Vivo ಸ್ಮಾರ್ಟ್‌ಫೋನ್ ಡೀಲ್: 21,000 ಮೌಲ್ಯದ ಸ್ಮಾರ್ಟ್‌ಫೋನ್ ಅನ್ನು ಕೇವಲ 699 ರೂ.ಗಳಿಗೆ ಖರೀದಿಸಿ

Flipkart Biggest Discount On Vivo: ಜನಪ್ರಿಯ ಇ ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ವಿವೋ ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ಇದುವರೆಗೆ ಅತಿದೊಡ್ಡ ರಿಯಾಯಿತಿಯನ್ನು ನೀಡಲಾಗುತ್ತಿದೆ. ವಿವೋ T1 44W ಸ್ಮಾರ್ಟ್‌ಫೋನ್‌ನಲ್ಲಿ ಭರ್ಜರಿ 15,300 ರೂ.ಗಳ ಡಿಸ್ಕೌಂಟ್ ನೀಡಲಾಗುತ್ತಿದೆ. 

Written by - Yashaswini V | Last Updated : Nov 24, 2022, 12:50 PM IST
  • ಫ್ಲಿಪ್‌ಕಾರ್ಟ್‌ನಲ್ಲಿ ವಿವೋ T1 44W ಸ್ಮಾರ್ಟ್‌ಫೋನ್‌ನಲ್ಲಿ ಭರ್ಜರಿ 15,300 ರೂ.ಗಳ ಡಿಸ್ಕೌಂಟ್ ನೀಡಲಾಗುತ್ತಿದೆ.
  • ವಾಸ್ತವವಾಗಿ, ವಿವೋ T1 44W ಸ್ಮಾರ್ಟ್‌ಫೋನ್‌ನ ಬೆಲೆ 20,990 ರೂ. ಆಗಿದೆ.
  • ಆದರೆ, ಫ್ಲಿಪ್‌ಕಾರ್ಟ್‌ನಿಂದ ಇದರ ಮೇಲೆ ಗ್ರಾಹಕರಿಗೆ 23% ರಿಯಾಯಿತಿಯನ್ನು ನೀಡಲಾಗುತ್ತಿದೆ.
Vivo ಸ್ಮಾರ್ಟ್‌ಫೋನ್ ಡೀಲ್: 21,000 ಮೌಲ್ಯದ ಸ್ಮಾರ್ಟ್‌ಫೋನ್ ಅನ್ನು ಕೇವಲ 699 ರೂ.ಗಳಿಗೆ ಖರೀದಿಸಿ  title=
Flipkart Offer

Flipkart Biggest Discount On Vivo: ಸ್ಮಾರ್ಟ್‌ಫೋನ್‌ ತಯಾರಕ ವಿವೋ ಕಂಪನಿಯು ಇತ್ತೀಚೆಗಷ್ಟೇ ಉತ್ತಮ ಕ್ಯಾಮೆರಾ, ನಯವಾದ ಡಿಸ್ಪ್ಲೇ ಮತ್ತು ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವುಳ್ಳ ಅತ್ಯುತ್ತಮ ಸ್ಮಾರ್ಟ್‌ಫೋನ್‌ ವಿವೋ ಟಿ1 44ಡಬ್ಲ್ಯೂಅನ್ನು ಬಿಡುಗಡೆ ಮಾಡಿದೆ. ಇದೀಗ ಜನಪ್ರಿಯ ಇ ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ವಿವೋ T1 44W ಸ್ಮಾರ್ಟ್‌ಫೋನ್‌ನಲ್ಲಿ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಇದು ಈ ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು ನೀಡುತ್ತಿರುವ ಡೀಲ್‌ಗಿಂತ ಉತ್ತಮವಾಗಿದೆ. ಫ್ಲಿಪ್‌ಕಾರ್ಟ್‌ನ ಈ ಕೊಡುಗೆಯ ಮೂಲಕ 21,000 ಮೌಲ್ಯದ ಸ್ಮಾರ್ಟ್‌ಫೋನ್ ಅನ್ನು ಕೇವಲ 699 ರೂ.ಗಳಿಗೆ ಖರೀದಿಸಬಹುದಾಗಿದೆ.

ಏನಿದು ಆಫರ್?
ಫ್ಲಿಪ್‌ಕಾರ್ಟ್‌ನಲ್ಲಿ ವಿವೋ T1 44W ಸ್ಮಾರ್ಟ್‌ಫೋನ್‌ನಲ್ಲಿ ಭರ್ಜರಿ 15,300 ರೂ.ಗಳ ಡಿಸ್ಕೌಂಟ್ ನೀಡಲಾಗುತ್ತಿದೆ.  ವಾಸ್ತವವಾಗಿ, ವಿವೋ T1 44W ಸ್ಮಾರ್ಟ್‌ಫೋನ್‌ನ ಬೆಲೆ 20,990 ರೂ. ಆಗಿದೆ. ಆದರೆ, ಫ್ಲಿಪ್‌ಕಾರ್ಟ್‌ನಿಂದ   ಇದರ ಮೇಲೆ ಗ್ರಾಹಕರಿಗೆ 23% ರಿಯಾಯಿತಿಯನ್ನು ನೀಡಲಾಗುತ್ತಿದೆ. ರಿಯಾಯಿತಿಯ ನಂತರ, ಈ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಿಂದ ರೂ.15,999 ಗೆ ಲಭ್ಯವಾಗಲಿದೆ. 

ಇದನ್ನೂ ಓದಿ- ಇಂದು ಬಿಡುಗಡೆಯಾಗಲಿದೆ ಹೊಸ ತಂತ್ರಜ್ಞಾನದ Ultraviolette f77 ಎಲೆಕ್ಟ್ರಿಕ್ ಬೈಕ್ .. !

ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಲಭ್ಯವಿರುವ ಇತರ ಕೊಡುಗೆಗಳ ಲಾಭವನ್ನು ಪಡೆಯುವ ಮೂಲಕ ಇದರ ಬೆಲೆ ಗಮನಾರ್ಹವಾಗಿ ಇಳಿಕೆಯಾಗಲಿದೆ.  ಏಕೆಂದರೆ ಅದರ ಮೇಲೆ ವಿಶೇಷ ಕೊಡುಗೆಯನ್ನು ನೀಡಲಾಗುತ್ತಿದೆ. ಆದರಿಲ್ಲಿ ಸಣ್ಣ ಟ್ವಿಸ್ಟ್ ಇದೆ, ಇದು ನೇರವಾಗಿ ಲಭ್ಯವಾಗುವ ರಿಯಾಯಿತಿ ಅಲ್ಲ.

ಇದನ್ನೂ ಓದಿ- ವಹಿವಾಟು ಮಿತಿ ಹೇರಲು ಸಜ್ಜಾಗಿವೆಯೇ GPay, PhonePe, Paytm ಮತ್ತಿತರ UPI ಪಾವತಿ ಅಪ್ಲಿಕೇಶನ್‌ಗಳು

ಈ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರು ಎಕ್ಸ್‌ಚೇಂಜ್ ಬೋನಸ್‌ನ ಪ್ರಯೋಜನವನ್ನು ಸಹ ಪಡೆಯುತ್ತಿದ್ದಾರೆ. ಈ ಎಕ್ಸ್‌ಚೇಂಜ್ ಬೋನಸ್ 15,300 ರೂ.ಗಳಾಗಿದ್ದು, ನೀವು ಹಳೆಯ ಸ್ಮಾರ್ಟ್‌ಫೋನ್ ಹೊಂದಿದ್ದರೆ ಅದರ ಸ್ಥಿತಿಯು ತುಂಬಾ ಉತ್ತಮವಾಗಿದ್ದರೆ ಮಾತ್ರ ನೀವು ಈ ವಿನಿಮಯ ಕೊಡುಗೆಯ ಲಾಭವನ್ನು ಪಡೆಯಬಹುದು. ಅಂದರೆ,  21,000 ಮೌಲ್ಯದ ಸ್ಮಾರ್ಟ್‌ಫೋನ್ ಅನ್ನು ಕೇವಲ 699 ರೂ.ಗಳಿಗೆ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News