Smartphone Tips: ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಟ್ರೈ ಮಾಡಿ

ನಿಮ್ಮ ಫೋನ್ ಅನ್‌ಲಾಕ್ ಆಗಿದ್ದರೆ ಯಾರಾದರೂ ಅದನ್ನು ಪರಿಶೀಲಿಸಬಹುದು. ಆದರೆ ನೀವು ಕೆಲವು ವಿಶೇಷ ತಂತ್ರಗಳನ್ನು ಬಳಸಿ ಅನ್ಲಾಕ್ ಮಾಡಿದ ಫೋನ್ ಅನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.

Written by - Yashaswini V | Last Updated : Aug 30, 2021, 02:25 PM IST
  • ಸಾಮಾನ್ಯವಾಗಿ ನಮ್ಮ ಫೋನ್‌ನಲ್ಲಿ ಪಾಸ್‌ವರ್ಡ್ ಅಥವಾ ಲಾಕ್ ಅನ್ನು ಇರಿಸುತ್ತೇವೆ
  • ಏಕೆಂದರೆ ಕೆಲವರಿಗೆ ಸುಖಾ-ಸುಮ್ಮನೆ ಬೇರೆಯವರ ಫೋನ್ ಪರಿಶೀಲಿಸುವ ಅಭ್ಯಾಸವಿರುತ್ತದೆ
  • ಆದರೆ ನೀವು ಕೆಲವು ತಂತ್ರಗಳನ್ನು ಬಳಸಿದರೆ ನಿಮ್ಮ ಫೋನ್ ಅನ್‌ಲಾಕ್ ಇದ್ದಾಗಲೂ ಕೂಡ ನಿಮ್ಮ ಒಪ್ಪಿಗೆಯಿಲ್ಲದೆ ಯಾರೂ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ
Smartphone Tips: ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಟ್ರೈ ಮಾಡಿ title=
Smartphone Tips And Tricks

Smartphone Tips: ನಮ್ಮ ಒಪ್ಪಿಗೆಯಿಲ್ಲದೆ ಯಾರೂ ಫೋನ್‌ಗೆ ಇಣುಕದಂತೆ ನಾವು ಸಾಮಾನ್ಯವಾಗಿ ನಮ್ಮ ಫೋನ್‌ನಲ್ಲಿ ಪಾಸ್‌ವರ್ಡ್ ಅಥವಾ ಲಾಕ್ ಅನ್ನು ಇರಿಸುತ್ತೇವೆ. ಏಕೆಂದರೆ ಕೆಲವರಿಗೆ ಸುಖಾ-ಸುಮ್ಮನೆ ಬೇರೆಯವರ ಫೋನ್ ಪರಿಶೀಲಿಸುವ ಅಭ್ಯಾಸವಿರುತ್ತದೆ. ನೀವು ಬಯಸಿದರೂ ಕೂಡ, ಫೋನ್ ಅನ್ನು ಮುಟ್ಟಬೇಡಿ ಎಂದು ಮನವರಿಕೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಅವರು ನಿಮ್ಮ ಸ್ನೇಹಿತರು ಅಥವಾ ಕುಟುಂಬದವರಾಗಿದ್ದರೆ ಅವರು ಅದನ್ನು ಕೆಟ್ಟದಾಗಿ ಭಾವಿಸಬಹುದು ಎಂಬ ಆತಂಕ ಸಹಜವಾಗಿಯೇ ಇರುತ್ತದೆ. ಆದರೆ ಇದಕ್ಕಾಗಿ ನೀವು ಕೆಲವು ತಂತ್ರಗಳನ್ನು ಬಳಸಬಹುದು. ಫೋನ್‌ನಲ್ಲಿ ಅಂತಹ ಕೆಲವು ವೈಶಿಷ್ಟ್ಯಗಳಿವೆ, ಅದನ್ನು ಬಳಸುವುದು ಕೂಡ ತುಂಬಾ ಸುಲಭ. ನಿಮ್ಮ ಫೋನ್ ಅನ್‌ಲಾಕ್ ಇದ್ದಾಗಲೂ ಕೂಡ ನಿಮ್ಮ ಒಪ್ಪಿಗೆಯಿಲ್ಲದೆ ಯಾರೂ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ನೀವು ಕೂಡ ಫೋನ್ ಅನ್ನು ಲಾಕ್ ಮಾಡದಿದ್ದರೆ ಮತ್ತು ಬೇರೆಯವರು ಫೋನ್‌ನಲ್ಲಿ ಸ್ನ್ಯೂಪ್ ಮಾಡುವುದನ್ನು ಬಯಸದಿದ್ದರೆ, ಇದಕ್ಕಾಗಿ ನೀವು ಈ ವೈಶಿಷ್ಟ್ಯಗಳನ್ನು ಬಳಸಬಹುದು. 

ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಬಳಸಿ :
ಆಂಡ್ರಾಯ್ಡ್ ಫೋನ್‌ಗಳಲ್ಲಿ (Android phones) ಪಿನ್ ದಿ ಸ್ಕ್ರೀನ್ ಅಥವಾ ಸ್ಕ್ರೀನ್ ಪಿನ್ನಿಂಗ್ ಎಂಬ ವೈಶಿಷ್ಟ್ಯವಿದೆ . ಈ ವೈಶಿಷ್ಟ್ಯದ ಸಹಾಯದಿಂದ, ನಿಮ್ಮ ಒಪ್ಪಿಗೆಯಿಲ್ಲದೆ ನಿಮ್ಮ ಅನ್‌ಲಾಕ್ ಮಾಡಿದ ಫೋನ್ ಅನ್ನು ಯಾರೂ ಬಳಸಲಾಗುವುದಿಲ್ಲ. ಈ ವೈಶಿಷ್ಟ್ಯವು ಆಂಡ್ರಾಯ್ಡ್ 5.0 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಗಳಲ್ಲಿ ಲಭ್ಯವಿರುತ್ತದೆ. 

ಇದನ್ನೂ ಓದಿ - Smartphone: 7 ಇಂಚಿನ ಸ್ಕ್ರೀನ್‌ನೊಂದಿಗೆ ಬರುತ್ತಿದೆ ಜಬರ್ದಸ್ತ್ ಸ್ಮಾರ್ಟ್‌ಫೋನ್, 2 ದಿನಗಳವರೆಗೆ ಬಾಳಿಕೆ ಬರುತ್ತೆ ಬ್ಯಾಟರಿ, ಇಲ್ಲಿದೆ ವೈಶಿಷ್ಟ್ಯ

ಈ ವೈಶಿಷ್ಟ್ಯದ ವಿಶೇಷತೆಯನ್ನು ತಿಳಿಯಿರಿ (Know the specialty of this feature) :
ಪಿನ್ ದಿ ಸ್ಕ್ರೀನ್ ಅಥವಾ ಸ್ಕ್ರೀನ್ ಪಿನ್ನಿಂಗ್  (Screen Pinning) ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ,  ಇದರ ಮುಖ್ಯ ಕಾರ್ಯವೆಂದರೆ ನೀವು ಅದರಲ್ಲಿ ಯಾವುದೇ ಆಪ್ ಅನ್ನು ಲಾಕ್ ಮಾಡಬಹುದು ಅಥವಾ ಪಿನ್ ಮಾಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಫೋನಿನಲ್ಲಿ ನೀವು ಬಯಸುವವರೆಗೆ ಈ ಆಪ್ ಅನ್ನು ತೆರೆಯಲು ಯಾರಿಗೂ ಸಾಧ್ಯವಾಗುವುದಿಲ್ಲ. ಅಂತಹ ಸನ್ನಿವೇಶದಲ್ಲಿ, ನೀವು ನಿಮ್ಮ ಯಾವುದೇ ಅಪ್ಲಿಕೇಶನ್‌ಗಳನ್ನು ಇತರರು ಪರಿಶೀಲಿಸಲು ಬಯಸದಿದ್ದರೆ, ಆ ಅಪ್ಲಿಕೇಶನ್‌ನಲ್ಲಿ ಪಿನ್ ದಿ ಸ್ಕ್ರೀನ್ ಅಥವಾ ಸ್ಕ್ರೀನ್ ಪಿನ್ನಿಂಗ್ ವೈಶಿಷ್ಟ್ಯವನ್ನು ಹಾಕಬಹುದು. 

ಇದನ್ನೂ ಓದಿ - BharatCaller Launched: TrueCallerಗೆ ಪೈಪೋಟಿ ನೀಡಲು ಬಂದಿದೆ ದೇಸಿ ಆಪ್ BharatCaller

ಈ ವೈಶಿಷ್ಟ್ಯವು ಈ ರೀತಿ ಕಾರ್ಯನಿರ್ವಹಿಸುತ್ತದೆ:
>> ಈ ವೈಶಿಷ್ಟ್ಯವು ಎಲ್ಲಾ ಆಂಡ್ರಾಯ್ಡ್ 5.0 ಅಥವಾ ನಂತರದ ಫೋನ್‌ಗಳಲ್ಲಿ ಲಭ್ಯವಿದೆ.
>> ಫೋನ್‌ನಲ್ಲಿ ಅದರ ಹೆಸರು ಸ್ಕ್ರೀನ್ ಪಿನ್ (Pin the Screen) ಅಥವಾ ಸ್ಕ್ರೀನ್ ಪಿನ್ನಿಂಗ್ (Screen Pinning) ಆಗಿರಬಹುದು.
>> ಫೋನ್‌ನ ಸೆಟ್ಟಿಂಗ್‌ಗಳಲ್ಲಿ ನೀವು ಈ ವೈಶಿಷ್ಟ್ಯವನ್ನು ಕಾಣಬಹುದು. ಇದಕ್ಕಾಗಿ ಫೋನಿನ ಸೆಟ್ಟಿಂಗ್ಸ್ ನಲ್ಲಿ ಸೆಕ್ಯುರಿಟಿ & ಲಾಕ್ ಸ್ಕ್ರೀನ್ ಆಯ್ಕೆಗೆ ಹೋಗಿ.
>> ಭದ್ರತೆ ಮತ್ತು ಲಾಕ್ ಸ್ಕ್ರೀನ್ ಮೇಲೆ ಕ್ಲಿಕ್ ಮಾಡಿದ ನಂತರ, ಗೌಪ್ಯತೆಗೆ ಸಂಬಂಧಿಸಿದ ಹಲವು ಆಯ್ಕೆಗಳು ಇಲ್ಲಿ ಕಂಡುಬರುತ್ತವೆ. ಕೆಳಭಾಗದಲ್ಲಿ ನೀವು ಸ್ಕ್ರೀನ್ ಪಿನ್ನಿಂಗ್ ಆಯ್ಕೆಯನ್ನು ನೋಡುತ್ತೀರಿ.
>> ಸ್ಕ್ರೀನ್ ಪಿನ್ನಿಂಗ್ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಅದನ್ನು ಆನ್ ಮಾಡಿ.
>> ನಿಮ್ಮ ಫೋನ್‌ನಲ್ಲಿ ನೀವು ಪಿನ್ ಮಾಡಲು ಬಯಸುವ ಆಪ್ ಅನ್ನು ತೆರೆಯಿರಿ ಮತ್ತು ನಂತರ ಅದನ್ನು ಮುಚ್ಚಿ.
>> ಅದರ ನಂತರ ಇತ್ತೀಚಿನ ಆಪ್ಸ್ ಆಯ್ಕೆಗೆ ಹೋಗಿ ಮತ್ತು ನೀವು ಪಿನ್ ಮಾಡಲು ಬಯಸುವ ಆಪ್ ಮೇಲೆ ದೀರ್ಘವಾಗಿ ಒತ್ತಿರಿ. ದೀರ್ಘ ಒತ್ತುವಿಕೆಯ ನಂತರ, ಪಿನ್ ಆಯ್ಕೆಯನ್ನು ಆರಿಸಿ.
>> ನಂತರ ಪಿನ್ ಮಾಡಿದ ಆಪ್ ಹೊರತುಪಡಿಸಿ ಬೇರೆ ಯಾವುದೇ ಆಪ್ ಫೋನ್‌ನಲ್ಲಿ ಓಪನ್ ಆಗುವುದಿಲ್ಲ.
>> ನಂತರ ಪಿನ್ ಆಯ್ಕೆಯನ್ನು ತೆಗೆದುಹಾಕಲು, ನೀವು ಹೋಮ್ ಮತ್ತು ಬ್ಯಾಕ್ ಬಟನ್‌ಗಳನ್ನು ಏಕಕಾಲದಲ್ಲಿ ಒತ್ತಿ ಮತ್ತು ಲಾಕ್‌ಸ್ಕ್ರೀನ್ ಪಾಸ್‌ವರ್ಡ್ ಬಳಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News