ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಏಕೆ ಕಾಣಿಸಿಕೊಳ್ಳುತ್ತೇ ಈ 'ಲಾಕ್' ಐಕಾನ್!

ಇದು ತಂತ್ರಜ್ಞಾನ ಯುಗ. ಈ ತಂತ್ರಜ್ಞಾನ ಯುಗದಲ್ಲಿ ಯಾವುದೇ ವಿಷಯ ತಿಳಿಯಬೇಕೆಂದರೂ ಮೊದಲು ನೆನಪಾಗುವುದೇ ಗೂಗಲ್ ಸರ್ಚ್. ಆದರೆ, ಗೂಗಲ್‌ನಲ್ಲಿ ಏನನ್ನಾದರೂ ಸರ್ಚ್ ಮಾಡಿದಾಗ 'ಲಾಕ್' ಐಕಾನ್ ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಏನಿದು 'ಲಾಕ್' ಐಕಾನ್? ಎಂದು ಎಂದಾದರೂ ಯೋಚಿಸಿದ್ದೀರಾ? 

Written by - Yashaswini V | Last Updated : Aug 18, 2023, 12:18 PM IST
  • HTTPS ಎಂಬುದು ಬ್ರೌಸರ್ ಮತ್ತು ವೆಬ್‌ಸೈಟ್‌ನ ಸರ್ವರ್ ನಡುವೆ ಹೋಗುವ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ ಪ್ರೋಟೋಕಾಲ್ ಆಗಿದೆ.
  • ಈ ಲಾಕ್ ಐಕಾನ್ ಕಾಣಿಸುವ ವೆಬ್ ಬ್ರೌಸರ್‌ನಲ್ಲಿ ಯಾರೂ ಕೂಡ ನಿಮ್ಮ ಡಾಟಾವನ್ನು ಸುಲಭವಾಗಿ ಕದಿಯಲು ಸಾಧ್ಯವಾಗುವುದಿಲ್ಲ.
  • ಇದು ಸುರಕ್ಷಿತ ಬ್ರೌಸಿಂಗ್ ಅನ್ನು ಖಚಿತಪಡಿಸುತ್ತದೆ ಮತ್ತು ನಿಮ್ಮ ಸೂಕ್ಷ್ಮ ಮಾಹಿತಿಯನ್ನು ರಕ್ಷಿಸುತ್ತದೆ.
ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಏಕೆ ಕಾಣಿಸಿಕೊಳ್ಳುತ್ತೇ ಈ 'ಲಾಕ್' ಐಕಾನ್! title=

Google: ಯಾವುದೇ ವಿಷಯದ ಬಗ್ಗೆ ಬೆರಳ ತುದಿಯಲ್ಲಿಯೇ ಮಾಹಿತಿ ಒದಗಿಸಬಲ್ಲ ಶಕ್ತಿ ಇರುವ ತಂತ್ರಜ್ಞಾನ ಎಂದರೆ ಅದುವೇ 'ಗೂಗಲ್ ಸರ್ಚ್'. ಅಡುಗೆ ಮಾಡುವುದರಿಂದ ಹಿಡಿದು ವಿಶ್ವದ ಮೂಲೆ ಮೂಲೆಯಲ್ಲಿನ ಯಾವುದೇ ಮಾಹಿತಿಯನ್ನು ತಿಳಿಯಲು ಗೂಗಲ್ ಸರ್ಚ್ ಬಲು ಉಪಯೋಗಿ ಸಾಧನವಾಗಿದೆ. ಆದರೆ, ನಾವು ಗೂಗಲ್‌ನಲ್ಲಿ ಏನನ್ನಾದರೂ ಸರ್ಚ್ ಮಾಡಿದಾಗ ಅಲ್ಲಿ ಸರ್ಚ್ ಐಕಾನ್‌ನಲ್ಲಿ ಲಾಕ್ ಐಕಾನ್ ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಅಷ್ಟಕ್ಕೂ, ಈ ಲಾಕ್ ಐಕಾನ್ ಏಕೆ ಕಾಣಿಸಿಕೊಳ್ಳುತ್ತದೆ. ಸರ್ಚ್ ಐಕಾನ್‌ನಲ್ಲಿ ಲಾಕ್ ಐಕಾನ್ ಕಾಣಿಸಿಕೊಂಡರೆ ಏನ್ ಅರ್ಥ ಎಂದು ಎಂದಾದರೂ ಯೋಚಿಸಿದ್ದೀರಾ? 

ಗೂಗಲ್‌ನಲ್ಲಿ ಏನನ್ನಾದರೂ ಸರ್ಚ್ ಮಾಡಿದಾಗ ಸರ್ಚ್ ಐಕಾನ್‌ನಲ್ಲಿ ಲಾಕ್ ಐಕಾನ್ ಏಕೆ ಕಾಣಿಸಿಕೊಳ್ಳುತ್ತದೆ? 
ವಾಸ್ತವವಾಗಿ, ಯಾವುದೇ ವೆಬ್ ಬ್ರೌಸರ್‌ನ ಅಡ್ರೆಸ್ ಬಾಕ್ಸ್ ನೋಡಿದಾದ ಅಲ್ಲಿ ಪ್ಯಾಡ್‌ಲಾಕ್ ಅಥವಾ ಲಾಕ್ ಐಕಾನ್ ಅನ್ನು ಕಾಣಬಹುದು. ಇದನ್ನು ಕಂಡರೆ, ನೀವು  HTTPS (ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೊಟೊಕಾಲ್ ಸೆಕ್ಯೂರ್) ಬಳಸಿಕೊಂಡು ನಿಮ್ಮ ಡೇಟಾವನ್ನು ಸುರಕ್ಷಿತವಾಗಿ ವಿನಿಮಯ ಮಾಡಿಕೊಳ್ಳುವ ವೆಬ್‌ಸೈಟ್ ಅನ್ನು ಪ್ರವೇಶಿಸುತ್ತಿದ್ದೀರಿ ಎಂಬುದನ್ನೂ ಅರ್ಥ ಮಾಡಿಕೊಳ್ಳಬಹುದು. 

ಇದನ್ನೂ ಓದಿ- WhatsApp ಬಳಕೆದಾರರೇ ಎಚ್ಚರ! ಎಚ್ಚರ! ಈ ನಂಬರ್‌ನಿಂದ ಬರುವ ಕಾಲ್ ಅನ್ನು ಮಿಸ್ ಆಗಿಯೂ ಪಿಕ್ ಮಾಡಲೇಬೇಡಿ!

ಏನಿದು HTTPS? 
HTTPS ಎಂಬುದು ಬ್ರೌಸರ್ ಮತ್ತು ವೆಬ್‌ಸೈಟ್‌ನ ಸರ್ವರ್ ನಡುವೆ ಹೋಗುವ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ ಪ್ರೋಟೋಕಾಲ್ ಆಗಿದೆ. ಅರ್ಥಾತ್ ನಿಮ್ಮ ಡೇಟಾ  ಬ್ರೌಸರ್ ಮತ್ತು ವೆಬ್‌ಸೈಟ್‌ನ ಸರ್ವರ್ ನಡುವೆ  ವಿನಿಮಯವಾಗುವ ಸಂದರ್ಭದಲ್ಲಿ ಯಾರಾದರೂ ಅದನ್ನು ಕದಿಯಲು ಪ್ರಯತ್ನಿಸಿದರೆ ಅವರಿಗೆ ದೃಢೀಕರಿಸದ ಡೇಟಾ ಮಾತ್ರ ಲಭ್ಯವಾಗುತ್ತದೆ. ಎಂದರೆ, ಈ ಲಾಕ್ ಐಕಾನ್ ಕಾಣಿಸುವ ವೆಬ್ ಬ್ರೌಸರ್‌ನಲ್ಲಿ ಯಾರೂ ಕೂಡ ನಿಮ್ಮ ಡಾಟಾವನ್ನು ಸುಲಭವಾಗಿ ಕದಿಯಲು ಸಾಧ್ಯವಾಗುವುದಿಲ್ಲ. ಇದು ಸುರಕ್ಷಿತ ಬ್ರೌಸಿಂಗ್ ಅನ್ನು ಖಚಿತಪಡಿಸುತ್ತದೆ ಮತ್ತು ನಿಮ್ಮ ಸೂಕ್ಷ್ಮ ಮಾಹಿತಿಯನ್ನು ರಕ್ಷಿಸುತ್ತದೆ.

ಇದನ್ನೂ ಓದಿ- ಆಗಸ್ಟ್ ಒಂದರಿಂದ ಈ ಸ್ಮಾರ್ಟ್ ಫೋನ್ ಗಳು ಕಾರ್ಯ ನಿರ್ವಹಿಸುವುದಿಲ್ಲ ! ನಿಮ್ಮ ಕೈಯ್ಯಲಿರುವ ಫೋನ್ ಯಾವುದು ?

ಹೌದು, ನಿಮ್ಮ ನಿಮ್ಮ ವೆಬ್ ಬ್ರೌಸರ್‌ನ ಮೇಲ್ಪಾಗದಲ್ಲಿ ನೀವು ನೋಡುವ ಲಾಕ್ ಐಕಾನ್ ನಿಮ್ಮ ಬ್ರೌಸರ್ ಮತ್ತು ವೆಬ್‌ಸೈಟ್ ನಡುವೆ ಸ್ಥಾಪಿಸಲಾದ ಸಂಪರ್ಕವನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ ಎಂದು ಸೂಚಿಸುತ್ತದೆ. ಅರ್ಥಾತ್ ಯಾವುದೇ ಥರ್ಡ್ ಪಾರ್ಟಿ ಸುಲಭವಾಗಿ ನಿಮ್ಮ ಡಾಟಾವನ್ನು ಕದಿಯಲು ಸಾಧ್ಯವಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News