ನವದೆಹಲಿ: Know The Science Behind Tears - ಕೆಲವರು ತುಂಬಾ ಸಂತೋಷಗೊಂಡಾಗ, ನಗುವಾಗ ಅವರ ಕಣ್ಣಿನಿಂದ ಅನೇಕ ಬಾರಿ ಕಣ್ಣೀರು ಸುರಿಯಲು ಪ್ರಾರಂಭಿಸುವುದನ್ನು ನೀವು ನೋಡಿರಬಹುದು. ಇದನ್ನು ಸಾಮಾನ್ಯ ಭಾಷೆಯಲ್ಲಿ ಸಂತೋಷದ ಕಣ್ಣೀರು ಅಥವಾ ಆನಂದ ಭಾಷ್ಪ ಎಂದೂ ಕರೆಯುತ್ತಾರೆ. ಕಣ್ಣೀರಿನ (Tears) ಹಿಂದಿನ ವಿಜ್ಞಾನ ಬಹುತೇಕರಿಗೆ ತಿಳಿದಿಲ್ಲ. ಹಾಗಾದರೆ ಕಣ್ಣೀರಿನ ಹಿಂದಿನ ವಿಜ್ಞಾನವನ್ನು (Knowledge Story) ತಿಳಿಯೋಣ ಬನ್ನಿ.
ಇದನ್ನೂ ಓದಿ-Belly Fat ಕರಗಿಸಲು ಪ್ರತಿದಿನ Morning Walk ಮಾಡಿ : ಹೇಗೆ ಇಲ್ಲಿದೆ ನೋಡಿ
ಕಣ್ಣೀರು ಬರುವುದರ ಹಿಂದೆ ಒಟ್ಟು ಎರಡು ಕಾರಣಗಳಿವೆ (2 Reasons Behind Tearing)
ಬಿಬಿಸಿ ವರದಿಯ ಪ್ರಕಾರ, ನಗುವಾಗ ಅಳು ಅಂದರೆ ಕಣೀರು ಬರುವ 2 ಕಾರಣಗಳನ್ನು ನೀಡಲಾಗಿದೆ. ಇದರಲ್ಲಿ ಮೊದಲ ಕಾರಣವೆಂದರೆ ನಾವು ಮುಕ್ತವಾಗಿ ನಗುವಾಗ ನಮ್ಮ ಮುಖದ ಜೀವಕೋಶಗಳು ಅನಿಯಂತ್ರಿತವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತವೆ. ಇದು ಸಂಭವಿಸಿದಾಗ, ನಮ್ಮ ಲ್ಯಾಕ್ರಿಮಲ್ ಗ್ರಂಥಿಯ (Lacrimal Glands) ಮೇಲಿನ ನಮ್ಮ ಮನಸ್ಸಿನ ನಿಯಂತ್ರಣ ತಪ್ಪುತ್ತದೆ ಮತ್ತು ಕಣ್ಣೀರು ಬರಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ-Stiff neck: ಬೆನ್ನು ನೋವಿನಿಂದ ಪರಿಹಾರ ಪಡೆಯಲು ಸುಲಭ ಉಪಾಯಗಳು ಇಲ್ಲಿವೆ
ಭಾವುಕರಾದಾಗ ಕಣೀರು ಬರುತ್ತದೆ (Tears Come Out When Emotional)
ಇದರ ಎರಡನೇ ಪ್ರಮುಖ ಕಾರಣವೆಂದರೆ ಹೆಚ್ಚು ನಗುವ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಯು ಅತಿ ಭಾವನಾತ್ಮಕನಾಗುತ್ತಾನೆ ಎಂದು ಹೇಳಲಾಗುತ್ತದೆ. ಅತಿಯಾದ ಭಾವುಕತೆಯು ಮುಖದ ಜೀವಕೋಶಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ, ಇದರಿಂದಾಗಿ ಕಣೀರು ಸುರಿಯಲಾರಂಭಿಸುತ್ತದೆ. ಈ ರೀತಿ ಮಾಡುವುದರಿಂದ ನಮ್ಮ ದೇಹ ಕಣ್ಣೀರಿನ ಮೂಲಕ ನಮ್ಮ ಒತ್ತಡವನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ-Basil Benefits : ತೂಕ ಇಳಿಕೆಗೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಸೇವಿಸಿ ತುಳಸಿ ಎಲೆ!
ಮಹಿಳೆಯರು ಅತಿ ಹೆಚ್ಚು ಭಾವುಕರಾಗುತ್ತಾರೆ
ಸಾಮಾನ್ಯವಾಗಿ ಈ ಸಂಪೂರ್ಣ ಪ್ರಕ್ರಿಯೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿ ವಿಭಿನ್ನವಾಗಿರುತ್ತದೆ. ಹಲವು ಜನರು ಕಡಿಮೆ ಅಳುತ್ತಾರೆ, ಆದರೆ ಕೆಲವರು ಬೇಗನೆ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಅಲ್ಲದೆ, ಮಹಿಳೆ ಅಥವಾ ಪುರುಷನಾಗಿರುವುದು ಕೂಡ ಈ ಇಡೀ ಪ್ರಕ್ರಿಯೆಯಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಭಾವನಾತ್ಮಕರು ಎಂದು ನಂಬಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.