ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ಈ 4 ಆಪ್‌ಗಳಿದ್ದರೆ ತಕ್ಷಣವೇ ಡಿಲೀಟ್ ಮಾಡಿ

ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ಜೋಕರ್ ಮಾಲ್‌ವೇರ್  ಮತ್ತೆ ಪ್ಲೇ ಸ್ಟೋರ್‌ಗೆ ಮರಳಿದೆ. ಈ ಮಾಲ್‌ವೇರ್ ಕೆಲವು ಆ್ಯಪ್‌ಗಳಲ್ಲಿ ಅಡಗಿರುವ ಬಗ್ಗೆ ವರದಿ ಆಗಿದ್ದು, ನಿಮ್ಮ ಸ್ಮಾರ್ಟ್‌ಫೋನ್ನಲ್ಲಿಯೂ ಈ ಆ್ಯಪ್‌ಗಳಿದ್ದರೆ ಅದನ್ನು ತಕ್ಷಣವೇ ಅನ್‌ಇನ್‌ಸ್ಟಾಲ್ ಮಾಡಿ.

Written by - Yashaswini V | Last Updated : Jul 11, 2022, 11:31 AM IST
  • ಜೋಕರ್ ಮಾಲ್‌ವೇರ್ ಪ್ಲೇ ಸ್ಟೋರ್‌ಗೆ ಮರಳಿದೆ
  • ಈ ಮಾಲ್‌ವೇರ್ ನಾಲ್ಕು ಆಪ್‌ಗಳಲ್ಲಿ ಅಡಗಿಕೊಂಡಿದೆ
  • ನೀವು ಈ ಅಪ್ಲಿಕೇಶನ್‌ಗಳನ್ನು ಹೊಂದಿದ್ದರೆ ತಕ್ಷಣವೇ ಅನ್‌ಇನ್‌ಸ್ಟಾಲ್ ಮಾಡಿ
ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ಈ 4 ಆಪ್‌ಗಳಿದ್ದರೆ ತಕ್ಷಣವೇ ಡಿಲೀಟ್ ಮಾಡಿ title=
Joker Malware Returns

ಜೋಕರ್ ಮಾಲ್‌ವೇರ್:  ಹಳೆಯ ಮಾಲ್‌ವೇರ್ ಜೋಕರ್ ಮಾಲ್‌ವೇರ್ ಇದೀಗ ಮತ್ತೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮರಳಿದೆ. 2017 ರಲ್ಲಿ ಮೊದಲು ಪತ್ತೆಯಾದ ಜೋಕರ್ ಮಾಲ್‌ವೇರ್ ಪ್ಲೇ ಸ್ಟೋರ್‌ನಲ್ಲಿ ಮತ್ತೆ ಕಾಣಿಸಿಕೊಂಡಿದ್ದು ಇದು ಆಂಡ್ರಾಯ್ಡ್ ಬಳಕೆದಾರರಿಗೆ ನಿರಂತರವಾಗಿ ಬೆದರಿಕೆ ಹಾಕುತ್ತಲೇ ಇದೆ.  ಅನೇಕ ಜನರು ಅಪಾಯಕಾರಿ ಎಂದು ತಿಳಿಯದೇ ಕೆಲವು ಮೋಸದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದಾರೆ.
ಇದು ಆಂಡ್ರಾಯ್ಡ್ ಬಳಕೆದಾರರ ಫೋನ್ ಗಳನ್ನು ಹೈಜಾಕ್ ಮಾಡಲು ಸೈಬರ್ ಅಪರಾಧಿಗಳ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಈ ಹಿನ್ನಲೆಯಲ್ಲಿ  ಜೋಕರ್ ಮಾಲ್‌ವೇರ್ ಪತ್ತೆಯಾಗಿರುವ ಅಪ್ಲಿಕೇಶನ್‌ಗಳನ್ನು ನಿಮ್ಮ ಸಾಧನಗಳಲ್ಲೂ ಇದ್ದರೆ ಅವುಗಳನ್ನು ಕೂಡಲೇ ಅಳಿಸುವಂತೆ ಸೈಬರ್ ಸೆಕ್ಯುರಿಟಿ ಸಂಶೋಧಕರು ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ವಾಸ್ತವವಾಗಿ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ನಾಲ್ಕು ಅಪ್ಲಿಕೇಶನ್‌ಗಳಲ್ಲಿ  ಜೋಕರ್ ಮಾಲ್‌ವೇರ್ ಪತ್ತೆ ಆಗಿರುವುದಾಗಿ ಸೈಬರ್ ಸೆಕ್ಯೂರಿಟಿ ಸಂಶೋಧನಾ ಸಂಸ್ಥೆ ಮಾಹಿತಿ ಬಹಿರಂಗ ಪಡಿಸಿದೆ. ಸೈಬರ್ ಸೆಕ್ಯುರಿಟಿ ರಿಸರ್ಚ್ ಕಂಪನಿ ಪ್ರಡಿಯೊ ಪ್ರಕಾರ, ಗೂಗಲ್ ಪ್ಲೇ ಸ್ಟೋರ್‌ನಲ್ಲಿನ ನಾಲ್ಕು ಅಪ್ಲಿಕೇಶನ್‌ಗಳಲ್ಲಿ ಈ ಜೋಕರ್ ಮಾಲ್‌ವೇರ್ ಕಂಡುಬಂದಿದೆ. ಈ ಸೋಂಕಿತ ಅಪ್ಲಿಕೇಶನ್‌ಗಳಲ್ಲಿ ಸ್ಮಾರ್ಟ್ ಎಸ್ಎಂಎಸ್ ಸಂದೇಶಗಳು, ರಕ್ತದೊತ್ತಡ ಮಾನಿಟರ್, ಧ್ವನಿ ಭಾಷಾ ಅನುವಾದಕ ಮತ್ತು ತ್ವರಿತ ಪಠ್ಯ ಸಂದೇಶಗಳು ಸೇರಿವೆ. 

ಇದನ್ನೂ ಓದಿ- Flipkart ಸಿಗುತ್ತಿರುವ ಈ ಕೊಡುಗೆ ಮತ್ತೆ ಸಿಗಲ್ಲ, ಕೇವಲ ರೂ.149ಕ್ಕೆ ಖರೀದಿಸಿ ರಿಯಲ್ ಮೀ ಕಂಪನಿಯ ಈ ಜಬರ್ದಸ್ತ್ ಸ್ಮಾರ್ಟ್ ಫೋನ್

ಸಂಶೋಧನಾ ತಂಡದಿಂದ ಅಧಿಸೂಚನೆಯನ್ನು ಸ್ವೀಕರಿಸಿದ ನಂತರ ಗೂಗಲ್ ಪ್ಲೇ ಸ್ಟೋರ್‌ನಿಂದ ಈ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಆದಾಗ್ಯೂ, ತೆಗೆದುಹಾಕುವ ಕಾರ್ಯವಿಧಾನದ ಮುಂಚೆಯೇ, 100,000 ಕ್ಕಿಂತ ಹೆಚ್ಚು ಆಂಡ್ರಾಯ್ಡ್ ಬಳಕೆದಾರರು ಇದನ್ನು ಇನ್ಸ್ಟಾಲ್ ಮಾಡಿರುವುದು ಪತ್ತೆಯಾಗಿದ್ದು ಅಂತಹ ಬಳಕೆದಾರರು ಈ  ಅಪ್ಲಿಕೇಶನ್‌ಗಳನ್ನು ಈ ಕೂಡಲೇ ಅನ್‌ಇನ್‌ಸ್ಟಾಲ್ ಮಾಡುವಂತೆ ಸೂಚಿಸಲಾಗಿದೆ. 

ಜೋಕರ್ ಮಾಲ್ವೇರ್ ಅನ್ನು ಆರಂಭದಲ್ಲಿ ಎಸ್ಎಂಎಸ್-ಸಂಬಂಧಿತ ವಂಚನೆಗೆ ಅನ್ವಯಿಸಲಾಯಿತು. ಆದರೆ ಕಾಲಾನಂತರದಲ್ಲಿ, ಇದು ಬಳಕೆದಾರರ ಸಾಧನಗಳನ್ನು ರಹಸ್ಯವಾಗಿ ಪ್ರವೇಶಿಸಬಹುದಾದ ಪ್ರಬಲ ತಂತ್ರವಾಗಿ ಬದಲಾಯಿತು. ಇದು ಬಳಕೆದಾರರ ಅಧಿಸೂಚನೆಗಳನ್ನು ಓದಬಹುದು, ಯಾವುದೇ ಕುರುಹುಗಳನ್ನು ಬಿಡದೆ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಬಹುದು, ಎಸ್ಎಂಎಸ್ ಸಂದೇಶಗಳನ್ನು ಕಳುಹಿಸಬಹುದು ಮತ್ತು ಓದಬಹುದು, ಕರೆಗಳನ್ನು ಮಾಡಬಹುದು ಮತ್ತು ಒಂದು-ಬಾರಿ ಪಾಸ್‌ವರ್ಡ್‌ಗಳು ಮತ್ತು ಭದ್ರತಾ ಕೋಡ್‌ಗಳನ್ನು ಪ್ರತಿಬಂಧಿಸಬಹುದು. ಈ ಸ್ಪೈವೇರ್ ನಿಮ್ಮ ಸಾಧನದಲ್ಲಿ ಬಹುತೇಕ ಎಲ್ಲವನ್ನೂ ಮಾಡಲು ಸಮರ್ಥವಾಗಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- WhatsApp Features: ಇನ್ಮುಂದೆ ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಒಂದೇ ವಾಟ್ಸ್ ಆಪ್ ಖಾತೆಯನ್ನು ಬಳಸಬಹುದು!

ಮುಂದಾಗಬಹುದಾದ ಅಪಾಯವನ್ನು ತಪ್ಪಿಸುವ ದೃಷ್ಟಿಯಿಂದ ಪ್ರತಿಯೊಬ್ಬ ಆಂಡ್ರಾಯ್ಡ್ ಬಳಕೆದಾರರು ತಮ್ಮ ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಮೇಲ್ವಿಚಾರಣೆ ಮಾಡಬೇಕು ಎಂದು ಸಲಹೆ ನೀಡಲಾಗುತ್ತದೆ. ತಮ್ಮ ಸಾಧನದಲ್ಲಿ ಇಂತಹ ಸ್ಪೈ ಅಪ್ಲಿಕೇಶನ್‌ಗಳು ಕಂಡುಬಂದರೆ ತಕ್ಷಣವೇ ಅಳಿಸಲು ಸಂಶೋಧಕರು ಆಂಡ್ರಾಯ್ಡ್ ಬಳಕೆದಾರರಿಗೆ ಸಲಹೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News