ಮಾರುಕಟ್ಟೆಗೆ ಲಗ್ಗೆ ಇಡಲಿದೆ Redmiಯ ಈ ಸುಂದರ 5G ಸ್ಮಾರ್ಟ್‌ಫೋನ್, ವೈಶಿಷ್ಟ್ಯಗಳನ್ನು ತಿಳಿಯಿರಿ

ನವೆಂಬರ್ 30 ರಂದು Redmi ಈ 5G ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ರಿಲೀಸ್ ಮಾಡುವ ಸಾಧ್ಯತೆ ಇದೆ ಎಂದು ವಿಶ್ವಾಸಾರ್ಹ ಮೂಲವೊಂದು ಬಹಿರಂಗಪಡಿಸಿದೆ.

Written by - Puttaraj K Alur | Last Updated : Nov 14, 2021, 01:05 PM IST
  • ನ.30ರಂದು ಭಾರತೀಯ ಮಾರುಕಟ್ಟೆಗೆ Redmi Note 11T 5G ಸ್ಮಾರ್ಟ್‌ಫೋನ್ ಲಗ್ಗೆ
  • Redmi Note 11T 5G ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ
  • ಮಾಹಿತಿ ಪ್ರಕಾರ Redmi Note 11T 5G ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ
ಮಾರುಕಟ್ಟೆಗೆ ಲಗ್ಗೆ ಇಡಲಿದೆ Redmiಯ ಈ ಸುಂದರ 5G ಸ್ಮಾರ್ಟ್‌ಫೋನ್, ವೈಶಿಷ್ಟ್ಯಗಳನ್ನು ತಿಳಿಯಿರಿ title=
Redmi Note 11T 5G HD ಸ್ಮಾರ್ಟ್‌ಫೋನ್

ನವದೆಹಲಿ: ಚೀನಾದ ಖ್ಯಾತ ಸ್ಮಾರ್ಟ್‌ಫೋನ್ ತಯಾರಕ ರೆಡ್‌ಮಿ ಭಾರತದಲ್ಲಿ ರೆಡ್‌ಮಿ ನೋಟ್ 11(Redmi Note 11)ಅನ್ನು ರೆಡ್‌ಮಿ ನೋಟ್ 11ಟಿ 5ಜಿ(Redmi Note 11T 5G)ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಇದೇ ನವೆಂಬರ್ 30 ರಂದು Redmi ಈ ಸುಂದರವಾದ 5G ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ರಿಲೀಸ್ ಮಾಡುವ ಸಾಧ್ಯತೆ ಇದೆ ಎಂದು ವಿಶ್ವಾಸಾರ್ಹ ಮೂಲವೊಂದು ಬಹಿರಂಗಪಡಿಸಿದೆ. ಸದ್ಯಕ್ಕೆ ಈ ಬಗ್ಗೆ ಕಂಪನಿಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಈ ಫೋನ್‌ನ ವೈಶಿಷ್ಟ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಲೀಕ್ ಆಗಿವೆ.   

Redmi Note 11T 5G ಅದ್ಭುತ ವೈಶಿಷ್ಟ್ಯಗಳು

Redmi Note 11T 5G HD ಸ್ಮಾರ್ಟ್‌ಫೋನ್ Redmi Note 11ಗೆ ಹೋಲುತ್ತದೆ ಎಂದು ಹೇಳಲಾಗುತ್ತಿದೆ. MediaTek ಡೈಮೆನ್ಸಿಟಿ 810 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲ್ಪಡುವ ಈ ಸ್ಮಾರ್ಟ್‌ಫೋನ್ 6.6-ಇಂಚಿನ FHD+ ಪ್ಯಾನೆಲ್, 2,400 x 1,080 ಪಿಕ್ಸೆಲ್‌ಗಳ ರೆಸಲ್ಯೂಶನ್, 90Hz ನ ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ನೊಂದಿಗೆ ಬರುತ್ತದೆ. ನೀವು ಈ ಸ್ಮಾರ್ಟ್‌ಫೋನ್ ಅನ್ನು 3 ಬಣ್ಣಗಳಲ್ಲಿ ಖರೀದಿಸಬಹುದು. ಇದು ಮ್ಯಾಟ್ ಬ್ಲಾಕ್, ಸ್ಟಾರ್ಡಸ್ಟ್ ವೈಟ್ ಮತ್ತು ಅಕ್ವಾಮರೀನ್ ಬ್ಲೂ ಕಲರ್ ಗಳಲ್ಲಿ ಲಭ್ಯವಿರಲಿದೆ.

ಇದನ್ನೂ ಓದಿ: Reels ಪೋಸ್ಟ್ ಮಾಡಿ, 7.4 ಲಕ್ಷ ರೂ. ಬೋನಸ್ ಗೆಲ್ಲಿರಿ

ಹೊಸ ಸ್ಮಾರ್ಟ್‌ಫೋನ್ ಕ್ಯಾಮೆರಾ ಮತ್ತು ಬ್ಯಾಟರಿ

Redmiಯ ಈ ಇತ್ತೀಚಿನ 5G ಸ್ಮಾರ್ಟ್‌ಫೋನ್ f/1.8 ಅಪರ್ಚರ್ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾದೊಂದಿಗೆ 50MP ಮುಖ್ಯ ಕ್ಯಾಮೆರಾ ಸೆನ್ಸಾರ್ ನೊಂದಿಗೆ ಬರುತ್ತದೆ. ವಿಡಿಯೋ ಮತ್ತು ಸೆಲ್ಫಿಗಳನ್ನು ತೆಗೆದುಕೊಳ್ಳಲು ನಿಮಗೆ 16MP ಮುಂಭಾಗದ ಕ್ಯಾಮೆರಾ ಸೆನ್ಸಾರ್ ನೀಡಲಾಗಿದೆ. ಮಾಹಿತಿ ಸೋರಿಕೆಯಾಗಿರುವ ಪ್ರಕಾರ, ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಮತ್ತು 33W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ.  

ಸ್ಮಾರ್ಟ್‌ಫೋನ್‌ನ ಸ್ಟೋರೇಜ್ ಸಾಮರ್ಥ್ಯ

Redmi Note 11T 5Gಯ ಸ್ಮಾರ್ಟ್‌ಫೋನ್‌ನ ​​ಸ್ಟೋರೇಜ್ ಸಾಮರ್ಥ್ಯವು ಕೂಡ ಉತ್ತಮವಾಗಿದೆ. ಈ ಫೋನ್ ನಿಮಗೆ 6GB RAM ಮತ್ತು 64GB, 6GB RAM ಮತ್ತು 128GB ಹಾಗೂ  8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ ಕುರಿತು ಕಂಪನಿಯಿಂದ ಇನ್ನೂ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಹೀಗಾಗಿ ಇದರ ನಿಖರ ಬೆಲೆ ಎಷ್ಟಿರುತ್ತದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: BSNL ಗ್ರಾಹಕರಿಗೆ ಸಿಹಿ ಸುದ್ದಿ : ₹36 ಗೆ ಸಿಗಲಿದೆ ಡೇಟಾ ಮತ್ತು ಹಲವು ಪ್ರಯೋಜನಗಳು! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News