Tata Nano EV: ಟಾಟಾ ಮೋಟಾರ್ಸ್ ಮತ್ತೊಮ್ಮೆ ಕೈಗೆಟುಕುವ ಬೆಲೆಯಲ್ಲಿ ಮಧ್ಯಮ ವರ್ಗದ ಕಾರನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಇದು ರತನ್ ಟಾಟಾ ಅವರ ಕನಸಿನ ಕಾರ್ ಆಗಿದ್ದು ಈ ಕಾರು ಪೆಟ್ರೋಲ್-ಡೀಸೆಲ್ ಬದಲಿಗೆ ವಿದ್ಯುತ್ನಿಂದ ಚಾಲನೆಗೊಳ್ಳಲಿದೆ. ಇದಕ್ಕೆ ಟಾಟಾ ನ್ಯಾನೋ ಇವಿ ಎಂದು ಹೆಸರಿಡಲಾಗಿದೆ.
ಹೌದು, ಭಾರತೀಯ ಮಾರುಕಟ್ಟೆಯಲ್ಲಿ (Indian Market) ತನ್ನದೇ ಆದ ಛಾಪು ಮೂಡಿಸಿದ್ದ ಅತ್ಯಂತ ಜನಪ್ರಿಯ ಟಾಟಾ ನ್ಯಾನೋ (Tata Nano) ಕಾರ್ ಈಗ ಮತ್ತೊಮ್ಮೆ ಹೊಸ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಟಾಟಾ ಮೋಟಾರ್ಸ್ ನ್ಯಾನೋ ಕಾರನ್ನು ಹೊಸ ಎಲೆಕ್ಟ್ರಿಕ್ ಕಾರ್ (Electric Car) ಆಗಿ ಮತ್ತೆ ಲಾಂಚ್ ಮಾಡುತ್ತಿದೆ. 2024ರ ಅಂತ್ಯದ ವೇಳೆಗೆ ಟಾಟಾ ನ್ಯಾನೋ ಇವಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದ್ದು, ಈ ಕಾರ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಟಾಟಾ ನ್ಯಾನೋ EV (Tata Nano EV):
ರತನ್ ಟಾಟಾ (Ratan Tata) ಅವರ ಕನಸಿನ ಕಾರು ಹಾಗೂ ಮಧ್ಯಮ ವರ್ಗದ ಜನರೂ ಕೂಡ ಕೊಳ್ಳಬಹುದಾದ ಟಾಟಾ ನ್ಯಾನೋ ಕಾರು ಈ ಬಾರಿ ಟಾಟಾ ಮೋಟಾರ್ಸ್ ಹೊಸ ಎಲೆಕ್ಟ್ರಿಕ್ ಕಾರ್ (Tata Motors new electric car) ಆಗಿ ಮಾರುಕಟ್ಟೆಗೆ ಪ್ರವೇಶಿಸಲಿದೆ. ಇದು ಟಾಟಾ ನ್ಯಾನೋದ ಎಲೆಕ್ಟ್ರಿಕ್ ಆವೃತ್ತಿಯಾಗಿದೆ. ಅಷ್ಟೇ ಅಲ್ಲ, ಟಾಟಾ ನ್ಯಾನೋ ಇವಿ ಭಾರತದ ಅತ್ಯಂತ ಅಗ್ಗದ ಮತ್ತು ಉತ್ತಮ ಕಾರು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ- Google Map Voice: ಗೂಗಲ್ ಮ್ಯಾಪ್'ನಲ್ಲಿ ದಾರಿ ಸೂಚಿಸುವ ಮಹಿಳೆಯ ಧ್ವನಿ ಯಾರದ್ದು ಗೊತ್ತಾ?
ಟಾಟಾ ನ್ಯಾನೋ EV ವಿನ್ಯಾಸ (Tata Nano EV Design):
ರತನ್ ಟಾಟಾ ಅವರ ಕನಸಿನ ಕಾರು (Ratan Tata Dream Car) ಟಾಟಾ ನ್ಯಾನೋ EVಎಲೆಕ್ಟ್ರಿಕ್ ಕಾರುಗಳ ಜಗತ್ತನ್ನು ಬದಲಾಯಿಸುತ್ತದೆ ಎಂತಲೇ ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಟಾಟಾ ನ್ಯಾನೋ ಇವಿ ವಿನ್ಯಾಸವೂ ಕೂಡ ಅದ್ಭುತವಾಗಿದೆ. ಟಾಟಾದ ನ್ಯಾನೋ ಇವಿ ಕಾಂಪ್ಯಾಕ್ಟ್ ಕಾರು. ಇದರ ಉದ್ದ 3,164mm, ಅಗಲ 1,750mm, ವೀಲ್ ಬೇಸ್ 2,230mm ಮತ್ತು ಗ್ರೌಂಡ್ ಕ್ಲಿಯರೆನ್ಸ್ 180mm. ಈ ಕಾರು 4 ಆಸನಗಳನ್ನು ಹೊಂದಿದೆ ಅಂದರೆ ಈ ಕಾರಿನಲ್ಲಿ ನಾಲ್ಕು ಜನರು ಸುಲಭವಾಗಿ ಪ್ರಯಾಣಿಸಬಹುದು.
ಟಾಟಾ ನ್ಯಾನೋ EV ಬ್ಯಾಟರಿ ಮತ್ತು ಶ್ರೇಣಿ (Tata Nano EV Battery and Range):
ಟಾಟಾ ನ್ಯಾನೋ ಇವಿ 17 kWh ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತದೆ. ಒಂದು ಪೂರ್ಣ ಚಾರ್ಜ್ ಮಾಡಿದರೆ ಸುಮಾರು 312 ಕಿಲೋಮೀಟರ್ ಪ್ರಯಾಣಿಸಬಹುದು ಎಂದು ವರದಿಯಾಗಿದೆ. ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರು ಈ ಕಾರ್ 40 kW ವಿದ್ಯುತ್ ಮೋಟರ್ ಹೊಂದಿದೆ.
ಇದನ್ನೂ ಓದಿ- ಕಾರಿನ ಈ LED ಇಂಡಿಕೇಟರ್ ಆನ್ ಆದರೆ ತಕ್ಷಣ ಅಲರ್ಟ್ ಆಗಿ !ಅನಾಹುತದ ಮುನ್ಸೂಚನೆ ಅದು !
ಟಾಟಾ ನ್ಯಾನೋ EV ವೈಶಿಷ್ಟ್ಯಗಳು (Tata Nano EV Features):
ಟಾಟಾ ಮೋಟಾರ್ಸ್ ತನ್ನ ನ್ಯಾನೋ EV ಯಲ್ಲಿ 7-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಬ್ಲೂಟೂತ್ ಸಂಪರ್ಕ, ಇಂಟರ್ನೆಟ್ ಸಂಪರ್ಕ, ಶಕ್ತಿಯುತ 6-ಸ್ಪೀಕರ್ ಸೌಂಡ್ ಸಿಸ್ಟಮ್, ಪವರ್ ಸ್ಟೀರಿಂಗ್, ಪವರ್ ವಿಂಡೋಸ್, ಇಬಿಡಿಯೊಂದಿಗೆ ಆಂಟಿ-ಲಾಕ್ ಬ್ರೇಕ್ ಸಿಸ್ಟಮ್ ಅನ್ನು ಹೊಂದಿರುತ್ತದೆ. ಇದು 10 ಸೆಕೆಂಡುಗಳಲ್ಲಿ 0 ರಿಂದ 100 kmph ವೇಗವನ್ನು ಪಡೆಯುತ್ತದೆ. ಎಸಿ, ಪವರ್ ಸ್ಟೀರಿಂಗ್, ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಮುಂತಾದ ಹೊಸ ಫೀಚರ್ ಗಳೂ ಇವೆ.
ಟಾಟಾ ನ್ಯಾನೋ ಇವಿ ಬೆಲೆ (Tata Nano EV Price):
ಟಾಟಾ ಮೋಟಾರ್ಸ್ ಟಾಟಾ ನ್ಯಾನೋವನ್ನು ರತನ್ ಟಾಟಾ ಅವರ ಕನಸಿನ ಕಾರ್ ಆಗಿ ಪರಿಚಯಿಸುತ್ತಿದ್ದು ವಿಶೇಷವಾಗಿ ಮಧ್ಯಮವರ್ಗದ ಜನರೂ ಕೂಡ ಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್(ಟಾಟಾ ನ್ಯಾನೋ 2024 ಇವಿ) ಬೆಲೆಯು ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯಲ್ಲಿ ಇತರ ಕಂಪನಿಗಳ ಕಾರುಗಳಿಗಿಂತ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಿನ ಹೊಸ ಇವಿ ಆವೃತ್ತಿಯ ಬೆಲೆ 3.5 ಲಕ್ಷದ ಮೂಲ ರೂಪಾಂತರದಿಂದ 5 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ ಎಂದು ಅಂದಾಜಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.