Weak Monsoon Alert: ಎಚ್ಚರ! ಭೀಕರ ತಾಪಮಾನ ಹೆಚ್ಚಳದ ಹಿನ್ನೆಲೆ ಬರಗಾಲದ ಅಪಾಯ! ಸ್ಕೈಮೇಟ್ ಬೆಚ್ಚಿಬೀಳಿಸುವ ಭವಿಷ್ಯವಾಣಿ

Weather Forcast: 2022 ರಲ್ಲಿ ದುರ್ಬಲ ಮುಂಗಾರಿನ ಹಿನ್ನೆಲೆ, ದೇಶದ ಕೃಷಿ ಕ್ಷೇತ್ರವು ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಆದರೆ ಇದೀಗ ಈ ಬಾರಿಯ ಮುಂಗಾರಿನ ಬಗ್ಗೆ ಸ್ಕೈಮೆಟ್ ಮಹತ್ವವ ಮುನ್ಸೂಚನೆಯನ್ನು ನೀಡಿದೆ, ಈ ಬಾರಿಯೂ ಕೂಡ ಮುಂಗಾರು ಉತ್ತಮವಾಗಿಲ್ಲ ಎಂದು ಸ್ಕೈಮೇಟ್ ಅಂದಾಜು ವ್ಯಕ್ತಪಡಿಸಿದೆ..  

Written by - Nitin Tabib | Last Updated : Jun 14, 2023, 03:44 PM IST
  • ದೀರ್ಘ ವಿಳಂಬದ ನಂತರ ಜೂನ್ 8 ರಂದು ಮಾನ್ಸೂನ್ ಕೇರಳದ ಕರಾವಳಿಯನ್ನು ತಲುಪಿದ್ದು ಇಲ್ಲಿ ಉಲ್ಲೇಖನೀಯ.
  • ಉತ್ತರ ಭಾರತದಲ್ಲೂ ಮುಂಗಾರು ತಡವಾಗಿ ತಲುಪಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
  • ಜುಲೈ 8 ರಂದು ಉತ್ತರ ಭಾರತಕ್ಕೆ ಮುಂಗಾರು ಆಗಮನದ ಸಾಧ್ಯತೆಯನ್ನು ವರ್ತಿಸಲಾಗಿತ್ತು.
Weak Monsoon Alert: ಎಚ್ಚರ! ಭೀಕರ ತಾಪಮಾನ ಹೆಚ್ಚಳದ ಹಿನ್ನೆಲೆ ಬರಗಾಲದ ಅಪಾಯ! ಸ್ಕೈಮೇಟ್  ಬೆಚ್ಚಿಬೀಳಿಸುವ ಭವಿಷ್ಯವಾಣಿ title=

Weaker Monsoon Forcast: ಉತ್ತರ ಭಾರತದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ಜನಜೀವನ ದುಸ್ತರವಾಗಿದೆ. ಏಪ್ರಿಲ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ತಾಪಮಾನದಲ್ಲಿ ಸ್ವಲ್ಪ ಇಳಿಕೆ ಕಂಡುಬಂದರೂ ಜೂನ್‌ನಲ್ಲಿ ಮತ್ತೆ ಪಾದರಸದಲ್ಲಿ ಭಾರಿ ಜಿಗಿತ ಗಮನಿಸಲಾಗಿದೆ. ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮುಂಗಾರು ಸಾಕಷ್ಟು ವಿಳಂಬವಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಈ ವರ್ಷ ಮುಂಗಾರು ವಿಳಂಬವಾಗಿರುವುದರಿಂದ ಮಳೆ ಕೊರತೆಯಾಗುವ ಸಾಧ್ಯತೆ ಇದೆ ಎಂಬುದು ರೈತರ ಅಭಿಪ್ರಾಯ. ಇದರಿಂದಾಗಿ ಬೆಳೆಗಳು ಹಾನಿಗೊಳಗಾಗಬಹುದು. ಗಮನಾರ್ಹವಾಗಿ, 2022 ರಲ್ಲಿಯೂ ಸಹ ಮುಂಗಾರು ತುಂಬಾ ದುರ್ಬಲವಾಗಿತ್ತು, ಇದರಿಂದಾಗಿ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದರು.

ಸ್ಕೈಮೆಟ್ ಭವಿಷ್ಯ?
ಈ ವರ್ಷ ಮುಂಗಾರು ವಿಳಂಬದ ಬಗ್ಗೆ ಜನರಲ್ಲಿ ಆತಂಕ ಹೆಚ್ಚಿದೆ. ಏತನ್ಮಧ್ಯೆ, ಸ್ಕೈಮೆಟ್ ಮುನ್ಸೂಚನೆಯೂ ಕೂಡ ಪ್ರಕಟವಾಗಿದ್ದು, ರೈತರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.  ಜುಲೈ 6 ರ ವೇಳೆಗೆ ಮುಂಗಾರು ದುರ್ಬಲಗೊಳ್ಳಬಹುದು ಎಂದು ಸ್ಕೈಮೆಟ್ ಹೇಳಿದೆ. ಈ ಕಾರಣದಿಂದಾಗಿ, ಬೆಳೆಗಳ ಬಿತ್ತನೆ ವಿಳಂಬವಾಗಬಹುದು. ಸ್ಕೈಮೆಟ್ ಒಂದು ಖಾಸಗಿ ಮುನ್ಸೂಚಕ ಏಜೆನ್ಸಿಯಾಗಿದೆ ಎಂಬುದು ಇಲ್ಲಿ ಗಮನಾರ್ಹ. ಮುಂಬರುವ 4 ವಾರಗಳಲ್ಲಿ ಮುಂಗಾರು ದುರ್ಬಲವಾಗಲಿದೆ ಎಂದು ಸಂಸ್ಥೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ-Modi Government: ಸರ್ಕಾರಿ ನೌಕರರನ್ನು ಒತ್ತಡ ಮುಕ್ತವಾಗಿರಿಸಲು ಆಶ್ಚರ್ಯಕರ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಉತ್ತರದಲ್ಲಿ ಮುಂಗಾರು ಯಾವಾಗ ಬರುತ್ತದೆ?
ದೀರ್ಘ ವಿಳಂಬದ ನಂತರ ಜೂನ್ 8 ರಂದು ಮಾನ್ಸೂನ್ ಕೇರಳದ ಕರಾವಳಿಯನ್ನು ತಲುಪಿದ್ದು ಇಲ್ಲಿ ಉಲ್ಲೇಖನೀಯ. ಉತ್ತರ ಭಾರತದಲ್ಲೂ ಮುಂಗಾರು ತಡವಾಗಿ ತಲುಪಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜುಲೈ 8 ರಂದು ಉತ್ತರ ಭಾರತಕ್ಕೆ ಮುಂಗಾರು ಆಗಮನದ ಸಾಧ್ಯತೆಯನ್ನು ವರ್ತಿಸಲಾಗಿತ್ತು. ಇದರಿಂದ ಬೆಳೆಗಳ ಬಿತ್ತನೆ ವಿಳಂಬವಾಗಬಹುದು. 2022 ರಲ್ಲಿ ಬರಗಾಲದ ಕಾರಣ ಯುಪಿಯ 62 ಜಿಲ್ಲೆಗಳನ್ನು ಬರಗಾಲದ ವರ್ಗಕ್ಕೆ ಸೇರಿಸಲಾಗಿದೆ. ಕಳೆದ ವರ್ಷ ಭತ್ತದ ಬೆಳೆಗೆ ಸಾಕಷ್ಟು ಹಾನಿಯಾಗಿತ್ತು. ದುರ್ಬಲ ಮುಂಗಾರು ಬಿಹಾರ ಮತ್ತು ಜಾರ್ಖಂಡ್‌ನಲ್ಲಿಯೂ ತನ್ನ ಪರಿಣಾಮವನ್ನು ತೋರಿಸಿದೆ.

ಇದನ್ನೂ ಓದಿ-Biparjoy Update: ಭಾರಿ ವಿನಾಶ ಸೃಷ್ಟಿಸಲಿದೆ ಬಿಪರ್ ಜಾಯ್, ಗಂಟೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ!

ದಕ್ಷಿಣ ಭಾರತದ ಮಾನ್ಸೂನ್ ಆಗಮನವಾಗಿದೆ. ಆದರೆ, ಈ ಬಾರಿಯೂ ಮುಂಗಾರು ದುರ್ಬಲವಾಗಿರುವ ಕಾರಣ ಈ ರೀತಿಯ ಸಮಸ್ಯೆ ಕಂಡು ಬರುತ್ತಿದ್ದು, ಈ ಬಗ್ಗೆ ಸ್ಕೈಮೆಟ್ ಈಗಾಗಲೇ ಎಚ್ಚರಿಕೆ ನೀಡಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News