Emergence Data Loan ಸೌಕರ್ಯ ಆರಂಭಿಸಿದ Reliance Jio

Reliance Jio: ದೇಶದ ದಿಗ್ಗಜ ಟೆಲಿಕಾಂ ಕಂಪನಿಯಾಗಿರುವ ತನ್ನ ಬಳಕೆದಾರರಿಗೆ ವಿಶೇಷ ಸೌಕರ್ಯವೊಂದನ್ನು ಆರಂಭಿಸಿದೆ. ಜಿಯೋ ತನ್ನ ಪ್ರಿಪೈಡ್ ಗ್ರಾಹಕರಿಗೆ ಎಮೆರ್ಜೆನ್ಸಿ ಡೇಟಾ ಲೋನ್ ನೀಡಲಿದೆ. 

Written by - Nitin Tabib | Last Updated : Jul 3, 2021, 05:31 PM IST
  • ತನ್ನ ಗ್ರಾಹಕರಿಗೆ ಹೊಸ ಸೌಲಭ್ಯ ಕಲ್ಪಿಸಿದ ರಿಲಯನ್ಸ್ ಜಿಯೋ.
  • ಈ ಸೌಲಭ್ಯದಡಿ ಗ್ರಾಹಕರು ಮೊದಲು ಡೇಟಾ ಪಡೆದು ನಂತರ ಹಣ ಪಾವತಿಸಬಹುದು.
  • ಈ ಪ್ಲಾನ್ ಗೆ ಎಮರ್ಜೆನ್ಸಿ ಡಾಟಾ ಲೋನ್ ಎಂದು ಹೆಸರಿಡಲಾಗಿದೆ.
Emergence Data Loan ಸೌಕರ್ಯ ಆರಂಭಿಸಿದ Reliance Jio title=
Reliance Jio New Facility (File Photo)

Reliance Jio: ದೇಶದ ದಿಗ್ಗಜ ಟೆಲಿಕಾಂ ಕಂಪನಿಯಾಗಿರುವ ತನ್ನ ಬಳಕೆದಾರರಿಗೆ ವಿಶೇಷ ಸೌಕರ್ಯವೊಂದನ್ನು ಆರಂಭಿಸಿದೆ. ಜಿಯೋ ತನ್ನ ಪ್ರಿಪೈಡ್ ಗ್ರಾಹಕರಿಗೆ (Prepaid Customers) ಎಮೆರ್ಜೆನ್ಸಿ ಡೇಟಾ ಲೋನ್ (Emergency Data Loan) ನೀಡಲಿದೆ. ಈ ಸೌಕರ್ಯದ ಅಡಿ ಕಂಪನಿ ತನ್ನ ಗ್ರಾಹಕರಿಗೆ ಮೊದಲು ರೀಚಾರ್ಚ್ ಮಾಡಿ ನಂತರ ಹಣ ಪಾವತಿಸಲು ಅವಕಾಶ ಕಲ್ಪಿಸಿದೆ. ಈ ಹೊಸ ಕೊಡುಗೆಯ ಅಡಿ ಬಳಕೆದಾರರು ತಕ್ಷಣ ಡೇಟಾ ಲೋನ್ ಪಡೆದು ನಂತರ ಹಣ ಪಾವತಿಸಬಹುದು.

ಯಾವ ಬಳಕೆದಾರರ ಹೈ ಸ್ಪೀಡ್ ಡೇಟಾ ಕೋಟಾ ಮುಗಿದುಹೋಗುತ್ತದೆಯೋ ಅವರಿಗೆ ಪುನಃ ರಿಚಾರ್ಜ್ ಮಾಡಿಸಲು ಅಡಚಣೆ ಎದುರಾಗುತ್ತದೆ. ಅಂತಹ ಗ್ರಾಹಕರು ಈ ಸೌಲಭ್ಯದ ಲಾಭ ಪಡೆದುಕೊಳ್ಳಬಹುದು. ಜಿಯೋ ಪ್ರಿಪೈಡ್ ಬಳಕೆದಾರರು ಒಟ್ಟು ಐದು ಬಾರಿ 1-1 ಜಿಬಿಯಂತೆ ತುರ್ತು ಡೇಟಾ ಅನ್ನು ಸಾಲವಾಗಿ ಪಡೆದುಕೊಳ್ಳಗಹುದು. ಪ್ರತಿ ಪ್ಯಾಕ್ ಬೆಲೆ ರೂ.11 ಆಗಿರಲಿದೆ. 

ಎಮರ್ಜೆನ್ಸಿ ಡೇಟಾ ಲೋನ್ ಹೇಗೆ ಪಡೆಯಬೇಕು?
>> ಮೊದಲಿಗೆ ಮೈಜಿಯೊ ಅಪ್ಲಿಕೇಶನ್‌ಗೆ (MyJio App) ಹೋಗಿ ಮತ್ತು ಪುಟದ ಮೇಲಿನ ಎಡಭಾಗದಲ್ಲಿ ನೀಡಲಾದ ಮೆನು ಕ್ಲಿಕ್ ಮಾಡಿ.
>> ಈಗ 8 ನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವ ತುರ್ತು ಡೇಟಾ ಸಾಲವನ್ನು ಆಯ್ಕೆಮಾಡಿ
>> ಆಗ ನಿಮಗೆ 'Recharge Now, Pay Late' ಆಯ್ಕೆ ಕಾಣಿಸಿಕೊಳ್ಳಲಿದೆ. 
>> ಅದರಲ್ಲಿ ಪ್ರೋಸೆಸ್ದ್ ಮೇಲೆ ಕ್ಲಿಕ್ ಮಾಡಿ
>> ಮುಂದಿನ ಪುಟದಲ್ಲಿ, ‘Get emergency data’ ಆಯ್ಕೆಯನ್ನು ಕ್ಲಿಕ್ ಮಾಡಿ
>> ತುರ್ತು ಸಾಲ ಲಾಭಕ್ಕಾಗಿ Activate Now ಕ್ಲಿಕ್ ಮಾಡಿ
>> ಇದರ ನಂತರ ನಿಮ್ಮ ತುರ್ತು ಡೇಟಾ ಸಾಲವನ್ನು ಸಕ್ರಿಯಗೊಳಿಸಲಾಗುತ್ತದೆ.
>> ಇದೇ ಪುಟದಲ್ಲಿ ತುರ್ತು ಡೇಟಾ ಸಾಲ ಪಾವತಿಯನ್ನು ಸಹ ಮಾಡಬಹುದು.

ಇದನ್ನೂ ಓದಿ- WhatsApp New Update- ಇನ್ಮುಂದೆ ವಾಟ್ಸಾಪ್‌ನಿಂದಲೂ ಉತ್ತಮ ಗುಣಮಟ್ಟದ ಫೋಟೋಗಳನ್ನು ಕಳುಹಿಸಬಹುದು

ದುರ್ಬಲ ನೆಟ್‌ವರ್ಕ್‌ಗಳಲ್ಲಿ ಕೆಲಸ ಮಾಡುವ ಬಳಕೆದಾರರಿಗೆ ಇದು ಹೆಚ್ಚಿನ ಲಾಭ ನೀಡಲಿದೆ. ಅವರಿಗೆ ನಿರಂತರ ಡೇಟಾ ಬೇಕು ಆದರೆ ಕೆಲವು ಕಾರಣಗಳಿಂದಾಗಿ ಅವರು ತಕ್ಷಣ ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಬಳಕೆದಾರರು ಈಗ ಜಿಯೋ ಅಪ್ಲಿಕೇಶನ್‌ನಿಂದ ಡೇಟಾವನ್ನು ತಕ್ಷಣ ರೀಚಾರ್ಜ್  ಮಾಡಲು ಸಾಧ್ಯವಾಗಲಿದೆ.

ಇದನ್ನೂ ಓದಿ-WhatsApp Testing New Feature: WhatsAppನಲ್ಲಿ ಬರುತ್ತಿರುವ ಈ ವಿಡಿಯೋ ಮೂಲಕ ನೀವು ಹೈ ಕ್ವಾಲಿಟಿ ವಿಡಿಯೋ ಕಳುಹಿಸಬಹುದು

ಇತ್ತೀಚೆಗಷ್ಟೇ ಜಿಯೋ ಮೂರು ಹೊಸ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ
ಇತ್ತೀಚೆಗಷ್ಟೇ ರಿಲಯನ್ಸ್ ಮಾಲೀಕತ್ವದ ಜಿಯೋ ಕಂಪನಿ ಮೂರೋ ಹೊಸ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ್ದು, ಇವುಗಳ ಬೆಲೆ ರೂ.2000 ಕ್ಕಿಂತ ಹೆಚ್ಚಾಗಿದೆ. ಈ ಪ್ಲಾನ್ (Recharge Plan) ಗಳಲ್ಲಿ ಗ್ರಾಹಕರಿಗೆ ಅನಿಯಮಿತ ದತಾಂಶ, ಅನಿಯಮಿತ ಕಾಲಿಂಗ್ ಹಾಗೂ ಉಚಿತ SMS ಗಳ ಜೊತೆಗೆ ಇತರೆ ಸೌಲಭ್ಯಗಳು ಸಿಗಲಿವೆ. ಒಂದು ವರ್ಷ ಕಾಲ ಈ ಯೋಜನೆಯ ಲಾಭ ಪಡೆಯಬಹುದು. ರೂ.2397ರ ಆರಂಭಿಕ ಪ್ಯಾಕೇಜ್ ಒಂದು ನೋ ಡೈಲಿ ಲಿಮಿತ್ತ್ ಪ್ಲಾನ್ ಆಗಿದೆ. ಇದಲ್ಲದೆ ರೂ.2599ರ ಪ್ಯಾಕೇಜ್ ನಲ್ಲಿ ನಿಮಗೆ ಡಿಸ್ನಿ + ಹಾಟ್ ಸ್ಟಾರ್ ಸಬ್ಸ್ಕ್ರಿಪ್ಶನ್ ಕೂಡ ಸಿಗಲಿದೆ.

ಇದನ್ನೂ ಓದಿ-BSNL ನೀಡುತ್ತಿದೆ free 4G ಸಿಮ್ ಕಾರ್ಡ್ , ನೀವು ಮಾಡಬೇಕಾಗಿರುವುದು ಇಷ್ಟೇ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News