Vivo Smartphone: 25 ಸಾವಿರದೊಳಗೆ ಅದ್ಭುತ ವೈಶಿಷ್ಟ್ಯ ಹೊಂದಿರುವ Vivo ಸ್ಮಾರ್ಟ್‍ಫೋನ್‍

Vivo Y100 Smartphone: ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ Vivo Y100 ಸ್ಮಾರ್ಟ್‍ಫೋನಿನ ಬೆಲೆ ಬಹಿರಂಗವಾಗಿದೆ. ಇದರ ಪ್ರಕಾರ ಈ ಫೋನ್ ಒಂದೇ ಕಾನ್ಫಿಗರೇಶನ್‌ನೊಂದಿಗೆ ಬರುತ್ತದೆ (8 GB RAM ಮತ್ತು 128 GB ಸಂಗ್ರಹಣೆ). Vivo Y100 ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.

Written by - Puttaraj K Alur | Last Updated : Feb 9, 2023, 03:47 PM IST
  • Vivo ಶೀಘ್ರದಲ್ಲೇ ಉತ್ತಮ ವೈಶಿಷ್ಟ್ಯ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ
  • ಈಗಾಗಲೇ ಈ ಫೋನ್‍ನ ವೈಶಿಷ್ಟ್ಯಗಳು ಮತ್ತು ವಿಶೇಷಣಗಳು ಸೋಷಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿವೆ
  • ಅದ್ಭುತ ವಿನ್ಯಾಸ ಹೊಂದಿರುವ Vivo Y100 ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ
Vivo Smartphone: 25 ಸಾವಿರದೊಳಗೆ ಅದ್ಭುತ ವೈಶಿಷ್ಟ್ಯ ಹೊಂದಿರುವ Vivo ಸ್ಮಾರ್ಟ್‍ಫೋನ್‍ title=
Vivo Y100 ಸ್ಮಾರ್ಟ್‌ಫೋನ್

ನವದೆಹಲಿ: Vivo ಶೀಘ್ರದಲ್ಲೇ ಉತ್ತಮ ವೈಶಿಷ್ಟ್ಯ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಈಗಾಗಲೇ ಈ ಫೋನ್‍ನ ವೈಶಿಷ್ಟ್ಯಗಳು ಮತ್ತು ವಿಶೇಷಣಗಳು ಸೋಷಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿವೆ. ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಈ ಫೋನ್ ಒಂದೇ ಕಾನ್ಫಿಗರೇಶನ್‌ನೊಂದಿಗೆ ಬರುತ್ತದೆ (8 GB RAM ಮತ್ತು 128 GB ಸ್ಟೋರೇಜ್). Vivo Y100 ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.

ಭಾರತದಲ್ಲಿ Vivo Y100 ಬೆಲೆ

Vivo Y100 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 24,999 ರೂ. ಆಗಿರುತ್ತದೆ ಎಂದು ಸೋರಿಕೆಯಾದ ಮಾಹಿತಿ ಮೂಲಕ ತಿಳಿದುಬಂದಿದೆ. ಇದರ ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ಏನನ್ನೂ ಹೇಳಲಾಗಿಲ್ಲ. ಇತ್ತೀಚಿನ ವರದಿಯ ಪ್ರಕಾರ ಈ ಸಾಧನವು ಫೆಬ್ರವರಿ 16ರಂದು ಖರೀದಿಗೆ ಲಭ್ಯವಿರುತ್ತದೆ. ಹೀಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಇದರ ಬಗ್ಗೆ ಅಧಿಕೃತವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಫಾರ್ಚುನರ್‌ಗೆ ಟಕ್ಕರ್ ನೀಡಲು ಕೈಗೆಟುಕುವ ಬೆಲೆಯಲ್ಲಿ ಹೊಸ ಎಸ್‌ಯುವಿ ಬಿಡುಗಡೆ ಮಾಡಿದ ಮಹೀಂದ್ರಾ

Vivo Y100 ವಿಶೇಷಣಗಳು

ವರದಿಗಳ ಪ್ರಕಾರ Vivo Y100 FHD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ದರದೊಂದಿಗೆ 6.38-ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಇದರ ಪರದೆಯು 1,300 ನಿಟ್ಸ್ ಬ್ರೈಟ್‌ನೆಸ್ ಮತ್ತು HDR10+ವರೆಗೆ ಬೆಂಬಲಿಸುತ್ತದೆ. ಫೋನ್ Android 13 OSನಲ್ಲಿ ಕಾರ್ಯನಿರ್ವಹಿಸುತ್ತದೆ.

Vivo Y100 ಬ್ಯಾಟರಿ

Vivo Y100 ಡೈಮೆನ್ಸಿಟಿ 900 ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ. ಫೋನ್ 8GB RAM ಮತ್ತು 128GBವರೆಗೆ ಸ್ಟೋರೇಜ್ ಹೊಂದಿರುವ ನಿರೀಕ್ಷೆಯಿದೆ. ಫೋನ್ 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4500mAh ಬ್ಯಾಟರಿಯನ್ನು ಸಹ ಹೊಂದಿರಲಿದೆ ಎಂದು ಹೇಳಲಾಗಿದೆ.  

ಇದನ್ನೂ ಓದಿ: ಮಾರುಕಟ್ಟೆಯಲ್ಲಿರುವ ಅಗ್ಗದ 7 ಸೀಟರ್ ಇದುವೇ! ಮಾರಾಟದಲ್ಲಿಯೂ ಭರ್ಜರಿ ಹೆಚ್ಚಳ !

Vivo Y100 ಕ್ಯಾಮೆರಾ

Vivo Y100 ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದು OIS ಬೆಂಬಲದೊಂದಿಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಹೊಂದಿರುತ್ತದೆ. Vivo Y100 ಟ್ವಿಲೈಟ್ ಗೋಲ್ಡ್, ಪೆಸಿಫಿಕ್ ಬ್ಲೂ ಮತ್ತು ಮೆಟಲ್ ಬ್ಲ್ಯಾಕ್ ಮುಂತಾದ ಬಣ್ಣಗಳಲ್ಲಿ ಬರಲಿದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News