WhatsApp New Feature: ವಾಟ್ಸ್ ಆಪ್ ನಲ್ಲಿ ಇನ್ಮುಂದೆ ದಿನಾಂಕ ಆಧರಿಸಿ ನೀವು ಈ ಕೆಲಸ ಮಾಡಬಹುದು, ಹೊಸ ವೈಶಿಷ್ಟ್ಯ ಬಿಡುಗಡೆ!

WhatsApp New Feature: ವಾಟ್ಸಾಪ್‌ ತನ್ನ ಬಳಕೆದಾರರಿಗೆ ಸರ್ಚ್ ಬೈ ಡೇಟ್ ವೈಶಿಷ್ಟ್ಯವನ್ನು ಹೊರತಂದಿದೆ. ಈ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ಚಾಟ್‌ನಲ್ಲಿ ನಿರ್ದಿಷ್ಟ ದಿನಾಂಕದ ಸಂದೇಶಗಳನ್ನು ಹುಡುಕಲು ಸಾಧಯ್ವಾಗಲಿದೆ. ಈ ವೈಶಿಷ್ಟ್ಯವನ್ನು ಬಳಸುವುದು ತುಂಬಾ ಸುಲಭವಾಗಿದೆ.(Technology News In Kannada)  

Written by - Nitin Tabib | Last Updated : Feb 29, 2024, 07:24 PM IST
  • ನೀವು ವಾಟ್ಸ್ ಆಪ್ ಚಾಟ್‌ನಲ್ಲಿ ದಿನಾಂಕದ ಪ್ರಕಾರ ಸಂದೇಶಗಳನ್ನು ಹುಡುಕಬಹುದು.
  • ಮೆಟಾ ಸಿಇಒ ಮಾರ್ಕ್ ತಮ್ಮ ವಾಟ್ಸಾಪ್ ಚಾನೆಲ್ ಮೂಲಕ ವೈಶಿಷ್ಟ್ಯದ ಕುರಿತು ಘೋಷಿಸಿದ್ದಾರೆ.
  • ಈ ವೈಶಿಷ್ಟ್ಯದ ಸಹಾಯದಿಂದ ಸಂದೇಶಗಳನ್ನು ಹುಡುಕುವುದು ಮತ್ತಷ್ಟು ಸುಲಭಾಗಲಿದೆ.
WhatsApp New Feature: ವಾಟ್ಸ್ ಆಪ್ ನಲ್ಲಿ ಇನ್ಮುಂದೆ ದಿನಾಂಕ ಆಧರಿಸಿ ನೀವು ಈ ಕೆಲಸ ಮಾಡಬಹುದು, ಹೊಸ ವೈಶಿಷ್ಟ್ಯ ಬಿಡುಗಡೆ! title=

WhatsApp New Feature: ವಾಟ್ಸಾಪ್‌ ತನ್ನ ಬಳಕೆದಾರರಿಗೆ ಸರ್ಚ್ ಬೈ ಡೇಟ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ವಾಟ್ಸಾಪ್ ಚಾನೆಲ್‌ನಲ್ಲಿ ಈ ವೈಶಿಷ್ಟ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಚಾಟ್‌ನಲ್ಲಿ ನಿರ್ದಿಷ್ಟ ದಿನಾಂಕವನ್ನು ಆಯ್ಕೆ ಮಾಡುವ ಮೂಲಕ ಸಂದೇಶಗಳನ್ನು ಹುಡುಕಲು ಬಳಕೆದಾರರನ್ನು ಅನುವು ಮಾಡಿಕೊಡಲಿದೆ. ಇದರೊಂದಿಗೆ, ಬಳಕೆದಾರರು ಇದೀಗ  ಯಾವುದೇ ಚಾಟ್‌ನಲ್ಲಿ ಪ್ರಮುಖ ಸಂದೇಶಗಳನ್ನು ಸುಲಭವಾಗಿ ಹುಡುಕಬಹುದು. ಇದನ್ನು ಬಳಸುವುದು ತುಂಬಾ ಸುಲಭ. ಬನ್ನಿ, ವೈಶಿಷ್ಟ್ಯದ ಬಗ್ಗೆ ವಿಸ್ತೃತ ಮಾಹಿತಿಯನ್ನು ಪಡೆದುಕೊಳ್ಳೋಣ,  (Technology News In Kannada)

ವಾಟ್ಸ್ ಆಪ್ ಸರ್ಚ್ ಬೈ ಡೇಟ್ ವೈಶಿಷ್ಟ್ಯವನ್ನು ಬಳಸಿ, ಬಳಕೆದಾರರು ಸಂಪೂರ್ಣ ಚಾಟ್‌ನಲ್ಲಿರುವ ಎಲ್ಲಾ ಸಂದೇಶಗಳನ್ನು ಹೊರತುಪಡಿಸಿ ನಿರ್ದಿಷ್ಟ ದಿನಾಂಕದ ಸಂದೇಶಗಳನ್ನು ಹುಡುಕಲು ಸಾಧ್ಯವಾಗಲಿದೆ. ಇದುವರೆಗೆ, ನೀವು ಪದಗಳನ್ನು ಟೈಪ್ ಮಾಡುವ ಮೂಲಕ ಮಾತ್ರ ಸಂದೇಶಗಳ ಹುಡುಕಾಟ ನಡೆಸಬಹುದಾಗಿತ್ತು, ಇದು ಪ್ರತಿಯೊಬ್ಬ ಬಳಕೆದಾರರಿಗೆ ಉಪಯುಕ್ತ ಮತ್ತು ಸುಲಭದ ಮಾತಾಗಿರಲಿಲ್ಲ.

ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ಜಾಗತಿಕವಾಗಿ ಹೊರತರಲಾಗಿದೆ. ಹೊಸ ವೈಶಿಷ್ಟ್ಯವನ್ನು ಬಳಸಲು, ಬಳಕೆದಾರರು ಮೊದಲು ಅಪ್ಲಿಕೇಶನ್ ಅನ್ನು ನವೀಕರಿಸಬೇಕಾಗುತ್ತದೆ. ಅಪ್ಲಿಕೇಶನ್ ಹೊರತುಪಡಿಸಿ, ಈ ವೈಶಿಷ್ಟ್ಯವು ವಾಟ್ಸ್ ಆಪ್  ವೆಬ್ ಬಳಕೆದಾರರು ಮತ್ತು ಮ್ಯಾಕ್ ಡೆಸ್ಕ್‌ಟಾಪ್‌ಗೆ ಲೈವ್ ಆಗಿದೆ.

ಇದನ್ನೂ ಓದಿ-Netflix Tips: ಇಂಟರ್ನೆಟ್ ಇಲ್ಲದೆಯೂ Netflix ಬಳಸಬಹುದು! ಸುಲಭವಾಗಿ ಚಿತ್ರ-ವೆಬ್ ಸರಣಿಗಳನ್ನು ಡೌನ್ಲೋಡ್ ಮಾಡಬಹುದು!

ಐಫೋನ್ ಬಳಕೆದಾರರು ಈ ರೀತಿ ಸರ್ಚ್ ಬೈ ಡೇಟ್ ನಡೆಸಬಹುದು
>> ಸರ್ಚ್ ಬೈ ಡೇಟ್ ವೈಶಿಷ್ಟ್ಯವನ್ನು ಬಳಸಲು, ಐಫೋನ್ ಬಳಕೆದಾರರು ಮೊದಲು ಸಂದೇಶವನ್ನು ಹುಡುಕಬೇಕಾದ ಚಾಟ್ ಅನ್ನು ತೆರೆಯಬೇಕಾಗುತ್ತದೆ.
>> ಅದರ ನಂತರ ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಬಳಿಕ ನೀವು ಪ್ರೊಫೈಲ್ ಮಾಹಿತಿ ವಿಭಾಗದಲ್ಲಿ ಹುಡುಕಾಟ ಆಯ್ಕೆಯನ್ನು ಪಡೆಯುತ್ತೀರಿ.
>> ಅದರ ಮೇಲೆ ಕ್ಲಿಕ್ ಮಾಡಿ. ಈಗ ಸ್ಕ್ರೀನ್  ಕೆಳಗಿನ ಬಲಭಾಗದಲ್ಲಿ ಕ್ಯಾಲೆಂಡರ್ ಐಕಾನ್ ಕಾಣಿಸಲಿದೆ.
>> ನೀವು ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ, ಎಲ್ಲಾ ದಿನಾಂಕಗಳ ಆಯ್ಕೆಯು ಕಾಣಿಸಿಕೊಳ್ಳುತ್ತವೆ.
>> ನೀವು ಸಂದೇಶವನ್ನು ಹುಡುಕಲು ಬಯಸುವ ದಿನಾಂಕವನ್ನು ಆಯ್ಕೆಮಾಡಿ.
>> ನಂತರ ನೀವು ಅಲ್ಲಿಗೆ ಹೋಗು ಮೇಲೆ ಕ್ಲಿಕ್ ಮಾಡುವುದರಿಂದ, ನೀವು ಸಂಪೂರ್ಣ ಚಾಟ್‌ನಲ್ಲಿರುವ ಎಲ್ಲಾ ಸಂದೇಶಗಳನ್ನು ಹೊರತುಪಡಿಸಿ ನಿಗದಿತ ದಿನಾಂಕದ ಚಾಟ್‌ಗೆ ನೇರವಾಗಿ ಹೋಗುವಿರಿ.

ಇದನ್ನೂ ಓದಿ-Lok Sabha Elections 2024: ಮತದಾನದಲ್ಲಿ ಎರಡು ಹಂತದ ಪರಿಶೀಲನೆ, ಬಿಜೆಪಿಯ ಈ ಬೇಡಿಕೆಯ ಹಿಂದಿನ ಲೆಕ್ಕಾಚಾರ ಏನು?

ಅಂಡ್ರಾಯಿಡ್ ಬಳಕೆದಾರರು ಈ ವೈಶಿಷ್ಟ್ಯವನ್ನು  ಈ ರೀತಿ ಬಳಸಬಹುದು
>>ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಾಗಿ, ಚಾಟ್ ತೆರೆದ ನಂತರ, ಬಲಭಾಗದಲ್ಲಿರುವ ಮೂರು ಡಾಟ್ ಐಕಾನ್ ಮೇಲೆ ಕ್ಲಿಕ್ ಮಾಡಿ.
>> ಇದರ ನಂತರ ನೀವು ಸರ್ಚ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
>> ಬಳಿಕ ಕ್ಯಾಲೆಂಡರ್ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ದಿನಾಂಕವನ್ನು ಆಯ್ಕೆ ಮಾಡಿ.
>> ಈ ರೀತಿಯಾಗಿ ನೀವು ದಿನಾಂಕದ ಪ್ರಕಾರ ಸಂದೇಶಗಳನ್ನು ಹುಡುಕಲು ಸಾಧ್ಯವಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News