Interesting Video: ಸಸ್ಯಗಳು ಮಲಗಿ ಏಳುವುದನ್ನು ಎಂದಾದರು ನೋಡಿದ್ದೀರಾ? ಈ ವೈರಲ್ ವಿಡಿಯೋ ಒಮ್ಮೆ ನೋಡಿ ಗೊತ್ತಾಗುತ್ತದೆ

Trending Video- ಇಂಟರ್ನೆಟ್ ನಲ್ಲಿ ಒಂದಕ್ಕಿಂತ ಒಂದು ಆಶ್ಚರ್ಯಕ್ಕೆ ಕಾರಣವಾಗುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಒಂದು ವೇಳೆ ನೀವೂ ಕೂಡ ನಿಸರ್ಗಪ್ರೇಮಿಗಳಾಗಿದ್ದರೆ, ಈ ವಿಡಿಯೋ ನಿಮಗೆ ಸರ್ಪ್ರೈಸ್ ಮಾಡಲಿದೆ. ಸಸ್ಯಗಳು ಮಲಗಿ ಏಳುವ ಈ ವಿಡಿಯೋ ನಿಮಗೂ ಕೂಡ ಖುಷಿ ನೀಡಲಿದೆ.  

Written by - Nitin Tabib | Last Updated : Jul 10, 2022, 08:09 PM IST
  • ಸಾಮಾಜಿಕ ಮಾಧ್ಯಮದ ಮೇಲೆ ನಿಮಗೆ ಎಂದಿಗೂ ಕೂಡ ಬೋರ್ ಆಗುವುದಿಲ್ಲ.
  • ಇಲ್ಲಿ ನಿಮ್ಮ ಮನರಂಜನೆಗಾಗಿ ಫೋಟೋಗಳು ಹಾಗೂ ವಿಡಿಯೋಗಳ ಯಾವುದೇ ಕೊರತೆ ಇಲ್ಲ.
  • ಕೆಲ ಜನರಿಗೆ ಫನ್ನಿ ಕಂಟೆಂಟ್ ಇಷ್ಟವಾದರೆ, ಕೆಲವರಿಗೆ ಇಮೋಶನಲ್ ಕಂಟೆಂಟ್ ಇಷ್ಟವಾಗುತ್ತವೆ.
Interesting Video: ಸಸ್ಯಗಳು ಮಲಗಿ ಏಳುವುದನ್ನು ಎಂದಾದರು ನೋಡಿದ್ದೀರಾ? ಈ ವೈರಲ್ ವಿಡಿಯೋ ಒಮ್ಮೆ ನೋಡಿ ಗೊತ್ತಾಗುತ್ತದೆ title=
Plants Sleep and Wake Up

Social Media Viral Video: ಸಾಮಾಜಿಕ ಮಾಧ್ಯಮದ ಮೇಲೆ ನಿಮಗೆ ಎಂದಿಗೂ ಕೂಡ ಬೋರ್ ಆಗುವುದಿಲ್ಲ. ಇಲ್ಲಿ ನಿಮ್ಮ ಮನರಂಜನೆಗಾಗಿ ಫೋಟೋಗಳು ಹಾಗೂ ವಿಡಿಯೋಗಳ ಯಾವುದೇ ಕೊರತೆ ಇಲ್ಲ. ಕೆಲ ಜನರಿಗೆ ಫನ್ನಿ ಕಂಟೆಂಟ್ ಇಷ್ಟವಾದರೆ, ಕೆಲವರಿಗೆ ಇಮೋಶನಲ್ ಕಂಟೆಂಟ್ ಇಷ್ಟವಾಗುತ್ತವೆ. ಕೆಲವರಿಗೆ ಪ್ರಾಣಿಗಳ ಕಾದಾಡುವ ವಿಡಿಯೋಗಳನ್ನು ಇಷ್ಟಪಟ್ಟರೆ, ನಿಸರ್ಗಪ್ರೇಮಿಗಳಿಗೆ ನಿಸರ್ಗಕ್ಕೆ ಸಂಬಂಧಿಸಿದ ವಿಡಿಯೋಗಳು ಲೈಕ್ ಆಗುತ್ತವೆ. ಒಂದು ವೇಳೆ ನೀವೂ ಕೂಡ ನಿಸರ್ಗವನ್ನು ಪ್ರೀತಿಸುತ್ತಿದ್ದರೆ ಮತ್ತು ಸಸ್ಯಗಳ ಆರೈಕೆ ನಿಮಗೆ ಇಷ್ಟವಾಗುತ್ತಿದ್ದರೆ, ಈ ವಿಡಿಯೋ ಕೇವಲ ನಿಮಗಾಗಿ ಈ ವಿಡಿಯೋದಲ್ಲಿ ನೀವು ಸಸ್ಯಗಳ ರುಟೀನ್ ಲೈಫ್ ನೋಡಬಹುದು.

ಸಸ್ಯಗಳು ಕೂಡ ಮಲಗಿ ಎದ್ದೇಳುತ್ತವೆ
ಹಲವು ಜನರು ತಮ್ಮ ತಮ್ಮ ಮನೆಯಲ್ಲಿರುವ ಸಸ್ಯಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಆರೈಕೆ ಮಾಡುತ್ತಾರೆ. ಸಸ್ಯಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಸಮಯಕ್ಕೆ ನೀರುಹಾಕುವುದು, ಸರಿಯಾದ ಸಮಯದಲ್ಲಿ ಸೂರ್ಯನ ಬೆಳಕನ್ನು ತೋರಿಸುವುದು ಮತ್ತು ಮಣ್ಣನ್ನು ಬದಲಾಯಿಸುವುದು ಅವಶ್ಯಕ. ಆದರೆ ಸಸ್ಯಗಳು ಕೂಡ ಮಲಗಿ-ಎದ್ದೇಳುತ್ತವೆ ಎಂಬ ಸಂಗತಿ ನಮಗೆ ತಿಳಿದಿದೆಯೇ? ಇಲ್ಲ ಎಂದಾದರೆ ಮೊದಲು ನೀವು ಈ ವೈರಲ್ ವಿಡಿಯೋ ನೋಡಲೇಬೇಕು...

ಇದನ್ನೂ ಓದಿ-WhatsApp Features: ಇನ್ಮುಂದೆ ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಒಂದೇ ವಾಟ್ಸ್ ಆಪ್ ಖಾತೆಯನ್ನು ಬಳಸಬಹುದು!

ಮಾನವನ ದಿನಚರ್ಯಕ್ಕೆ ಹೋಲುತ್ತದೆ
ಮನುಷ್ಯರಂತೆ ಸಷ್ಯಗಳು ಕೂಡ ಮಲಗಿ-ಏಳುತ್ತವೆ ಎಂಬುದನ್ನು ಈ ವಿಡಿಯೋ ಕ್ಯಾಪ್ಶನ್ ನಲ್ಲಿ ಬರೆಯಲಾಗಿದೆ. ಕೇವಲ 23 ಸೆಕೆಂಡ್ ಗಳ ಅವಧಿಯ ಈ ವಿಡಿಯೋದಲ್ಲಿ ನೀವು ಸಸ್ಯಗಳು ಮಲಗಿ ಏಳುವುದನ್ನು ವೀಕ್ಷಿಸಬಹುದು. ತುಂಬಾ ತಾಳ್ಮೆವಹಿಸಿ ಈ ವಿಡಿಯೋ ಅನ್ನು ಚಿತ್ರೀಕರಿಸಲಾಗಿದೆ ಎಂಬಂತೆ ತೋರುತ್ತಿದೆ ಮತ್ತು ನಂತರ ಅದನ್ನು ಫಾಸ್ಟ್ ಫಾರ್ವರ್ಡ್ ಮಾಡಲಾಗಿದೆ. ವಿಡಿಯೋ ವೇಗವನ್ನು ಹೆಚ್ಚಿಸಿದ್ದರಿಂದ ಸಸ್ಯಗಳ ದಿನಚರ್ಯೆಯನ್ನು ನೀವು ಸ್ಪಷ್ಟವಾಗಿ ವೀಕ್ಷಿಸಬಹುದು. 

ಇದನ್ನೂ ಓದಿ-Single Plan ಅಡಿ ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್, ಜೀ 5 ಸೇರಿದಂತೆ ಒಟ್ಟು 13 ಓಟಿಟಿ ವೇದಿಕೆಗಳ ಚಂದಾದಾರಿಕೆ ಉಚಿತ, ಇಲ್ಲಿದೆ ಡೀಟೇಲ್ಸ್

ಭಾರಿ ಮನರಂಜನೆ ನೀಡುತ್ತಿದೆ ಈ ವಿಡಿಯೋ
ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ ಈ ವಿಡಿಯೋ 1.5 ಮಿಲಿಯನ್ ಗೂ ಅಧಿಕ ಬ್ಬೀರಿ ವೀಕ್ಷಣೆಗೆ ಒಳಗಾಗಿದೆ. ಇನ್ನೊಂದೆಡೆ 41 ಸಾವಿರ ಲೈಕ್ ಗಳನ್ನು ಪಡೆದ ಈ ವಿಡಿಯೋ ಅನ್ನು 7 ಸಾವಿರಕ್ಕೂ ಅಧಿಕ ಬಾರಿಗೆ ರೀಟ್ವೀಟ್ ಗಳು ಸಿಕ್ಕಿವೆ ಮತ್ತು 400 ಕ್ಕೂ ಅಧಿಕ ಕಾಮೆಂಟ್ ಗಳು ಬಂದಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News