Oppo A79 5G Launch: ಬಜೆಟ್ ಬೆಲೆಗೆ 50MP ಕ್ಯಾಮೆರಾ ಹೊಂದಿರುವ ಅದ್ಭುತ ಸ್ಮಾರ್ಟ್‍ಫೋನ್‍!

Oppo A79 5G Smartphone: ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಕಾರ್ಡ್‌ಗಳು, ಕೋಟಕ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, AU ಫೈನಾನ್ಸ್ ಬ್ಯಾಂಕ್ ಮತ್ತು One Cardನಲ್ಲಿ 9 ತಿಂಗಳವರೆಗೆ ನೋ-ಕಾಸ್ಟ್ EMI ಆಯ್ಕೆಗಳ ಪ್ರಯೋಜನವೂ ಇದೆ.

Written by - Puttaraj K Alur | Last Updated : Oct 29, 2023, 01:10 PM IST
  • Oppo ಇಂಡಿಯಾ ತನ್ನ ಹೊಸ Oppo A79 5G ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಿದೆ
  • ಕೇವಲ 19,999 ರೂ.ಗೆ ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‍ಫೋನ್
  • ಗ್ರಾಹಕರಿಗೆ 4,000 ರೂ. ಕ್ಯಾಶ್‌ಬ್ಯಾಕ್ ಜೊತೆಗೆ ಹೆಚ್ಚುವರಿ Credit Cards ಆಫರ್ ಲಭ್ಯವಿದೆ
Oppo A79 5G Launch: ಬಜೆಟ್ ಬೆಲೆಗೆ 50MP ಕ್ಯಾಮೆರಾ ಹೊಂದಿರುವ ಅದ್ಭುತ ಸ್ಮಾರ್ಟ್‍ಫೋನ್‍! title=
Oppo A79 5G

ನವದೆಹಲಿ: Oppo ಇಂಡಿಯಾ ಇತ್ತೀಚೆಗೆ ತನ್ನ ಹೊಸ ಸ್ಮಾರ್ಟ್‍ಫೋನ್‍ A79 5Gನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. Oppoದ ಈ ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್, ಬಾಳಿಕೆ ಬರುವ IP54 ರೇಟಿಂಗ್, 50MP ಟ್ರಿಪಲ್-ಕ್ಯಾಮೆರಾ ಸೆಟಪ್, MediaTek 6020 SoC, 8GB RAM ಮತ್ತು ColorOS 13 ಜೊತೆಗೆ Android 13ನಲ್ಲಿ 6.72-ಇಂಚಿನ FHD+ ಡಿಸ್‌ಪ್ಲೇಯನ್ನು ನೀಡುತ್ತದೆ.

Oppo A79 5G ಬೆಲೆ: ಈ ಹೊಸ ಸ್ಮಾರ್ಟ್‍ಫೋನ್‍ ಬೆಲೆ 19,999 ರೂ. ಇದೆ. ಅಕ್ಟೋಬರ್ 28ರಿಂದ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. Oppo ಸ್ಟೋರ್, ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ವಿವಿಧ ಚಿಲ್ಲರೆ ಶಾಫ್‍ಗಳಲ್ಲಿಯೂ ನೀವು ಇದನ್ನು ಖರೀದಿಸಬಹುದು. Oppo ದೀಪಾವಳಿ ಹಬ್ಬಕ್ಕೆ ನಿರ್ದಿಷ್ಟ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ.

ಗ್ರಾಹಕರಿಗೆ 4,000 ರೂ. ಕ್ಯಾಶ್‌ಬ್ಯಾಕ್ ಪಡೆಯುವ ಅವಕಾವಿದೆ. ಇದಲ್ಲದೆ ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಕಾರ್ಡ್‌ಗಳು, ಕೋಟಕ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, AU ಫೈನಾನ್ಸ್ ಬ್ಯಾಂಕ್ ಮತ್ತು One Cardನಲ್ಲಿ 9 ತಿಂಗಳವರೆಗೆ ನೋ-ಕಾಸ್ಟ್ EMI ಆಯ್ಕೆಗಳ ಪ್ರಯೋಜನವೂ ಇದೆ. ಈ ಕೊಡುಗೆಗಳನ್ನು ಮುಖ್ಯ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು Oppo ಅಂಗಡಿಗಳಲ್ಲಿ ನೀವು ಪಡೆದುಕೊಳ್ಳಬಹುದು.

ಇದನ್ನೂ ಓದಿ: India's Top Tea Brand: ಭಾರತದ ಪ್ರಸಿದ್ಧ ಟೀ ಬ್ರ್ಯಾಂಡ್‌ಗಳ ಬಗ್ಗೆ ತಿಳಿಯಿರಿ

Oppo A79 5G ವಿಶೇಷಣಗಳು: ಈ ಸಾಧನವು ಪಂಚ್-ಹೋಲ್ ಕ್ಯಾಮೆರಾದೊಂದಿಗೆ 6.72-ಇಂಚಿನ FHD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯೊಂದಿಗೆ 90Hz ರಿಫ್ರೆಶ್ ರೇಟ್ ನೀಡಲಾಗುತ್ತಿದೆ. Oppo A79 5Gನ್ನು ಗ್ಲೋಯಿಂಗ್ ಗ್ರೀನ್ ಮತ್ತು ಮಿಸ್ಟರಿ ಬ್ಲ್ಯಾಕ್ ಬಣ್ಣಗಳ ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. 7.99 mmನ ಸ್ಲಿಮ್ ಪ್ರೊಫೈಲ್‌ನೊಂದಿಗೆ ಈ ಫೋನ್ ಕೇವಲ 193 ಗ್ರಾಂ ತೂಗುತ್ತದೆ.

ಇದರ ಸ್ಥಿರತೆಯನ್ನು ಹೆಚ್ಚಿಸಲು ಈ IP54-ರೇಟೆಡ್ ಸ್ಮಾರ್ಟ್‌ಫೋನ್ 320ಕ್ಕೂ ಹೆಚ್ಚು ಗುಣಮಟ್ಟದ ಪರೀಕ್ಷೆಗಳು ಮತ್ತು 130 ತೀವ್ರ ವಿಶ್ವಾಸಾರ್ಹತೆಯ ಮೌಲ್ಯಮಾಪನಗಳನ್ನು ಒಳಗೊಂಡಂತೆ ಕಠಿಣ ಪರೀಕ್ಷೆಗೆ ಒಳಗಾಗಿದೆ. Oppo A79 5G ಟ್ರಿಪಲ್-ರಿಯರ್ ಕ್ಯಾಮೆರಾವನ್ನು ಹೊಂದಿದ್ದು, ಇದು 50MP AI ಕ್ಯಾಮೆರಾ, 2MP ಪೋರ್ಟ್ರೇಟ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

A79 5Gನ್ನು ಪವರ್ ಮಾಡುವುದು MediaTek 6020 SoC, ಇದು ಡ್ಯುಯಲ್ 2.2GHz ಆರ್ಮ್ ಕಾರ್ಟೆಕ್ಸ್-A76 ಕಾರ್ಯಕ್ಷಮತೆಯ ಕೋರ್‌ಗಳು ಮತ್ತು 6 2GHz ಆರ್ಮ್ ಕಾರ್ಟೆಕ್ಸ್-A55 ದಕ್ಷತೆಯ ಕೋರ್‌ಗಳನ್ನು ಒಳಗೊಂಡಿದೆ. ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್‌ನಲ್ಲಿ ನಿಮಗೆ ಸಿಗಲಿದೆ. 1TBವರೆಗೆ ಮೈಕ್ರೊ SD ಕಾರ್ಡ್‌ಗಳನ್ನು ಬೆಂಬಲಿಸುವ ಹೆಚ್ಚುವರಿ ಸಾಮರ್ಥ್ಯವನ್ನು ಸಹ ಹೊಂದಿದೆ. ಈ ಸ್ಮಾರ್ಟ್ಫೋನ್ 5000mAh ಬ್ಯಾಟರಿ ಮತ್ತು 33W ಚಾರ್ಜರ್ನಿಂದ ಬೆಂಬಲಿತವಾಗಿದೆ. ಒಟ್ಟಾರೆ ಹೇಳುವುದಾರೆ ಬಜೆಟ್ ಬೆಲೆಗೆ ಈ ಸ್ಮಾರ್ಟ್‍ಫೋನ್ ಉತ್ತಮ ವೈಶಿಷ್ಟ್ಯಗಳನ್ನು ನಿಮಗೆ ನೀಡಲಿದೆ.

ಇದನ್ನೂ ಓದಿ: ಆಧಾರ್ ಕಾರ್ಡ್ ಬಯೋಮೆಟ್ರಿಕ್ ಮಾಹಿತಿಯನ್ನು ಲಾಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ಮಾರ್ಗ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News