ನವದೆಹಲಿ: WhatsApp New Feature - ಮೆಸೆಜಿಂಗ್ ಆಪ್ ಆಗಿರುವ ವ್ಹಾಟ್ಸಪ್ (WhatsApp) ದೀರ್ಘ ಕಾಲದಿಂದ ತನ್ನ ವಾಯಿಸ್ ಸಂದೇಶಗಳ ಪ್ಲೆಬ್ಯಾಕ್ ಸ್ಪೀಡ್ (Playback Speed)ಮೇಲೆ ಕಾರ್ಯನಿರ್ವಹಿಸುತ್ತಿದೆ. ಈ ಹೊಸ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ಯಾವುದೇ ವೈಸ್ ಸಂದೇಶವನ್ನು (Voice Message) ನಿಧಾನ ಅಥವಾ ತೀವ್ರ ವೇಗದಲ್ಲಿ ಕೇಳಬಹುದಾಗಿದೆ. ಪ್ರಸ್ತುತ ಈ ವೈಶಿಷ್ಟ್ಯ ಟೆಸ್ಟಿಂಗ್ ಫೆಸ್ ನಲ್ಲಿದೆ. ತಾಜಾ ವರದಿಗಳ ಪ್ರಕಾರ ವಾಟ್ಸ್ ಆಪ್ ವೈಸ್ ಮೆಸೇಜ್ (WhatsApp Voice Message) ಗೆ ಸಂಬಂಧಿಸಿದ ಮತ್ತೊಂದು ವೈಶಿಷ್ಟ್ಯದ ಕುರಿತು ಕೂಡ ಟೆಸ್ಟಿಂಗ್ ನಡೆಸಲಾಗುತ್ತಿದೆ ಎನ್ನಲಾಗಿದೆ. ಈ ನೂತನ ವೈಶಿಷ್ಟ್ಯದ ಅಡಿ ಬಳಕೆದಾರರು ತಮ್ಮ ಯಾವುದೇ ಧ್ವನಿ ಸಂದೇಶವನ್ನು ಕಳುಹಿಸುವ ಮೊದಲು ಅದನ್ನು ಕೇಳಬಹುದಾಗಿದೆ.
ಈ ರೀತಿ ಕಾರ್ಯನಿರ್ವಹಿಸಲಿದೆ ಹೊಸ ವೈಶಿಷ್ಟ್ಯ
ಪ್ರಸ್ತುತ ವಾಟ್ಸ್ ಆಪ್ ಮೇಲೆ ನೀವು ಯಾವುದಾದರೊಂದು ಧ್ವನಿ (WhatsApp Audio) ಸಂದೇಶ ಕಳುಹಿಸಬೇಕಾದರೆ, ಅದಕ್ಕಾಗಿ ಮೈಕ್ ಗುಂಡಿಯನ್ನೊತ್ತಿ ಹಿಡಿದು ರೆಕಾರ್ಡ್ ಮಾಡಬೇಕು. ನೀವು ಗುಂಡಿಯನ್ನು ಬಿಟ್ಟಾಗ ಧ್ವನಿ ಸಂದೇಶ ಸ್ವಯಂಚಾಲಿತವಾಗಿ ರವಾನೆಯಾಗುತ್ತದೆ. ಆದರೆ, ಹೊಸ ವೈಶಿಷ್ಟ್ಯ ಬಂದ ಬಳಿಕ ಬಳಕೆದಾರರಿಗೆ ತಮ್ಮ ಧ್ವನಿ ಸಂದೇಶ ರವಾನೆಯಾಗುವ ಮೊದಲು ಕೇಳಲು ಅವಕಾಶ ಸಿಗಲಿದೆ. ಪ್ರಸ್ತುತ ಬಳಕೆದಾರರ ಸಂದೇಶ ನೇರವಾಗಿ ರವಾನೆಯಾಗುತ್ತದೆ.
ಇದನ್ನೂ ಓದಿ- Made in India App: ವಾಟ್ಸಾಪ್, ಟ್ವಿಟರ್‌ಗೆ ಟಕ್ಕರ್ ನೀಡುತ್ತಿರುವ ಟಾಪ್ 5 ಮೇಡ್ ಇನ್ ಇಂಡಿಯಾ ಆ್ಯಪ್‌ಗಳಿವು
ಈ ಕುರಿತು ಪ್ರಕಟಗೊಂಡ ವರದಿಗಳನ್ನು ನಂಬುವುದಾದರೆ, WhatsApp ತನ್ನ ಆಪ್ ನಲ್ಲಿ ಒಂದು ರಿವ್ಯೂ ಗುಂಡಿಯನ್ನು ನೀಡುತ್ತಿದೆ. ಇದನ್ನು ಒತ್ತಿ ನೀವು ನಿಮ್ಮ ಧ್ವನಿ ಸಂದೇಶವನ್ನು ಕೇಳಬಹುದು ಎನ್ನಲಾಗಿದೆ. ಬಳಿಕ ಸಂದೇಶವನ್ನು ಕಳುಹಿಸಬೇಕೋ ಅಥವಾ ಬೇಡವೋ ಎಂಬುದನ್ನು ಬಳಕೆದಾರರು ನಿರ್ಧರಿಸಬೇಕಾಗಲಿದೆ.
ಇದನ್ನೂ ಓದಿ- ಉಚಿತವಾಗಿ ಬದಲಾಯಿಸಲಾಗುವುದು ಈ ಪೋನಿನ ಬ್ಯಾಟರಿ : ಕಂಪನಿ ಪ್ರಕಟಿಸಿದೆ ಬಹು ದೊಡ್ಡ ನಿರ್ಧಾರ
ದೊಡ್ಡ ಗಾತ್ರದಲ್ಲಿ ಕಾಣಿಸಿಕೊಳ್ಳಲಿವೆ ಫೋಟೋ ಮತ್ತು ವಿಡಿಯೋ
ನಿನ್ನೆಯಷ್ಟೇ ಈ ಕುರಿತು ಟ್ವೀಟ್ ಮಾಡಿದ್ದ ವಾಟ್ಸ್ ಆಪ್, ಬಳಕೆದಾರರು ಇನ್ಮುಂದೆ ಸಂಪೂರ್ಣ ಗಾತ್ರ ಮತ್ತು ಆಕಾರದಲ್ಲಿ ವಿಡಿಯೋ ಹಾಗೂ ಭಾವಚಿತ್ರಗಳನ್ನು ನೋಡಬಹುದು ಎಂದಿತ್ತು. ಇದಕ್ಕೂ ಮೊದಲು ವಾಟ್ಸ್ ಆಪ್ ಮೇಲೆ ಯಾವುದೇ ಓರ್ವ ವ್ಯಕ್ತಿ ಫೋಟೋ ಕಳುಹಿಸಿದರೆ, ಅದರ ಪ್ರಿವ್ಯೂ ವರ್ಗಾಕಾರದಲ್ಲಿ ಕಾಣಿಸುತ್ತಿತ್ತು. ಅಂದರೆ ಫೋಟೋ ಒಂದು ವೇಳೆ ಲಂಬಾಕಾರದ್ದಾಗಿದ್ದರೂ ಕೂಡ ಅದರ ಪ್ರಿವ್ಯೂ ಮಾತ್ರ ವರ್ಗಾಕಾರದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಲಂಬಾಕಾರದ ಫೋಟೋ ವಿಕ್ಷೀಸಲು ವರ್ಗಾಕಾರದ ಪ್ರಿವ್ಯೂ ಮೇಲೆ ಕ್ಲಿಕ್ಕಿಸಬೇಕಾಗುತ್ತಿತ್ತು. ಇನ್ಮುಂದೆ ಫೋಟೋ ಯಾವ ಆಕಾರದ್ದಿರಲಿದೆಯೋ ಅದರ ಪ್ರಿವ್ಯೂ ಕೂಡ ಅದೇ ಆಕಾರದ್ದಿರಲಿದೆ.
ಇದನ್ನೂ ಓದಿ-WhatsAppನಿಂದ ಹೊಸ ವೈಶಿಷ್ಟ್ಯ ಪರಿಚಯ, ಬಳಕೆದಾರರಿಗೇನು ಲಾಭ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.