ಅತಿ ಕಡಿಮೆ ಬೆಲೆಯ ಐದು BSNL ಪ್ರಿಪೇಯ್ಡ್​ ಪ್ಲಾನ್​ಗಳಿವು!

ಬಿಎಸ್‌ಎನ್‌ಎಲ್ ಕಡಿಮೆ ಬೆಲೆಗೆ ಉತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಅದರಲ್ಲೂ 200 ರೂ. ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಬೆಸ್ಟ್​ ಪ್ರಿಪೇಯ್ಡ್​​ ಪ್ಲಾನ್‌ಗಳಿವೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ.

Written by - Chetana Devarmani | Last Updated : May 4, 2022, 04:29 PM IST
  • ಬಿಎಸ್ಎನ್ಎಲ್ ಉತ್ತಮ ಪ್ರಿಪೇಯ್ಡ್ ಯೋಜನೆ
  • 200 ರೂ. ಗಳಿಗಿಂತ ಕಡಿಮೆಗೆ ಬೆಸ್ಟ್​ ಪ್ರಿಪೇಯ್ಡ್​​ ಪ್ಲಾನ್‌
  • ಅದರ ಬಗ್ಗೆ ಇಲ್ಲಿದೆ ಮಾಹಿತಿ
ಅತಿ ಕಡಿಮೆ ಬೆಲೆಯ ಐದು BSNL ಪ್ರಿಪೇಯ್ಡ್​ ಪ್ಲಾನ್​ಗಳಿವು! title=
ಬಿಎಸ್ಎನ್ಎಲ್

ಬಿಎಸ್​ಎನ್​ಎಲ್​ ಸರ್ಕಾರಿ ಟೆಲಿಕಾಂ ಕಂಪನಿಯಾಗಿದೆ. ಖಾಸಗಿ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗೆ ಬಿಎಸ್​ಎನ್​ಎಲ್ ತನ್ನ ಉತ್ತಮ ಆಫರ್‌ಗಳ ಮೂಲಕ ಪೈಪೋಟಿ ನೀಡುತ್ತಿದೆ. ಬಿಎಸ್‌ಎನ್‌ಎಲ್ ಕಡಿಮೆ ಬೆಲೆಗೆ ಉತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಅದರಲ್ಲೂ 200 ರೂ. ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಬೆಸ್ಟ್​ ಪ್ರಿಪೇಯ್ಡ್​​ ಪ್ಲಾನ್‌ಗಳಿವೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ಟ್ವಿಟರ್ ಬಳಕೆದಾರರಿಗೆ ದೊಡ್ಡ ಹೊಡೆತ ನೀಡಿದ ಎಲೋನ್ ಮಸ್ಕ್!

ಈ ಪಟ್ಟಿಯಲ್ಲಿರುವ ಅಗ್ಗದ ಪ್ರಿಪೇಯ್ಡ್​​ ಪ್ಲಾನ್‌ಗಳಲ್ಲಿ 49 ರೂಪಾಯಿಗಳಿಗೆ 2GB ಡೇಟಾ ಮತ್ತು 100 ನಿಮಿಷಗಳ ಧ್ವನಿ ಕರೆ ಸೌಲಭ್ಯ ಸಿಗುವ ಪ್ಲ್ಯಾನ್‌ ಒಂದಿದೆ. ಈ ಯೋಜನೆಯ ಮಾನ್ಯತೆಯು 24 ದಿನಗಳವರೆಗೆ ಇರುತ್ತದೆ. 100 ರೂ.ಗಿಂತ ಕಡಿಮೆ ಬೆಲೆಗೆ ಒಂದು ಪ್ಲ್ಯಾನ್‌ ಲಭ್ಯವಿದೆ. ಇದರಲ್ಲಿ ಯಾವುದೇ ನೆಟ್‌ವರ್ಕ್‌ನಲ್ಲಿ 99 ರೂಪಾಯಿಗಳಿಗೆ 22 ದಿನಗಳವರೆಗೆ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ದೊರೆಯುತ್ತದೆ. ಈ ಯೋಜನೆಯು ಯಾವುದೇ ಇತರ ಪ್ರಯೋಜನಗಳೊಂದಿಗೆ ಬರುವುದಿಲ್ಲ.

147 ರೂ. ಯೋಜನೆಯಲ್ಲಿ, ನೀವು 30 ದಿನಗಳವರೆಗೆ ಒಟ್ಟು 10GB ಡೇಟಾವನ್ನು ಪಡೆಯುತ್ತೀರಿ. ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು BSNL ಟ್ಯೂನ್‌ಗಳಿಗೆ ಪ್ರವೇಶವನ್ನು ಪಡೆಯುತ್ತೀರಿ.  97 ರೂಪಾಯಿಗಳ ಈ ರೀಚಾರ್ಜ್ ಯೋಜನೆಯು 18 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ, ನಿಮಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಮತ್ತು ಪ್ರತಿದಿನ 2GB ಇಂಟರ್ನೆಟ್ ಸಿಗುತ್ತದೆ. 

ಇದನ್ನೂ ಓದಿ: Xiaomi 38 ಸಾವಿರ ರೂಪಾಯಿ ಟ್ಯಾಬ್ಲೆಟ್‌ ಮೇಲೆ ಬಂಪರ್ ರಿಯಾಯಿತಿ

187 ರೂ. ಬೆಲೆಯ ಈ ಪ್ರಿಪೇಯ್ಡ್ ಪ್ಲಾನ್‌ನಲ್ಲಿ, ನಿಮಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಮತ್ತು 2GB ದೈನಂದಿನ ಡೇಟಾವನ್ನು ನೀಡಲಾಗುತ್ತದೆ. ಈ ಯೋಜನೆಯ ಮಾನ್ಯತೆಯು 28 ದಿನಗಳವರೆಗೆ ದೊರೆಯುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News