ವಾಟ್ಸಾಪ್ ಅಕೌಂಟ್ ಹ್ಯಾಕ್ ಆಗಿದೆಯೇ ಎಂದು ಈ ರೀತಿ ತಿಳಿಯಿರಿ: ವಾಟ್ಸಾಪ್ ಇಂದು ವಿಶ್ವದ ಅತ್ಯಂತ ಜನಪ್ರಿಯ ಸಂದೇಶ ಕಳುಹಿಸುವ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ಸ್ಮಾರ್ಟ್ಫೋನ್ ಬಳಕೆದಾರರೂ ಸಹ ವಾಟ್ಸಾಪ್ ಅನ್ನು ಬಳಸುತ್ತಾರೆ. ನೀವೂ ಸಹ ವಾಟ್ಸಾಪ್ ಬಳಕೆದಾರರಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ.
ಇತ್ತೀಚಿನ ದಿನಗಳಲ್ಲಿ ಹ್ಯಾಕರ್ ಗಳು ವಾಟ್ಸಾಪ್ ಅನ್ನು ಸಹ ಹ್ಯಾಕ್ ಮಾಡುತ್ತಿದ್ದಾರೆ. ನಿಮ್ಮ ವಾಟ್ಸಾಪ್ ಖಾತೆಯನ್ನೂ ಸಹ ಹ್ಯಾಕ್ ಮಾಡಲಾಗಿದೆಯೇ? ಅಥವಾ ಅಪರಿಚಿತರು ನಿಮ್ಮ ವಾಟ್ಸಾಪ್ ಸಂದೇಶಗಳನ್ನೂ ಕದ್ದು ಓದುತ್ತಿದ್ದಾರೆಯೇ? ಎಂದು ನೀವು ಸುಲಭವಾಗಿ ತಿಳಿಯಬಹುದು. ಅಂತಹ ಸುಲಭ ಟ್ರಿಕ್ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ- ವಾಟ್ಸಾಪ್ನಲ್ಲಿ ಯಾರನ್ನಾದರೂ ಬ್ಲಾಕ್ ಮಾಡುವ ಮುನ್ನ ಈ ವಿಷಯಗಳನ್ನು ತಪ್ಪದೇ ತಿಳಿಯಿರಿ
ವಾಸ್ತವವಾಗಿ, ಇಂಟರ್ನೆಟ್ ಸಹಾಯದಿಂದ, ಯಾವುದೇ ಎಲೆಕ್ಟ್ರಾನಿಕ್ ಸಾಧನವನ್ನು ಸುಲಭವಾಗಿ ಹ್ಯಾಕ್ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಚಾಟಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಅನ್ನು ಸಹ ಬಹಳ ಸುಲಭವಾಗಿ ಹ್ಯಾಕ್ ಮಾಡಬಹುದು. ನಿಮ್ಮ ವಾಟ್ಸಾಪ್ ಖಾತೆಗೆ ಬೇರೊಬ್ಬರು ಪ್ರವೇಶವನ್ನು ಹೊಂದಿರಬಹುದು ಮತ್ತು ಅದರ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ವಾಟ್ಸಾಪ್ ಅಕೌಂಟ್ ಸುರಕ್ಷಿತವಾಗಿದೆಯೇ? ಎಂದು ಕಂಡು ಹಿಡಿಯುವುದು ಬಹಳ ಮುಖ್ಯ.
ಈ ವೈಶಿಷ್ಟ್ಯವು ಅಪಾಯಕಾರಿ ಎಂದು ಸಾಬೀತುಪಡಿಸಬಹುದು:
ವಾಟ್ಸಾಪ್ ಖಾತೆ ಹೇಗೆ ಹ್ಯಾಕ್ ಆಗಬಹುದು ಎಂದು ನೀವು ಅಚ್ಚರಿ ಪಡಬಹುದು. ವಾಟ್ಸಾಪ್ ಗೆ ಒಂದು ವೈಶಿಷ್ಟ್ಯವು ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ವಾಸ್ತವವಾಗಿ, ವಾಟ್ಸಾಪ್ ಇತ್ತೀಚಿಗೆ 'ಮಲ್ಟಿ ಡಿವೈಸ್ ಸಪೋರ್ಟ್' ಎಂಬ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯದ ಸಹಾಯದಿಂದ, ನೀವು ಒಂದೇ ಖಾತೆಯನ್ನು ಒಂದೇ ಸಮಯದಲ್ಲಿ ನಾಲ್ಕು ವಿಭಿನ್ನ ಸಾಧನಗಳಲ್ಲಿ ಬಳಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಈ ವೈಶಿಷ್ಟ್ಯವು ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡುವ ಪ್ರಕ್ರಿಯೆಯನ್ನು ಸಾಕಷ್ಟು ಸುಲಭಗೊಳಿಸುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ನೀವು ಆನ್ಲೈನ್ನಲ್ಲಿರುವುದು ಯಾರಿಗೂ ತಿಳಿಯಬಾರದೇ? ವಾಟ್ಸಾಪ್ ಪರಿಚಯಿಸಲಿದೆ ಹೊಸ ವೈಶಿಷ್ಟ್ಯ
ನಿಮ್ಮ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ?
ಇದೀಗ ನಿಮ್ಮ ವಾಟ್ಸಾಪ್ ಖಾತೆ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯುವುದು ಬಹಳ ಮುಖ್ಯ. ಅದನ್ನು ತಿಳಿಯಲು ಇಲ್ಲಿದೆ ಸುಲಭ ಟ್ರಿಕ್
* ಇದಕ್ಕಾಗಿ ಮೊದಲು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ.
* ನಂತರ ವಾಟ್ಸಾಪ್ ಸೆಟ್ಟಿಂಗ್ಗಳಿಗೆ ಹೋಗಿ.
* ವಾಟ್ಸಾಪ್ ಸೆಟ್ಟಿಂಗ್ಗಳಲ್ಲಿ, ನೀವು 'ಲಿಂಕ್ಡ್ ಡಿವೈಸಸ್' ಆಯ್ಕೆಯನ್ನು ನೋಡುತ್ತೀರಿ.
* ಈ ಆಯ್ಕೆಯನ್ನು ಕ್ಲಿಕ್ ಮಾಡುವುದರ ಮೂಲಕ, ನಿಮ್ಮ ಖಾತೆಯು ಯಾವ ಸಾಧನಗಳಲ್ಲಿ ಲಾಗ್-ಇನ್ ಆಗಿದೆ ಮತ್ತು ನೀವು ಯಾವ ಸಾಧನಗಳಲ್ಲಿ ಲಾಗ್-ಇನ್ ಆಗಿದ್ದೀರಿ ಎಂಬುದನ್ನು ನೀವು ನೋಡಬಹುದು.
ಈ ರೀತಿಯಾಗಿ, ನಿಮ್ಮ ಖಾತೆಯಲ್ಲಿ ಸಂದೇಶಗಳನ್ನು ಯಾರು ಓದುತ್ತಿದ್ದಾರೆ ಮತ್ತು ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಸುಲಭವಾಗಿ ಪತ್ತೆಹಚ್ಚಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.