ವಿವೋದ ಬಣ್ಣ ಬದಲಿಸುವ ಸ್ಮಾರ್ಟ್‌ಫೋನ್ ಮೇಲೆ ಬಂಪರ್ ಆಫರ್‌ಗಳು

Vivo Year-End Sale: ನೀವು ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ವಿವೋದ ಜನಪ್ರಿಯ ಬಣ್ಣ ಬದಲಾಯಿಸುವ ಸ್ಮಾರ್ಟ್‌ಫೋನ್ ಮೇಲೆ ಬಂಪರ್ ಆಫರ್‌ಗಳು ಲಭ್ಯವಾಗಲಿವೆ. ಏನಿದು ಆಫರ್? ಇದರ ಲಾಭವನ್ನು ಹೇಗೆ ಪಡೆಯುವುದು ಎಂದು ತಿಳಿಯಿರಿ.

Written by - Yashaswini V | Last Updated : Dec 20, 2022, 10:44 AM IST
  • ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ವಿವೋ ಕೂಡ ನಿನ್ನೆಯಿಂದ ಅಂದರೆ ಡಿಸೆಂಬರ್ 19 ರಿಂದ ವರ್ಷಾಂತ್ಯದ ಸೇಲ್ ಅನ್ನು ಆರಂಭಿಸಿದೆ.
  • ಸೇಲ್‌ನಲ್ಲಿ, ವಿವೋ ತನ್ನ ಜನಪ್ರಿಯ ಸ್ಮಾರ್ಟ್‌ಫೋನ್ಗಳ ಖರೀದಿಯಲ್ಲಿ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ

    ಈ ವರ್ಷಾಂತ್ಯದವರೆಗೂ ಅಂದರೆ ಡಿಸೆಂಬರ್ 31 ರವರೆಗೆ ಈ ಸೇಲ್ ನಡೆಯಲಿದ್ದು ಇದರಲ್ಲಿ ಏನೆಲ್ಲಾ ಕೊಡುಗೆಗಳು ಲಭ್ಯವಿವೆ ಎಂದು ತಿಳಿಯೋಣ...
ವಿವೋದ ಬಣ್ಣ ಬದಲಿಸುವ ಸ್ಮಾರ್ಟ್‌ಫೋನ್ ಮೇಲೆ ಬಂಪರ್ ಆಫರ್‌ಗಳು title=
Vivo Year-End Sale

Vivo Year-End Sale: ಎಲ್ಲೆಡೆ ಹೊಸ ವರ್ಷದ ಸಂಭ್ರಮಾಚರಣೆಗಾಗಿ ತಯಾರಿಗಳು ಆರಂಭವಾಗಿವೆ. ಇದರೊಂದಿಗೆ ಇಯರ್ ಎಂಡಿಂಗ್ ಸೇಲ್ ಕೂಡ ಆರಂಭವಾಗಿದೆ. ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ವಿವೋ ಕೂಡ ನಿನ್ನೆಯಿಂದ ಅಂದರೆ ಡಿಸೆಂಬರ್ 19 ರಿಂದ ವರ್ಷಾಂತ್ಯದ ಸೇಲ್ ಅನ್ನು ಆರಂಭಿಸಿದೆ. ಈ ಸೇಲ್‌ನಲ್ಲಿ,  ವಿವೋ ತನ್ನ ಜನಪ್ರಿಯ ಸ್ಮಾರ್ಟ್‌ಫೋನ್ಗಳಾದ Vivo V25 ಸರಣಿ, Vivo Y75 ಲೈನ್‌ಅಪ್ ಮತ್ತು Vivo Y35 ನಲ್ಲಿ ಭರ್ಜರಿ ಕೊಡುಗೆಗಳನ್ನು ಕೂಡ ನೀಡುತ್ತಿದೆ. ಈ ವರ್ಷಾಂತ್ಯದವರೆಗೂ ಅಂದರೆ ಡಿಸೆಂಬರ್ 31 ರವರೆಗೆ ಈ ಸೇಲ್ ನಡೆಯಲಿದ್ದು ಇದರಲ್ಲಿ ಏನೆಲ್ಲಾ ಕೊಡುಗೆಗಳು ಲಭ್ಯವಿವೆ ಎಂದು ತಿಳಿಯೋಣ...

ವಿವೋದ ಬಣ್ಣ ಬದಲಿಸುವ ಸ್ಮಾರ್ಟ್‌ಫೋನ್ ಮೇಲೆ ಕ್ಯಾಶ್‌ಬ್ಯಾಕ್ ಆಫರ್:
ವಿವೋ ತನ್ನ ಜನಪ್ರಿಯ ಬಣ್ಣ ಬದಲಿಸುವ ಸ್ಮಾರ್ಟ್‌ಫೋನ್ ಮೇಲೆ ಕೂಡ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಪರಿಚಯಿಸಿದೆ. ಎರಡು ರೂಪಾಂತರಗಳಲ್ಲಿ ಲಭ್ಯವಿರುವ ವಿವೋ ಕಂಪನಿಯ ಬಣ್ಣ ಬದಲಾಯಿಸುವ ಸ್ಮಾರ್ಟ್‌ಫೋನ್ Vivo V25 Pro 8 GB RAM + 128 GB ಸ್ಟೋರೇಜ್‌ನ ಬೆಲೆ 35,990 ರೂಪಾಯಿಗಳಾಗಿದ್ದರೆ, ಇದರ 12 GB RAM + 256 GB ಸ್ಟೋರೇಜ್‌ನ ಬೆಲೆ 39,990 ರೂಪಾಯಿಗಳು. ಆದರೆ, ಈ ಸೇಲ್‌ನಲ್ಲಿ ನೀವು ಸ್ಮಾರ್ಟ್‌ಫೋನ್ ಅನ್ನು ಐಸಿಐಸಿಐ ಬ್ಯಾಂಕ್ ಕಾರ್ಡ್ ಗಳನ್ನು ಬಳಸಿ ಖರೀದಿಸಿದರೆ  2,500 ರೂ.ವರೆಗಿನ ಕ್ಯಾಶ್‌ಬ್ಯಾಕ್‌ ಲಭ್ಯವಾಗಲಿದೆ.

ಇದನ್ನೂ ಓದಿ- TVS iQube: ಈ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗೆ ತೀವ್ರ ಬೇಡಿಕೆ, 1338% ಹೆಚ್ಚಿದ ಮಾರಾಟ

Vivo V25 Pro ಮಾತ್ರವಲ್ಲದೆ, Vivo V25 ನ ಹಿಂದಿನ ಪ್ಯಾನೆಲ್ ಕೂಡ ಬಣ್ಣವನ್ನು ಬದಲಾಯಿಸುತ್ತದೆ.  ಇದರ  8 GB RAM + 128 GB ಸ್ಟೋರೇಜ್ ರೂಪಾಂತರದ ಬೆಲೆ 27,999 ರೂ. ಮತ್ತು 12 GB RAM + 128 GB ಸ್ಟೋರೇಜ್ ರೂಪಾಂತರದ ಬೆಲೆ 31,999 ರೂ. ಆಗಿದೆ. ಆದರೆ, ನೀವು ಈ ಸ್ಮಾರ್ಟ್‌ಫೋನ್ ಅನ್ನು ಐಸಿಐಸಿಐ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಇದರಲ್ಲಿಯೂ 2,000 ರೂ.ಗಳವರೆಗೆ ಕ್ಯಾಶ್‌ಬ್ಯಾಕ್‌ ಪ್ರಯೋಜನ ಸಿಗಲಿದೆ.

ಇದನ್ನೂ ಓದಿ- ಎಲ್ಪಿಜಿ, ವಿದ್ಯುತ್ ಅಗತ್ಯವಿಲ್ಲ, ಖರ್ಚಿಲ್ಲದೇ ಆಹಾರ ತಯಾರಿಸಲು ಸಹಾಯಕವಾಗಲಿದೆ ಈ ಸ್ಟವ್‌

Vivo Y75, Vivo Y35 ಖರೀದಿಯಲ್ಲೂ ಸಿಗಲಿದೆ ಕ್ಯಾಶ್‌ಬ್ಯಾಕ್ ಕೊಡುಗೆ:
ಈ ವರ್ಷಾಂತ್ಯದ ಸೇಲ್‌ನಲ್ಲಿ ವಿವೋ Vivo Y75, Vivo Y35 ಖರೀದಿಯಲ್ಲೂ ಉತ್ತಮ ಕೊಡುಗೆಗಳನ್ನು ಪರಿಚಯಿಸಿದೆ. Vivo Y75 4G ಬೆಲೆ 20,990 ರೂ.ಗಳಾಗಿದ್ದರೆ,  Vivo Y75 5G ಬೆಲೆ 21,990ರೂ. ಆಗಿದೆ. ಆದರೆ, ವಿವೋ ಕಂಪನಿಯ ವರ್ಷಾಂತ್ಯದ ಸೇಲ್‌ನಲ್ಲಿ ನೀವು ಐಸಿಐಸಿಐ ಬ್ಯಾಂಕ್ ಕಾರ್ಡ್ ಮೂಲಕ ಈ ಸ್ಮಾರ್ಟ್‌ಫೋನ್ಗಳನ್ನು ಖರೀದಿಸಿದರೆ  1500 ರೂ.ಗಳವರೆಗೆ ಡಿಸ್ಕೌಂಟ್ ಲಭ್ಯವಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News