ಇಸ್ರೋದ SSLV 'Azadi ಉಪಗ್ರಹ' ಉಡಾವಣೆ ಯಶಸ್ವಿ: ಆದರೆ ಎದುರಾಗಿದೆ ಸಣ್ಣ ಸಮಸ್ಯೆ!

ಈ ಹಿಂದಿನ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಮೂಲಕ ಉಡಾವಣೆ ಮಾಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿ ಎಸ್‌ಎಸ್‌ಎಲ್‌ವಿಯನ್ನು ಬಳಕೆ ಮಾಡಲಾಗುತ್ತಿದೆ. ಸಾಕಷ್ಟು ವೆಚ್ಚ ತಗುಲುವ ಹಿನ್ನೆಲೆಯಲ್ಲಿ ಪಿಎಸ್‌ಎಲ್‌ವಿ ಬದಲಿಗೆ ಎಸ್‌ಎಸ್‌ಎಲ್‌ವಿಯನ್ನು ಉಪಯೋಗಿಸಲಾಗಿದೆ. 

Written by - Bhavishya Shetty | Last Updated : Aug 7, 2022, 11:15 AM IST
  • ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಉಪಗ್ರಹ ಉಡಾವಣೆ
  • 75 ಶಾಲೆಗಳ 750 ವಿದ್ಯಾರ್ಥಿನಿಯರು ತಯಾರಿಸಿದ ಉಪಗ್ರಹ
  • ಭಾರತವು ಮೊದಲ ಬಾರಿಗೆ ಎಸ್‌ಎಸ್‌ಎಲ್‌ವಿ ರಾಕೆಟ್ ಉಡಾವಣೆ ಮಾಡಿದೆ
ಇಸ್ರೋದ SSLV 'Azadi ಉಪಗ್ರಹ' ಉಡಾವಣೆ ಯಶಸ್ವಿ: ಆದರೆ ಎದುರಾಗಿದೆ ಸಣ್ಣ ಸಮಸ್ಯೆ!  title=
SSLV Azadi Satellite

ಭಾರತದ ತ್ರಿವರ್ಣ ಧ್ವಜ ಈಗ ಬಾಹ್ಯಾಕಾಶದಲ್ಲಿಯೂ ಹಾರಲಿದೆ. ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತವು ತನ್ನ ಎಸ್‌ಎಸ್‌ಎಲ್‌ವಿ (SSLV) 'ಆಜಾದಿ ಉಪಗ್ರಹ'ವನ್ನು ಉಡಾವಣೆ ಮಾಡಿದೆ. 75 ಶಾಲೆಗಳ 750 ವಿದ್ಯಾರ್ಥಿನಿಯರು ಈ ಉಪಗ್ರಹವನ್ನು ತಯಾರಿಸಿದ್ದಾರೆ. ಈ ಆಜಾದಿ ಉಪಗ್ರಹವನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಭಾರತವು ಮೊದಲ ಬಾರಿಗೆ ಎಸ್‌ಎಸ್‌ಎಲ್‌ವಿ ರಾಕೆಟ್ ಅನ್ನು ಉಡಾವಣೆ ಮಾಡಲು ಬಳಕೆ ಮಾಡಿದೆ.

ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಬೆಂಕಿ ಉಗುಳಿದ ಎಚ್‍ಡಿಕೆ!

ಈ ಹಿಂದಿನ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಮೂಲಕ ಉಡಾವಣೆ ಮಾಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿ ಎಸ್‌ಎಸ್‌ಎಲ್‌ವಿಯನ್ನು ಬಳಕೆ ಮಾಡಲಾಗುತ್ತಿದೆ. ಸಾಕಷ್ಟು ವೆಚ್ಚ ತಗುಲುವ ಹಿನ್ನೆಲೆಯಲ್ಲಿ ಪಿಎಸ್‌ಎಲ್‌ವಿ ಬದಲಿಗೆ ಎಸ್‌ಎಸ್‌ಎಲ್‌ವಿಯನ್ನು ಉಪಯೋಗಿಸಲಾಗಿದೆ. 

ಸಂಪರ್ಕ ಕಳೆದುಕೊಂಡ ರಾಕೆಟ್‌: 
ಎಸ್‌ಎಸ್‌ಎಲ್‌ವಿಯ ಮೊದಲ ಹಾರಾಟ ಪೂರ್ಣಗೊಂಡಿದೆ ಎಂದು ಇಸ್ರೋ ತಿಳಿಸಿದೆ. ನಿರೀಕ್ಷೆಯಂತೆ, ರಾಕೆಟ್ ಎಲ್ಲಾ ಮುಖಗಳನ್ನು ಯಶಸ್ವಿಯಾಗಿ ದಾಟಿತು. ಆದರೆ ಟರ್ಮಿನಲ್ ಹಂತದಲ್ಲಿ ಡೇಟಾವನ್ನು ಸ್ವೀಕರಿಸಲಾಗುತ್ತಿಲ್ಲ. ಇಸ್ರೋ ಅದನ್ನು ವಿಶ್ಲೇಷಿಸುತ್ತಿದೆ. ಶೀಘ್ರದಲ್ಲೇ ರಾಕೆಟ್ ಸಂಪರ್ಕ ಬರಬಹುದು ಎಂದು ಸಂಸ್ಥೆ ಹೇಳಿದೆ. 

 

 

ಎಸ್‌ಎಸ್‌ಎಲ್‌ವಿ ಬಳಿಕ ಇಸ್ರೋ ಹಿರಿಮೆ ಹೆಚ್ಚಳ: 
6 ಎಂಜಿನಿಯರ್‌ಗಳು ಕೇವಲ ಒಂದು ವಾರದಲ್ಲಿ ಎಸ್‌ಎಸ್‌ಎಲ್‌ವಿ ಸಿದ್ಧಪಡಿಸಬಹುದು. ಇದು 10 ಕೆಜಿಯಿಂದ 500 ಕೆಜಿಯವರೆಗಿನ ಉಪಗ್ರಹವನ್ನು ಬಾಹ್ಯಾಕಾಶದಲ್ಲಿ ಸುಲಭವಾಗಿ ಉಡಾವಣೆ ಮಾಡಬಲ್ಲದು. ಇದರ ವೆಚ್ಚ PSLV ಗಿಂತ 10 ಪಟ್ಟು ಕಡಿಮೆ. ಉಪಗ್ರಹ ಸಿದ್ಧವಾದರೆ ರಾಕೆಟ್ ಕೂಡ ಸಿದ್ಧ. ಎಸ್‌ಎಸ್‌ಎಲ್‌ವಿ ಮೂಲಕ ಇಸ್ರೋ ಜಾಗತಿಕ ಮಟ್ಟದಲ್ಲಿ ಅದ್ಭುತ ಪೈಪೋಟಿ ನೀಡುತ್ತದೆ. ಸಣ್ಣ ದೇಶಗಳ 500 ಕೆಜಿಯವರೆಗಿನ ಉಪಗ್ರಹಗಳನ್ನು ಉಡಾವಣೆ ಮಾಡಲು ಇದು ವರದಾನವಾಗಲಿದೆ.

ಇದನ್ನೂ ಓದಿ: Bigg Boss OTT: ಸೋನು ಶ್ರೀನಿವಾಸ್‌ ಗೌಡನ ಈ ಅಭ್ಯಾಸ ಕೇಳಿ ಶಾಕ್‌ ಆದ ರೂಪೇಶ್‌ ಶೆಟ್ಟಿ!

ಎಸ್‌ಎಸ್‌ಎಲ್‌ವಿ ರಾಕೆಟ್ ಎರಡು ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ 350 ಕಿ.ಮೀ ದೂರದ ಕಕ್ಷೆಗೆ ಸೇರಿಸುತ್ತದೆ. ಮೊದಲ ಉಪಗ್ರಹವು 135 ಗ್ರಾಂ ತೂಕದ ಭೂ ವೀಕ್ಷಣಾ ಉಪಗ್ರಹ IOS 02 ಆಗಿದ್ದರೆ, ಎರಡನೇ ಉಪಗ್ರಹವು 7.5 ಕೆಜಿ ತೂಕದ ಆಜಾದಿ ಉಪಗ್ರಹವಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News