ಕರೆಂಟ್ ಇಲ್ಲದಿದ್ರೂ ಸುಮಾರು 15ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತಂತೆ ಈ ಫ್ಯಾನ್

ಅಬ್ಬಬ್ಬಾ! ಈ ಬೇಸಿಗೆ ಕಾಲದಲ್ಲಿ ಫ್ಯಾನ್ ಇಲ್ಲದೇ ಇರುವುದನ್ನು ಊಹಿಸಿಕೊಳ್ಳಲೂ ಕೂಡ ಸಾಧ್ಯವಿಲ್ಲ. ಆದಾಗ್ಯೂ, ಲೋಡ್ ಶೆಡ್ಡಿಂಗ್ ಮತ್ತಿತರ ಕಾರಣಗಳಿಂದ ಪವರ್ ಕಟ್ ಆದಾಗ ಏನ್ ಮಾಡೋದು ಅಂತ ಯೋಚನೆ ಮಾಡುವವರಿಗೆ ಇಲ್ಲಿದೆ ಸುಲಭ ಪರಿಹಾರ. ಕರೆಂಟ್ ಇಲ್ಲದಿದ್ದರೂ ಕೂಡ ಗಂಟೆ ಗಟ್ಟಲೆ ಕಾರ್ಯನಿರ್ವಹಿಸಬಲ್ಲ ವಿಶಿಷ್ಟ ಫ್ಯಾನ್ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. 

Written by - Yashaswini V | Last Updated : Apr 28, 2023, 04:35 PM IST
  • ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ರಿಚಾರ್ಜ್ ಮಾಡಬಹುದಾದ ಫ್ಯಾನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.
  • ಇವುಗಳ ಪ್ರಮುಖ ವೈಶಿಷ್ಟ್ಯವೆಂದರೆ ಕರೆಂಟ್ ಇಲ್ಲದಿದ್ದರೂ ಸಹ ಈ ಫ್ಯಾನ್ ಗಂಟೆಗಳ ಕಾಲ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತದೆ.
  • ಅವುಗಳಲ್ಲಿ Fippy MR-2912 ರೀಚಾರ್ಜೆಬಲ್ ಬ್ಯಾಟರಿ ಟೇಬಲ್ ಫ್ಯಾನ್, ಬಜಾಜ್ PYGMY ಮಿನಿ 110MM 10W ಫ್ಯಾನ್‌ಗಳು ಕೂಡ ಸೇರಿವೆ.
ಕರೆಂಟ್ ಇಲ್ಲದಿದ್ರೂ ಸುಮಾರು 15ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತಂತೆ ಈ ಫ್ಯಾನ್ title=

ಬೆಂಗಳೂರು:  ಬೇಸಿಗೆ ಋತುವಿನಲ್ಲಿ ಪವರ್ ಕಟ್ ಸರ್ವೇ ಸಾಮಾನ್ಯವಾದ ಸಮಸ್ಯೆ ಆಗಿದೆ. ವಿದ್ಯುತ್ ಕಡಿತದ ಸಮಯದಲ್ಲಿ ಫ್ಯಾನ್ ಸೇರಿದಂತೆ ಯಾವುದೇ ಎಲೆಕ್ಟ್ರಿಕಲ್ ಉಪಕರಣಗಳನ್ನು ಬಳಸಲು ಅನುಕೂಲವಾಗುವಂತೆ ಪ್ರತಿಯೊಬ್ಬರೂ ಸಹ ಮನೆಯಲ್ಲಿ ಇನ್ವರ್ಟರ್ ಅಳವಡಿಸಿರುವುದಿಲ್ಲ. ಇದರಿಂದಾಗಿ ಎಷ್ಟೋ ಸಂದರ್ಭಗಳಲ್ಲಿ ಕರೆಂಟ್ ಇಲ್ಲದೆಯೇ ಬಿಸಿಲಿನ ಬೇಗೆಯಲ್ಲಿ ಗಂಟೆಗಟ್ಟಲೆ ಕಾಲ ಕಳೆಯಬೇಕಾಗುತ್ತದೆ. ಇನ್ನು ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ವಿದ್ಯುತ್ ಇಲ್ಲದೆ ಗಂಟೆಗಳ ಕಾಲ ಓಡುವ ಅಂತಹ ಫ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ. 

ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ರಿಚಾರ್ಜ್ ಮಾಡಬಹುದಾದ ಫ್ಯಾನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳ ಪ್ರಮುಖ ವೈಶಿಷ್ಟ್ಯವೆಂದರೆ ಕರೆಂಟ್ ಇಲ್ಲದಿದ್ದರೂ ಸಹ ಈ ಫ್ಯಾನ್ ಗಂಟೆಗಳ ಕಾಲ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತದೆ. ಅವುಗಳಲ್ಲಿ Fippy MR-2912 ರೀಚಾರ್ಜೆಬಲ್  ಬ್ಯಾಟರಿ  ಟೇಬಲ್ ಫ್ಯಾನ್, ಬಜಾಜ್ PYGMY ಮಿನಿ 110MM 10W ಫ್ಯಾನ್‌ಗಳು ಕೂಡ ಸೇರಿವೆ. 

ಇದನ್ನೂ ಓದಿ- ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಐಫೋನ್, ಏರ್‌ಪಾಡ್‌ ಆರ್ಡರ್ ಮಾಡಿದ್ದ ವ್ಯಕ್ತಿಗೆ ಡೆಲಿವರಿ ಆಗಿದ್ದೇನು ಗೊತ್ತಾ?

ಫಿಪ್ಪಿ MR-2912 ರೀಚಾರ್ಜೆಬಲ್  ಬ್ಯಾಟರಿ ಟೇಬಲ್ ಫ್ಯಾನ್ ಮೂರು ಬ್ಲೇಡ್‌ಗಳೊಂದಿಗೆ ಲಭ್ಯವಾಗಲಿದೆ. ಇದನ್ನು ಗೋಡೆಯ ಮೇಲೆ ಸುಲಭವಾಗಿ ಫಿಟ್ ಮಾಡಬಹುದಾಗಿದೆ. ಅಗತ್ಯವಿದ್ದರೆ ಮೇಜಿನ ಮೇಲೆ ಇಟ್ಟು ಕೂಡ ಇದನ್ನು ಬಳಸಬಹುದಾಗಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಇದನ್ನು ಮನೆಯ ಯಾವುದೇ ಭಾಗದಲ್ಲಿ ಸುಲಭವಾಗಿ ಅಳವಡಿಸಬಹುದು ಎಂಬುದು ಇದರ ಮತ್ತೊಂದು ವಿಶೇಷತೆ ಆಗಿದೆ. 

ಫಿಪ್ಪಿ MR-2912 ರೀಚಾರ್ಜೆಬಲ್  ಬ್ಯಾಟರಿ ಟೇಬಲ್ ಫ್ಯಾನ್ ಯುಎಸ್‌ಬಿ ಮತ್ತು ಎಸಿ ಡಿಸಿ ವಿಧಾನಗಳಲ್ಲಿ ಕನೆಕ್ಷನ್ ಹೊಂದಿದೆ ಈ  ರೀಚಾರ್ಜೆಬಲ್  ಬ್ಯಾಟರಿ ಟೇಬಲ್ ಫ್ಯಾನ್ ಒಮ್ಮೆ ಫುಲ್  ಚಾರ್ಜ್‌ನಲ್ಲಿ ಫುಲ್ ಸ್ಪೀಡ್ ನಲ್ಲಿ 3.5 ಗಂಟೆಗಳವರೆಗೆ ಕಾರ್ಯನಿರ್ವಹಿಸಿದರೆ, ಮಧ್ಯಮ ಸ್ಪೀಡ್ ನಲ್ಲಿ 5.5 ಗಂಟೆಗಳವರೆಗೆ ಮತ್ತು ಕಡಿಮೆ ಸ್ಪೀಡ್ ನಲ್ಲಿ ಸುಮಾರು 9 ಗಂಟೆಗಳವರೆಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದುಡ್ ಕಂಪನಿ ಹೇಳಿಕೊಂಡಿದೆ. 

ಇದನ್ನೂ ಓದಿ- Solar Fan: ಈ ಬಿರು ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿರಿಸಲು ಬಂದಿದೆ ಸೋಲಾರ್ ಫ್ಯಾನ್, ಬೆಲೆ ಕೂಡ ಕಡಿಮೆ

ಫಿಪ್ಪಿ MR-2912 ರೀಚಾರ್ಜೆಬಲ್  ಬ್ಯಾಟರಿ ಟೇಬಲ್ ಫ್ಯಾನ್ ಬೆಲೆ: 
ಫಿಪ್ಪಿ MR-2912 ರೀಚಾರ್ಜೆಬಲ್  ಬ್ಯಾಟರಿ ಟೇಬಲ್ ಫ್ಯಾನ್ ಅನ್ನು ಅಮೆಜಾನ್‌ನಿಂದ ಕೇವಲ 3,299 ರೂ.ಗಳಿಗೆ ಖರೀದಿಸಬಹುದಾಗಿದೆ. 

ಬಜಾಜ್ PYGMY ಮಿನಿ 110MM 10W ಫ್ಯಾನ್ ಬೆಲೆ, ವೈಶಿಷ್ಟ್ಯಗಳು: 
ಬಜಾಜ್ PYGMY ಮಿನಿ 110MM 10W ಫ್ಯಾನ್ ಬಜೆಟ್ ಸ್ನೇಹಿ ಫ್ಯಾನ್ ಆಗಿದೆ. ಅದ್ಭುತ ವಿನ್ಯಾಸದೊಂದಿಗೆ ಲಭ್ಯವಿರುವ ಈ ಫ್ಯಾನ್ ಯುಎಸ್‌ಬಿ ಚಾರ್ಜಿಂಗ್‌ನೊಂದಿಗೆ ಲಭ್ಯವಾಗಲಿದೆ. Li-Ion ಬ್ಯಾಟರಿಯಿಂದ ಚಾಲಿತವಾಗುವ ಈ ಫ್ಯಾನ್ ಫುಲ್ ಚಾರ್ಜ್ ಸುಮಾರು ನಾಲ್ಕು ಗಂಟೆಗಳವರೆಗೆ ಕೆಲಸ ಮಾಡಬಲ್ಲದು ಎಂದು ತಿಳಿದುಬಂದಿದೆ. ಕಾಂಪ್ಯಾಕ್ಟ್ ಗಾತ್ರದಲ್ಲಿ ಲಭ್ಯವಿರುವ ಈ ಫ್ಯಾನ್ ಅನ್ನು ಎಲ್ಲಿಯಾದರೂ ಸುಲಭವಾಗಿ ಅಳವಡಿಸಬಹುದಾಗಿದೆ. ಈ ಫ್ಯಾನ್ ಅನ್ನು ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಿಂದ 1,170 ರೂಪಾಯಿಗಳಿಗೆ ನಿಮ್ಮದಾಗಿಸಬಹುದು. 

ಇದನ್ನೂ ಓದಿ- Reduce Electricity Bill Tips: ಈ ಟಿಪ್ಸ್ ಬಳಸಿದರೆ ದಿನವಿಡೀ ಎಸಿ ಬಳಸಿದರೂ ಏರುವುದಿಲ್ಲ ಕರೆಂಟ್ ಬಿಲ್ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News