2023 Aerox ನ 3 ಬಣ್ಣ ರೂಪಾಂತರಗಳು
ಈ ಬೈಕ್ 3 ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಇದು ನಿಮಗೆ ಮೆಟಾಲಿಕ್ ಬ್ಲ್ಯಾಕ್, ರೇಸಿಂಗ್ ಬ್ಲೂ ಮತ್ತು ಗ್ರೇ ಬರ್ಮಿಲಿಯನ್ ಬಣ್ಣದ ಆಯ್ಕೆಗಳನ್ನು ಒಳಗೊಂಡಿರಲಿದೆ. ಕಂಪನಿಯು ಸ್ಕೂಟರ್ನ ಎಂಜಿನ್ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಎಂಜಿನ್ ಅನ್ನು R155 ನಲ್ಲಿ ಕೂಡ ನೀಡಲಾಗಿದೆ. ಈ ಬೈಕಿನ ಎಂಜಿನ್ 8000 rpm ನಲ್ಲಿ 14.8 bhp ಶಕ್ತಿ ಮತ್ತು 6500 rpm ನಲ್ಲಿ 13.9 NM ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇದನ್ನೂ ಓದಿ-CNG-PNG ಬೆಲೆ ಕುರಿತು ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!
ಯಮಹಾ 2023 ಏರೋಕ್ಸ್ ವೈಶಿಷ್ಟ್ಯಗಳು
ಈ ಬೈಕ್ನಲ್ಲಿ ಎಲ್ಇಡಿ ಹೆಡ್ಲೈಟ್ಗಳು ಮತ್ತು ಎಲ್ಇಡಿ ಪೊಸಿಷನಿಂಗ್ ಲ್ಯಾಂಪ್ಗಳನ್ನು ನೀಡಲಾಗಿದೆ. ಬೈಕ್ನಲ್ಲಿ 14 ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದೆ. ಬೈಕ್ 140 ಸೆಕ್ಷನ್ ಹಿಂಬದಿ ಟೈರ್, ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಟ್ವಿನ್ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಸಾರ್ಬರ್ಗಳನ್ನು ಹೊಂದಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.