Samsung New Launch 2021: ಫೆ.2ರಂದು ಬಿಡುಗಡೆಯಾಗಲಿದೆ ಅತ್ಯಂತ ಅಗ್ಗದ Samsung 5000 mAh ಬ್ಯಾಟರಿ ಹೊಂದಿದ ಫೋನ್

Samsung New Launch 2021: ಲಿಸ್ಟಿಂಗ್ ಪ್ರಕಾರ, ಈ ಮಾದರಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 02 ಸ್ಮಾರ್ಟ್‌ಫೋನ್ ಇನ್ಫಿನಿಟಿ-V ನಾಚ್ ಜೊತೆಗೆ 6.5 ಇಂಚಿನ ಡಿಸ್ಪ್ಲೇ ಹೊಂದಿದೆ. ಇದೇ ವೇಳೆ ಎಚ್ಡಿ + ರೆಸಲ್ಯೂಶನ್ ಅನ್ನು ಈ ಫೋನ್ ನಲ್ಲಿ ನೀಡಲಾಗುತ್ತಿದೆ. ನೀವು ಹೆಚ್ಚು ಕೂಲಂಕುಷವಾಗಿ ನೋಡಿದರೆ ಈ  ಫೋನ್‌ ನ ಫೋಟೋ ನೋಡಿ ಅದನ್ನು ನೀವು ಅಂದಾಜಿಸಬಹುದು.

Written by - Nitin Tabib | Last Updated : Jan 31, 2021, 02:50 PM IST
  • ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಸಾಮ್ಸಂಗ್ ನ ಮತ್ತೊಂದು ಜಬರ್ದಸ್ತ್ ಫೋನ್.
  • ಫೆ.2 ರಂದು ಬಿಡುಗಡೆಯಾಗಲಿದೆ 'ಮೇರಾ ಎಮ್' M02 ಸ್ಮಾರ್ಟ್ ಫೋನ್.
  • 7000 ರೂ.ಗಿಂತಲೂ ಕಮ್ಮಿ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆ ವರ್ತಿಸಲಾಗುತ್ತಿದೆ.
Samsung New Launch 2021: ಫೆ.2ರಂದು ಬಿಡುಗಡೆಯಾಗಲಿದೆ ಅತ್ಯಂತ ಅಗ್ಗದ Samsung 5000 mAh ಬ್ಯಾಟರಿ ಹೊಂದಿದ ಫೋನ್  title=
Samsung New Launch 2021 (File Photo)

ನವದೆಹಲಿ: Samsung New Launch 2021 - ದಕ್ಷಿಣ ಕೊರಿಯಾ ಮೂಲಕದ ಸ್ಮಾರ್ಟ್ ಫೋನ್ ಉತ್ಪಾದಕ ಕಂಪನಿ ಸ್ಯಾಮ್‌ಸಂಗ್ (Samsung) ತನ್ನ M ಸರಣಿಯ (Samsung M Series) ಯಶಸ್ಸನ್ನು ಮುಂದಿನ ಸುತ್ತಿಗೆ ಕೊಂಡೊಯ್ಯಲು ಸಿದ್ಧವಾಗಿದೆ. ಈ ಸಂಬಂಧ, ಕಂಪನಿಯು ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಅಲೆ ಸೃಷ್ಟಿಸಲಿದೆ.  ಸ್ಯಾಮ್‌ಸಂಗ್ ತನ್ನ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ.  ಫೆಬ್ರವರಿ 2 ರಂದು (Samsung February 2021 Launch) ಕಂಪನಿಯು ಭಾರತದಲ್ಲಿ ಎಂ ಸರಣಿಯ ಹೊಸ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಂ 02 ಅನ್ನು ಪರಿಚಯಿಸುತ್ತಿದೆ. ಈ ಕಡಿಮೆ ಬಜೆಟ್ ಫೋನ್‌ನ ಬಿಡುಗಡೆ ನಿಖರವಾಗಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ವರದಿಗಳ ಪ್ರಕಾರ, ಇದರ ಬೆಲೆ 7 ಸಾವಿರ ರೂಪಾಯಿಗಳಿಗಿಂತ ಕಡಿಮೆ ಇರಲಿದೆ ಎನ್ನಲಾಗಿದೆ.

ಕಡಿಮೆ ಬಜೆಟ್ ನಲ್ಲಿ ಜಬರ್ದಸ್ತ್ ವೈಶಿಷ್ಟ್ಯ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 02 ಅನ್ನು ಮೇರಾ ಎಂ (Mera M) ಎಂದು ಕರೆಯಲಾಗುತ್ತಿದೆ ಅಂದರೆ ನನ್ನ ಮನರಂಜನಾ ಸ್ಮಾರ್ಟ್‌ಫೋನ್ ಎಂದರ್ಥ. ಹೊಸ ಫೋನ್‌ನ ಕೆಲವು ವೈಶಿಷ್ಟ್ಯಗಳು ಇ-ಕಾಮರ್ಸ್ ಕಂಪನಿ ಅಮೆಜಾನ್ (Amazon) ನಲ್ಲಿ ಬಹಿರಂಗಗೊಂಡಿವೆ. ಇದರಿಂದ ನೀವು ಈ ಸ್ಮಾರ್ಟ್ ಫೋನ್ ಯಾವ ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ ಎಂಬುದನ್ನು ಊಹಿಸಬಹುದು. ಪಟ್ಟಿಯ ಪ್ರಕಾರ, ಈ ಮಾದರಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 02 ಸ್ಮಾರ್ಟ್‌ಫೋನ್ ಇನ್ಫಿನಿಟಿ-ವಿ ದರ್ಜೆಯೊಂದಿಗೆ 6.5 ಇಂಚಿನ ಡಿಸ್ಪ್ಲೇ ಹೊಂದಿದೆ. ದೇ ವೇಳೆ ಎಚ್ಡಿ + ರೆಸಲ್ಯೂಶನ್ ಅನ್ನು ಈ ಫೋನ್ ನಲ್ಲಿ ನೀಡಲಾಗುತ್ತಿದೆ. ನೀವು ಹೆಚ್ಚು ಕೂಲಂಕುಷವಾಗಿ ಈ  ಫೋನ್‌ ನ ಫೋಟೋ ನೋಡಿ ಅದನ್ನು ನೀವು ಅಂದಾಜಿಸಬಹುದು.

ಇದನ್ನು ಓದಿ- Samsung Galaxy M02 : ಸ್ಯಾಮ್ ಸಂಗ್ ತರುತ್ತಿದೆ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್..! ಅದರ ಫೀಚರ್ ಮತ್ತು ಬೆಲೆ ಎಷ್ಟಿರಬಹುದು ಗೊತ್ತಾ..?

ಸೋರಿಕೆಯಾದ ವರದಿಯಿಂದ ಈ ಮಾಹಿತಿ ಬಹಿರಂಗ
ಸಾಮ್ಸಂಗ್ ಗ್ಯಾಲಕ್ಸಿ M02 (Samsung Galaxy M02) ಕುರಿತು ಸೋರಿಕೆಯಾಗಿರುವ (Tech News In Kannada) ಒಂದು ವರದಿಯ ಪ್ರಕಾರ ಈ ಸ್ಮಾರ್ಟ್ ಫೋನ್ ನಲ್ಲಿ ರಿಯರ್ ಭಾಗದಲ್ಲಿ 13 ಮೆಗಾ ಪಿಕ್ಸಲ್ ಹಾಗೂ 2 ಮೆಗಾ ಪಿಕ್ಸಲ್ ಎರಡು ಕ್ಯಾಮೆರಾಗಳಿರುವ ಸಾಧ್ಯತೆ ಇದೆ. ಸ್ಯಾಮ್ಸಂಗ್ ನ ಈ ಸ್ಮಾರ್ಟ್ ಫೋನ್ ನಲ್ಲಿ ಸ್ನ್ಯಾಪ್ ಡ್ರಾಗನ್ 450 ಪ್ರೋಸೆಸರ್ ಸಪೋರ್ಟ್ ಇರಲಿದೆ ಎನ್ನಲಾಗಿದೆ. ಇನ್ನೊಂದೆಡೆ ಈ ಮಾಡೆಲ್ ನಲ್ಲಿ 3 ಜಿಬಿ RAM ಹಾಗೂ 64 ಜಿಬಿ ಆಂತರಿಕ ಶೇಖರಣಾ ಸಾಮರ್ಥ ಹೊಂದಿರಲಿದೆ ಎನ್ನಲಾಗುತ್ತಿದೆ.

ಇದನ್ನು ಓದಿ- Samsung Galaxy M31s:ಇಂದು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ಈ ಪೋನಿನ ವಿಶೇಷತೆ ಏನು ಗೊತ್ತೇ?

ಈ ಫೋನ್ ನ ಅತಿ ದೊಡ್ಡ USP! 5000 mAh ಬ್ಯಾಟರಿ ಸಾಮರ್ಥ್ಯ 
ಅಮೆಜಾನ್  ಲಿಸ್ಟಿಂಗ್ ಪ್ರಕಾರ ಈ ಗ್ಯಾಲಕ್ಸಿ (Samsung Galaxy) ಎಮ್02 ಮಾಡೆಲ್ ಫೋನ್ ನಲ್ಲಿ 5000 mAh ಬ್ಯಾಟರಿ ಇರುವುದು ಇದರ ವಿಶೇಷ USP. ಇಷ್ಟೊಂದು ಉತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದ್ದರೂ ಕೂಡ ಇದರ ಬೆಲೆ 7000 ರೂ.ಗಳಿಗಿಂತ ಕಡಿಮೆಯೇ ಇರಲಿದೆ.

ಇದನ್ನು ಓದಿ-ಕೊನೆಗೂ ಭಾರತದಲ್ಲಿ ಬಿಡುಗಡೆಯಾಯ್ತು ಸ್ಯಾಮ್ಸಂಗ್ ಗ್ಯಾಲಕ್ಸಿ S10 LITE, ಬೆಲೆ ಎಷ್ಟು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News