The Largest Comet: Manhattan ಗಾತ್ರಕ್ಕಿಂತ 7 ಪಟ್ಟು ದೊಡ್ಡ ಮತ್ತು 137 ಕಿ.ಮೀ ಉದ್ದದ ಧೂಮಕೇತು ಪತ್ತೆ

Largest Commet: ಅಮೆರಿಕದ ಮ್ಯಾನ್‌ಹ್ಯಾಟನ್‌ಗಿಂತ (Manhattan) ಗಾತ್ರದಲ್ಲಿ ಏಳು ಪಟ್ಟು ದೊಡ್ಡದಾದ ಧೂಮಕೇತುವೊಂದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ ಮತ್ತು ಅದರ ಗಾತ್ರವು ಸಣ್ಣ ಗ್ರಹಕ್ಕೆ ಸಮಾನವಾಗಿದೆ.

Written by - Nitin Tabib | Last Updated : Feb 8, 2022, 09:42 PM IST
  • ಸೌರ ಮಂಡಲದಲ್ಲಿ ಕಂಡು ಹಿಡಿಯಲಾದ ಇದುವರೆಗಿನ ಅತ್ಯಂತ ದೊಡ್ಡ ಧೂಮಕೇತು
  • 137 ಕಿ.ಮೀಗೂ ಅಧಿಕ ಉದ್ದವಾಗಿದೆ.
  • ಅಮೆರಿಕಾದ ಮ್ಯಾನ್ಹಾಟನ್ ಗಿಂದ ಗಾತ್ರದಲ್ಲಿ ಏಳು ಪಟ್ಟು ದೊಡ್ಡದಾಗಿದೆ.
The Largest Comet: Manhattan ಗಾತ್ರಕ್ಕಿಂತ 7 ಪಟ್ಟು ದೊಡ್ಡ ಮತ್ತು 137 ಕಿ.ಮೀ ಉದ್ದದ ಧೂಮಕೇತು ಪತ್ತೆ   title=
The Largest Comet, Mega Comet, Solar System, Manhattan, Biggest Comet,

ನವದೆಹಲಿ: ಇತ್ತೀಚೆಗಷ್ಟೇ ಧೂಮಕೇತುವೊಂದನ್ನು (Commet) ಕಂಡು ಹಿಡಿಯಲಾಗಿದ್ದು, ಇದು ಇದುವರೆಗೆ ಕಂಡುಹಿಡಿಯಲಾದ ಅತಿದೊಡ್ಡ ಧೂಮಕೇತುವಾಗಿದ್ದು (The Largest Comet), ಇದು 130 ಕಿಲೋಮೀಟರ್ (80 ಮೈಲುಗಳು) ಗಿಂತ ಹೆಚ್ಚು ಉದ್ದವಾಗಿದೆ ಎಂದು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ನಮ್ಮ ಸೌರವ್ಯೂಹವನ್ನು (Solar System) ಸುತ್ತುವರೆದಿರುವ ಹಿಮಾವೃತ ಕಾಯಗಳ ವೃತ್ತಾಕಾರದ ಬ್ಯಾಂಡ್ ಊರ್ಟ್ ಕ್ಲೌಡ್‌ನಲ್ಲಿ ಕಳೆದ ವರ್ಷ ಬಾಹ್ಯಾಕಾಶದಲ್ಲಿ ಈ ದೈತ್ಯ ಧೂಮಕೇತುವನ್ನು ಗುರುತಿಸಲಾಗಿದೆ.

ಈ ಧೂಮಕೇತು (Biggest Comet) ಗಾತ್ರದಲ್ಲಿ ಮ್ಯಾನ್‌ಹ್ಯಾಟನ್‌ನ ಸುಮಾರು ಏಳು ಪಟ್ಟು ದೊಡ್ಡದಾಗಿದೆ.
ದಿ ಸನ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಇದು ಸಾಮಾನ್ಯ ಧೂಮಕೇತುಗಳಿಗಿಂತ ಸಣ್ಣ ಗ್ರಹದ ಗಾತ್ರಕ್ಕೆ ಹತ್ತಿರದಲ್ಲಿದೆ, ಇದು ಸಾಮಾನ್ಯವಾಗಿ ಸಣ್ಣ ನಗರಗಳಷ್ಟೇ ದೊಡ್ಡದಾಗಿದೆ. ಇದು ಮ್ಯಾನ್‌ಹ್ಯಾಟನ್‌ನ ಸುಮಾರು ಏಳು ಪಟ್ಟು ದೊಡ್ಡದಾಗಿದೆ

ಧೂಮಕೇತುವಿನ ಘನ ಕೋರ್ 137 ಕಿಮೀ ಉದ್ದವಾಗಿದೆ
ಇತ್ತೀಚಿನ ಪತ್ರಿಕೆಯಲ್ಲಿ, ವಿಜ್ಞಾನಿಗಳು ಚಿಲಿಯ ಅಟಕಾಮಾ ಮರುಭೂಮಿಯಲ್ಲಿ ರೇಡಿಯೊ ದೂರದರ್ಶಕವನ್ನು ಬಳಸಿಕೊಂಡು ದೈತ್ಯ ಧೂಮಕೇತು ಹೊರಸೂಸುವ ಶಾಖವನ್ನು ಅಳೆಯುವ ಮೂಲಕ ಅದರ ಗಾತ್ರವನ್ನು ಲೆಕ್ಕ ಹಾಕಿದ್ದಾರೆ. ಧೂಮಕೇತುವಿನ ಘನ ಕೋರ್ 137 ಕಿಲೋಮೀಟರ್ (85 ಮೈಲಿ) ಉದ್ದವಿದೆ ಎಂದು ಅವರು ತೋರಿಸಿದ್ದು, ಇದು ಹಿಂದಿನ ಅಂದಾಜನ್ನು ದೃಢೀಕರಿಸುತ್ತದೆ. ಇದು ಊರ್ಟ್ ಕ್ಲೌಡ್‌ನಿಂದ ಇದುವರೆಗೆ ಕಂಡುಬಂದಿರುವ ಅತಿದೊಡ್ಡ ಧೂಮಕೇತುವಾಗಿದೆ.

ಇದನ್ನೂ ಓದಿ-Gmail ಬಳಸುತ್ತೀರಾ? ಹಾಗಿದ್ರೆ ತಕ್ಷಣ ಅಪ್ಡೇಟ್ ಮಾಡಿ!

ಕಾಮೆಟ್ ಮೊದಲ ಬಾರಿಗೆ 8 ವರ್ಷಗಳ ಹಿಂದೆ ಕಾಣಿಸಿಕೊಂಡಿತ್ತು
ಅದರ ಹೆಸರೇ ಸೂಚಿಸುವಂತೆ, ಕಾಮೆಟ್ 2014 UN271/(ಬರ್ನಾರ್ಡಿನೆಲ್ಲಿ-ಬರ್ನ್‌ಸ್ಟೈನ್) ಅನ್ನು 8 ವರ್ಷಗಳ ಹಿಂದೆ ನೆಪ್ಚೂನ್‌ನಷ್ಟು ದೂರದಲ್ಲಿದ್ದಾಗ ಮೊದಲು ಗಮನಿಸಲಾಯಿತು. ಖಗೋಳಶಾಸ್ತ್ರಜ್ಞರು ಜೂನ್ 2021 ರವರೆಗೆ ಅದರ ಪ್ರಾಮುಖ್ಯತೆಯನ್ನು ಗುರುತಿಸಲು ವಿಫಲರಾಗಿದ್ದಾರೆ. ಈಗ ಅದೊಂದು ದೈತ್ಯ ಧೂಮಕೇತು ಎಂದು ಗುರುತಿಸಿದ್ದಾರೆ. ಅಷ್ಟರೊಳಗೆ ಅದು ಸೌರವ್ಯೂಹದ ಮಧ್ಯಭಾಗವನ್ನು ತಲುಪಿತ್ತು. ಅಂದಾಜುಗಳು ಅದರ ಗಾತ್ರವನ್ನು 100 ರಿಂದ  370 ಕಿಲೋಮೀಟರ್ (60-230 ಮೈಲಿ) ಅಗಲದಲ್ಲಿ ಇರಿಸಿವೆ.

ಇದನ್ನೂ ಓದಿ-Cover in Smartphone: ನೀವೂ ಸಹ ಸ್ಮಾರ್ಟ್‌ಫೋನ್‌ನಲ್ಲಿ ಮೊಬೈಲ್ ಕವರ್ ಹಾಕುತ್ತೀರಾ? ಅದರ ದುಷ್ಪರಿಣಾಮಗಳನ್ನು ತಿಳಿದರೆ ನೀವೇ ಅದನ್ನು ಬಿಸಾಡುತ್ತೀರಿ!

ಧೂಮಕೇತುಗಳು ಭೂಮಿಗೆ ಹತ್ತಿರ ಬರುತ್ತಿವೆ
ಬರ್ನಾರ್ಡಿನೆಲ್ಲಿ-ಬರ್ನ್‌ಸ್ಟೈನ್ ಭೂಮಿಗೆ ಹತ್ತಿರವಾಗುತ್ತಿದ್ದರೂ, ಅದು ಶನಿಯ ಕಕ್ಷೆಯನ್ನು ಎಂದಿಗೂ ದಾಟುವುದಿಲ್ಲ, ನಿಖರವಾದ ವೀಕ್ಷಣೆಗಳನ್ನು ಕಷ್ಟಕರವಾಗಿಸುತ್ತದೆ. ಸಂಶೋಧನೆಯನ್ನು ಖಗೋಳವಿಜ್ಞಾನ ಮತ್ತು ಆಸ್ಟ್ರೋಫಿಸಿಕ್ಸ್ ಲೆಟರ್ಸ್‌ನಲ್ಲಿ ಪ್ರಕಟಿಸಲು ಸ್ವೀಕರಿಸಲಾಗಿದೆ, ಅದರ ಪ್ರಿಪ್ರಿಂಟ್ ArXiv.org ನಲ್ಲಿ ಲಭ್ಯವಿದೆ.

ಇದನ್ನೂ ಓದಿ-ಅತ್ಯುತ್ತಮ ಕ್ಯಾಮೆರಾ ಹೊಂದಿರುವ 5G ಸ್ಮಾರ್ಟ್‌ಫೋನ್.. ಮಾರುಕಟ್ಟೆಗೆ ಬರುತ್ತಿದೆ Poco ಹೊಸ ಮೊಬೈಲ್ ಫೋನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News