Side Effect Of Mobile Use: ನೀವು ಸದಾ ಸ್ಮಾರ್ಟ್‌ಫೋನ್‌ ಬಳಸ್ತೀರಾ! ನಿಮ್ಮ ಬ್ರೈನ್ ಮೇಲೆ ಅದು ಹೇಗೆ ಎಫೆಕ್ಟ್ ಆಗುತ್ತೆ ಗೊತ್ತಾ!

Side Effect Of Mobile Use: ಪ್ರಸ್ತುತ ಜಗತ್ತಿನಲ್ಲಿ ಪ್ರತಿಯೊಬ್ಬರ ಜೀವನದಲ್ಲಿಯೂ ಸ್ಮಾರ್ಟ್‌ಫೋನ್‌ ಒಂದು ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಎಷ್ಟು ಪ್ರಯೋಜನಕಾರಿಯೋ ಅದರ ಅತಿಯಾದ ಬಳಕೆ ಅಷ್ಟೇ ಅಪಾಯಕಾರಿಯೂ ಹೌದು. 

Written by - Yashaswini V | Last Updated : Jan 9, 2024, 11:01 AM IST
  • ಅತಿಯಾಗಿ ಸ್ಮಾರ್ಟ್‌ಫೋನ್‌ ಬಳಸುವುದರಿಂದ ಇದು ನಿದ್ರೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ.
  • ಮಾತ್ರವಲ್ಲ, ಇದರಿಂದ ಮೊದಲಿಗೆ ಸಾಮಾನ್ಯವಾಗಿ ತಲೆನೋವು, ತಲೆಸುತ್ತಿನಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
  • ಭವಿಷ್ಯದಲ್ಲಿ ಇದು ಆಲೋಚನಾ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.
Side Effect Of Mobile Use: ನೀವು ಸದಾ ಸ್ಮಾರ್ಟ್‌ಫೋನ್‌ ಬಳಸ್ತೀರಾ! ನಿಮ್ಮ ಬ್ರೈನ್ ಮೇಲೆ ಅದು ಹೇಗೆ ಎಫೆಕ್ಟ್ ಆಗುತ್ತೆ ಗೊತ್ತಾ! title=

Side Effect Of Mobile Use: ಈ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ ಎಲ್ಲರ ಜೀವಾಳ. ಸ್ಮಾರ್ಟ್‌ಫೋನ್‌ ನಮ್ಮ ಬಹುತೇಕ ಕೆಲಸಗಳನ್ನು ಸುಲಭಗೊಳಿಸಿದೆ. ಆದರೂ, ಇದರ ಅತಿಯಾದ ಬಳಕೆ ಆರೋಗ್ಯಕ್ಕೆ ಆಪತ್ತು ತರುವುದಂತೂ ಸುಳ್ಳಲ್ಲ. ಹೌದು, ಪ್ರಸ್ತುತ ಸ್ಮಾರ್ಟ್‌ಫೋನ್‌ನಲ್ಲಿ ಹಲವು ಅಡ್ವಾನ್ಸ್ಡ್ ವೈಶಿಷ್ಟ್ಯಗಳು ಲಭ್ಯವಿದ್ದು, ಅದರ ಸಹಾಯದಿಂದಾಗಿ ಹಲವು ಕಠಿಣ ಕೆಲಸಗಳನ್ನೂ ಕೂಡ ಕ್ಷಣಾರ್ಧದಲ್ಲಿ ಪೂರ್ಣಗೊಳಿಸಬಹುದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಪ್ರತಿಯೊಂದು ವಿಷಯದಲ್ಲೂ ಧನಾತ್ಮಕ ಅಂಶಗಳಿರುವಂತೆಯೇ ಋಣಾತ್ಮಕ ಅಂಶವೂ ಇರುತ್ತದೆ. ಸ್ಮಾರ್ಟ್‌ಫೋನ್‌ ಅತಿಯಾದ ಬಳಕೆ ನಿಮ್ಮನ್ನು ಅಪಾಯದ ಅಂಚಿಗೆ ತಂದೊಡ್ಡಬಹುದು. 

ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಜನರನ್ನು ಎಷ್ಟರ ಮಟ್ಟಿಗೆ ಆವರಿಸಿ ಬಿಟ್ಟಿದೆ ಎಂದರೆ ಊಟ, ತಿಂಡಿ, ನಿದ್ರೆ ಯಾವುದೂ ಬೇಡ ಸದಾ ಮೊಬೈಲ್ ಕೈಯಲ್ಲಿದ್ದರೆ ಸಾಕು ಎಂಬ ಜನರೇ ಹೆಚ್ಚು. ಪೋಷಕರು, ಮಕ್ಕಳು, ಹಿರಿಯರು, ಕಿರಿಯರು, ಸ್ನೇಹಿತರು ಎಲ್ಲರನ್ನೂ ಬದಿಗೊತ್ತಿ ಜನರ ಜೀವಾಳವಾಗಿರುವ ಸ್ಮಾರ್ಟ್‌ಫೋನ್‌ನ ಮಿತಿ ಮೀರಿದ ಬಳಕೆ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? 

ಇತ್ತೀಚಿನ ದಿನಗಳಲ್ಲಿ ಜನರು ಯಾವುದೇ ಉದ್ದೇಶವಿಲ್ಲದೆ ಫೋನ್ ಬಳಸುತ್ತಾರೆ. ಯುಟ್ಯೂಬ್, ಫೇಸ್ಬುಕ್ ಮತ್ತು ರೀಲ್‌ಗಳನ್ನು ನೋಡುತ್ತಾ ಹೆಚ್ಚಿನ ಸಮಯ ಕಳೆಯುತ್ತಾರೆ.  ಸಾಮಾನ್ಯವಾದ ರೀತಿಯಲ್ಲಿ ಮೊಬೈಲ್‌ಗಳ ಅಲ್ಗಾರಿದಮ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ- ಪತಿ ಪತ್ನಿ ಪರಸ್ಪರರ ವಾಟ್ಸಾಪ್ ಮೆಸೇಜ್ ಪರಿಶೀಲಿಸಬಹುದೇ? ಕಾನೂನು ಏನು ಹೇಳುತ್ತೇ?

ಸಂಶೋಧನೆಯೊಂದರ ಪ್ರಕಾರ, ಒಬ್ಬ ಸಾಮಾನ್ಯ ವ್ಯಕ್ತಿ ದಿನಕ್ಕೆ ಸರಿ ಸುಮಾರು 58 ಬಾರಿ ತನ್ನ ಮೊಬೈಲ್ ಫೋನ್ ಅನ್ನು ತೆರೆಯುತ್ತಾನೆ. ಅಷ್ಟೇ ಅಲ್ಲ, ಓರ್ವ ವ್ಯಕ್ತಿ  ದಿನಕ್ಕೆ ಕನಿಷ್ಠ 7 ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ ವೀಕ್ಷಿಸುತ್ತಾನೆ. ಆದರೆ, ನಿತ್ಯ ಗಂಟೆಗಟ್ಟಲೆ ಫೋನ್ ವೀಕ್ಷಣೆ ನಿಮ್ಮ ದೇಹಕ್ಕೆ ಎಷ್ಟು ಅಪಾಯಕಾರಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆ  ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಆರೋಗ್ಯಕ್ಕೆ ಹೆಚ್ಚಿನ ಹಾನಿಕಾರಕವಾಗಿ. 

ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆಯ ನಕಾರಾತ್ಮಕ ಪರಿಣಾಮ: 
ಅತಿಯಾಗಿ ಸ್ಮಾರ್ಟ್‌ಫೋನ್‌ ಬಳಸುವುದರಿಂದ ಇದು ನಿದ್ರೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ. ಮಾತ್ರವಲ್ಲ, ಇದರಿಂದ ಮೊದಲಿಗೆ ಸಾಮಾನ್ಯವಾಗಿ ತಲೆನೋವು, ತಲೆಸುತ್ತಿನಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಭವಿಷ್ಯದಲ್ಲಿ ಇದು ಆಲೋಚನಾ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಮಾತ್ರವಲ್ಲದೆ, ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು. ಇದೆಲ್ಲದಕ್ಕೂ ಮಿಗಿಲಾಗಿ ಈ ಮೊಬೈಲ್ ಗೀಳು ಮೆದುಳಿನ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮವನ್ನು ಬೀರುತ್ತದೆ. 

ಪ್ರಸ್ತುತ ಜನರು ಮೊಬೈಲ್‌ಗಳ ಮೇಲೆ ಎಷ್ಟು ಅವಲಂಬಿತರಾಗಿದ್ದಾರೆ ಎಂದರೆ ಮೊಬೈಲ್ ಇಲ್ಲದಿದ್ದರೆ ಏನನ್ನೋ ಕಳೆದುಕೊಂಡಂತೆ ಭಾವಿಸುತ್ತಾರೆ. ಅಷ್ಟೇ, ಮೊಬೈಲ್ ಜನರನ್ನು ಎಷ್ಟರ ಮಟ್ಟಿಗೆ ಆವರಿಸಿದೆಯೆಂದರೆ ಐದತ್ತು ನಿಮಿಷಕ್ಕೊಮ್ಮೆಯಾದರೂ ಮೊಬೈಲ್ ಅನ್ನು ತೆರೆದು ಯಾವುದಾದರೂ ನೋಟಿಫಿಕೇಶನ್ ಬಂದಿದೆಯೇ? ಸಾಮಾಜಿಕ ಜಾಲತಾಣದಲ್ಲಿ ತಮ್ಮ  ಪೋಸ್ಟ್ ಅನ್ನು ಯಾರು ಲೈಕ್ ಮಾಡಿದ್ದಾರೆ?, ಯಾರು ಕಾಮೆಂಟ್ ಮಾಡಿದ್ದಾರೆ? ಈ ರೀತಿ ಹಲವು ವಿಷಯಗಳ ಬಗ್ಗೆ ಪದೇ ಪದೇ ಚೆಕ್ ಮಾಡುವ ಅಭ್ಯಾಸ ಕೆಲವರಿಗೆ ಇರುತ್ತದೆ. ಇನ್ನೂ ಕೆಲವರು ಮಾಡುವ ಕೆಲಸವನ್ನೂ ಮರೆತು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ನೋಡುತ್ತಾ ಸಮಯ ವ್ಯರ್ಥ ಮಾಡುತ್ತಾರೆ. ದೀರ್ಘಾವಧಿಯಲ್ಲಿ ಈ ಅಭ್ಯಾಸವು ಮೆದುಳು ಮತ್ತೆ ಮತ್ತೆ ಮೊಬೈಲ್ ಅನ್ನು ಸ್ಪರ್ಶಿಸಲು ಸಂಕೇತಗಳನ್ನು ನೀಡುವಂತೆ ಮಾಡುತ್ತದೆ. ಕೆಲವು ಜನರು ಕ್ರಿಕೆಟ್ ನೋಡುವಾಗ ಪ್ರತಿ ರನ್‌ನ ನವೀಕರಣವನ್ನು ಚೆಕ್ ಮಾಡಲು ಬಯಸುತ್ತಾರೆ. 

ಇದನ್ನೂ ಓದಿ- ರೈಲ್ವೆ ನಿಲ್ದಾಣದಲ್ಲಿ ಅಪ್ಪಿತಪ್ಪಿಯೂ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಕೆಲಸಗಳನ್ನು ಮಾಡಲೇಬಾರದು

ಏನಿದು ಡೋಪಮೈನ್ ಹಾರ್ಮೋನ್?
ನಾವು ಯಾವುದೇ ಕೆಲಸ ಮಾಡುವಾಗ ಸಂತೋಷವನ್ನು ಅನುಭವಿಸುವಾಗ ಡೋಪಮೈನ್ ಎಂಬ ಹಾರ್ಮೋನು ಬಿಡುಗಡೆಯಾಗುತ್ತದೆ. ಯಾವುದೇ ಕೆಲಸ ಮಾಡುವಾಗ ನಮ್ಮ ಮನಸ್ಸಿಗೆ ಖುಷಿ/ಸಂತೋಷದ ಅನುಭವವಾದಾಗ ನಮ್ಮ ಮೆದುಳಿನಲ್ಲಿ ರಾಸಾಯನಿಕ ಕ್ರಿಯೆಯು ಸಂಭವಿಸುತ್ತದೆ ಮತ್ತು ಡೋಪಮೈನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ವ್ಯಕ್ತಿಯಲ್ಲಿ ಆ ಕೆಲಸವನ್ನು ಮತ್ತೆ ಮತ್ತೆ ಮಾಡುವ ಬಯಕೆಯನ್ನು ಹೆಚ್ಚಿಸುತ್ತದೆ. ಕ್ರಮೇಣ ಈ ಬಯಕೆ ಚಟವಾಗಿ ಬದಲಾಗುತ್ತದೆ. ಈ ಚಟದಿಂದಾಗಿ, ಒತ್ತಡವು ದೀರ್ಘಕಾಲದ ಒತ್ತಡವಾಗಿಯೂ ನಂತರದಲ್ಲಿ ಖಿನ್ನತೆಯಾಗಿಯೂ ಬದಲಾಗಬಹುದು.  ಇದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮೊಬೈಲ್ ಬಳಕೆಯ ವಿಧಾನವನ್ನು ಬದಲಾಯಿಸುವುದು ಹಾಗೂ ಸಾಧ್ಯವಾದಷ್ಟು ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು ತುಂಬಾ ಅಗತ್ಯವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News