ತನ್ನ ಈ ಜನಪ್ರಿಯ ಯೋಜನೆ ಸ್ಥಗಿತಗೊಳಿಸಿದ ರಿಲಯನ್ಸ್ ಜಿಯೋ, ಇನ್ಮುಂದೆ ಇದೇ ನೋಡಿ ಅಗ್ಗದ ಯೋಜನೆ!

Reliance Jio Recharge Plans: ಇನ್ಮುಂದೆ ಜಿಯೋದ ದೈನಂದಿನ ಡೇಟಾ ಯೋಜನೆಯಲ್ಲಿ ಅಗ್ಗದ ಯೋಜನೆ ಎಂದರೆ, ಅದು ರೂ 149ರ ಯೋಜನೆಯಾಗಿದೆ, ಇದು 1GB ದೈನಂದಿನ ಡೇಟಾದೊಂದಿಗೆ ಬರುತ್ತದೆ. ಇದು ರೂ 119 ಪ್ಲಾನ್‌ಗಿಂತ ಕಡಿಮೆ ದೈನಂದಿನ ಡೇಟಾವನ್ನು ನೀಡಿದರೂ ಕೂಡ ಈ ಯೋಜನೆಯ ಸಿಂಧುತ್ವ 20 ದಿನಗಳದ್ದಾಗಿದೆ.  

Written by - Nitin Tabib | Last Updated : Aug 24, 2023, 09:16 PM IST
  • ಕೆಲವು ದಿನಗಳ ಹಿಂದೆ, ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಪೋರ್ಟ್‌ಫೋಲಿಯೊದಲ್ಲಿ ಎರಡು ಹೊಸ ಮೊಬೈಲ್ ಯೋಜನೆಗಳನ್ನು ಬಿಡುಗಡೆ ಮಾಡಿತ್ತು,
  • ಇದರಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಇವುಗಳಲ್ಲಿ ಮೊದಲನೆಯದು ಜಿಯೋ ರೂ 1,099 ಯೋಜನೆಯಾಗಿದ್ದು,
  • ಇದು ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು 84 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಈ ಯೋಜನೆಯು ದೈನಂದಿನ 2GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ಅನಿಯಮಿತ 5G ಡೇಟಾವನ್ನು ಒಳಗೊಂಡಿದೆ.
ತನ್ನ ಈ ಜನಪ್ರಿಯ ಯೋಜನೆ ಸ್ಥಗಿತಗೊಳಿಸಿದ ರಿಲಯನ್ಸ್ ಜಿಯೋ, ಇನ್ಮುಂದೆ ಇದೇ ನೋಡಿ ಅಗ್ಗದ ಯೋಜನೆ! title=

ಬೆಂಗಳೂರು: ರಿಲಯನ್ಸ್ ಜಿಯೋ ತನ್ನ ಅಗ್ಗದ ದೈನಂದಿನ ಡೇಟಾ ಯೋಜನೆಗಳಲ್ಲಿ ಒಂದಾದ ರೂ 119ರ ಯೋಜನೆಯನ್ನು ಸ್ಥಗಿತಗೊಳಿಸಿದೆ. ಈ ಯೋಜನೆಯು 14 ದಿನಗಳವರೆಗೆ ನಿತ್ಯ 1.5GB ಡೇಟಾ, 100 ದೈನಂದಿನ ಉಚಿತ SMS ನ ಪ್ರಯೋಜನಗಳೊಂದಿಗೆ ಬರುತ್ತಿತ್ತು. ಈ ಜಿಯೋ ಯೋಜನೆಯಲ್ಲಿ ಅನಿಯಮಿತ ಕರೆಗಳ ಪ್ರಯೋಜನವನ್ನು ಸಹ ಶಾಮೀಲುಗೊಳಿಸಲಾಗಿತ್ತು. ರೂ 119 ಜಿಯೋ ಪ್ರಿಪೇಯ್ಡ್ ಯೋಜನೆಯನ್ನು ಸ್ಥಗಿತಗೊಂಡ ಬಳಿಕ, ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಅಗ್ಗದ ದೈನಂದಿನ ಡೇಟಾ ಯೋಜನೆ ರೂ 149 ಆಗಿದೆ, ಇದು 1GB ದೈನಂದಿನ ಡೇಟಾ ಮತ್ತು ಅನಿಯಮಿತ ಕರೆಯೊಂದಿಗೆ ದೈನಂದಿನ ಉಚಿತ SMS ಅನ್ನು ನೀಡುತ್ತದೆ.

ಜಿಯೋ ತನ್ನ ರೂ 119 ಪ್ರಿಪೇಯ್ಡ್ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. ಇದೀಗ ದೈನಂದಿನ ಡೇಟಾ ಯೋಜನೆಯಲ್ಲಿ ಅಗ್ಗದ ಯೋಜನೆ 149 ರೂ.ಗಲದ್ದಾಗಿದೆ ಜಿಯೋದ ಸ್ಥಗಿತಗೊಂಡ 119 ರೂ ಯೋಜನೆಯು 14 ದಿನಗಳ ಮಾನ್ಯತೆಯೊಂದಿಗೆ ಬರುತ್ತಿತ್ತು. ಅದರಲ್ಲಿ, 100 ದೈನಂದಿನ ಉಚಿತ SMS ಮತ್ತು ದೈನಂದಿನ 1.5GB ಡೇಟಾ ಅನಿಯಮಿತ ಕರೆ ಸೌಲಭ್ಯಗಳು ಶಾಮೀಲಾಗಿದ್ದವು.

ಇನ್ಮುಂದೆ ಜಿಯೋದ ದೈನಂದಿನ ಡೇಟಾ ಯೋಜನೆಯಲ್ಲಿ ಅಗ್ಗದ ಯೋಜನೆ ರೂ 149 ಆಗಿದೆ, ಇದು 1GB ದೈನಂದಿನ ಡೇಟಾದೊಂದಿಗೆ ಬರುತ್ತದೆ. ಇದು ರೂ 119 ಪ್ಲಾನ್‌ಗಿಂತ ಕಡಿಮೆ ದೈನಂದಿನ ಡೇಟಾವನ್ನು ನೀಡುತ್ತದೆಯಾದರೂ, ಈ ಯೋಜನೆಯ ಮಾನ್ಯತೆಯು 20 ದಿನಗಳದ್ದಾಗಿದೆ. ಇದರಲ್ಲಿ, ನೀವು ಅನಿಯಮಿತ ಕರೆಯೊಂದಿಗೆ ದೈನಂದಿನ 100 ಉಚಿತ SMS ನ ಪ್ರಯೋಜನವನ್ನು ಪಡೆಯುತ್ತೀರಿ. ಯೋಜನೆಯು ಎಲ್ಲಾ ಜಿಯೋ ಸೂಟ್ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಒಳಗೊಂಡಿದೆ. ಆದಾಗ್ಯೂ, ಅನಿಯಮಿತ 5G ಡೇಟಾದ ಪ್ರಯೋಜನವು ಈ ಯೋಜನೆಯಲ್ಲಿ ಲಭ್ಯವಿಲ್ಲ.

ತನ್ನ ರೂ 119ರ  ಯೋಜನೆಯನ್ನು ಸ್ಥಗಿತಗೊಳಿಸುವ ಕಾರಣ ಜಿಯೋ ಇದುವರೆಗೆ ಹೇಳಿಕೊಂಡಿಲ್ಲ.  ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ (ARPU) ಮೆಟ್ರಿಕ್‌ಗಳನ್ನು ಹೆಚ್ಚಿಸಲು ಕಂಪನಿ ಕೈಗೊಂಡ ಕಾರ್ಯತಂತ್ರದ ಇದು ಭಾಗವಾಗಿರಬಹುದು ಇತ್ತೀಚೆಗಷ್ಟೇ ಏರ್‌ಟೆಲ್ ಕೂಡ ಇದೇ ಕ್ರಮ ಕೈಗೊಂಡಿದೆ.

ಇದನ್ನೂ ಓದಿ-Chandrayaan 3 ಯಶಸ್ಸಿನ ನಡುವೆಯೇ ಚಂದ್ರನ ಮೇಲ್ಮೈ ವೀಕ್ಷಣೆಗೆ ಮನೆಗೆ ತನ್ನಿ ಈ ಪವರ್ಫುಲ್ ಟೆಲಿಸ್ಕೋಪ್!

ಕೆಲವು ದಿನಗಳ ಹಿಂದೆ, ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಪೋರ್ಟ್‌ಫೋಲಿಯೊದಲ್ಲಿ ಎರಡು ಹೊಸ ಮೊಬೈಲ್ ಯೋಜನೆಗಳನ್ನು ಬಿಡುಗಡೆ ಮಾಡಿತ್ತು, ಇದರಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಇವುಗಳಲ್ಲಿ ಮೊದಲನೆಯದು ಜಿಯೋ ರೂ 1,099 ಯೋಜನೆಯಾಗಿದ್ದು, ಇದು ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು 84 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಈ ಯೋಜನೆಯು ದೈನಂದಿನ 2GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ಅನಿಯಮಿತ 5G ಡೇಟಾವನ್ನು ಒಳಗೊಂಡಿದೆ.

ಇದನ್ನೂ ಓದಿ-New Electric Bike Launch: 307km ರೆಂಜ್ ಇರುವ ಎಲೆಕ್ಟ್ರಿಕ್ ಬೈಕ್ ಭಾರತದಲ್ಲಿ ಬಿಡುಗಡೆ !

ಇದೇ ವೇಳೆ, 1,499 ರೂಗಳ ಯೋಜನೆಯೂ ಕೂಡ ಇದೆ, ಇದರೊಂದಿಗೆ ನೆಟ್‌ಫ್ಲಿಕ್ಸ್ ಬೇಸಿಕ್ ಪ್ಲಾನ್, ದೈನಂದಿನ 3GB ಡೇಟಾ + 40GB ಹೆಚ್ಚುವರಿ ಡೇಟಾ, ದೈನಂದಿನ 100 ಉಚಿತ SMS ಮತ್ತು ಅನಿಯಮಿತ ಕರೆಗಳ ಪ್ರಯೋಜನವು ಲಭ್ಯವಿದೆ. ಈ ಯೋಜನೆಯಲ್ಲಿ ಅನಿಯಮಿತ 5G ಡೇಟಾ ಸಹ ಲಭ್ಯವಿರುತ್ತದೆ. ಈ ಯೋಜನೆಯ ಮಾನ್ಯತೆ ಕೂಡ 84 ದಿನಗಳದ್ದಾಗಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News