OLA Electric Scooter : ಜನರ ಮನಗೆದ್ದ 'OLA ಎಲೆಕ್ಟ್ರಿಕ್ ಸ್ಕೂಟರ್' : ಜುಲೈನಲ್ಲಿ ಮಾರಕಟ್ಟೆಗೆ!

ಓಲಾ ಇದೆ ವರ್ಷದ ಜುಲೈ ವೇಳೆಗೆ 'ಎಲೆಕ್ಟ್ರಿಕ್ ಸ್ಕೂಟರ್' ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ

Last Updated : Apr 22, 2021, 07:27 PM IST
  • ಓಲಾ ಇದೆ ವರ್ಷದ ಜುಲೈ ವೇಳೆಗೆ 'ಎಲೆಕ್ಟ್ರಿಕ್ ಸ್ಕೂಟರ್' ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ
  • ಈ ಸ್ಕೂಟರ್ 'ಹೈಪರ್‌ಚಾರ್ಜರ್ ನೆಟ್‌ವರ್ಕ್'ನಲ್ಲಿ ಕಾರ್ಯನಿರ್ವಹಿಸುತ್ತಿದ್ದು
  • ಮೊದಲ 1 ವರ್ಷದಲ್ಲಿ ಕೇವಲ 20 ಲಕ್ಷ ಸ್ಕೂಟರ್‌ಗಳನ್ನು ತಯಾರಿ
OLA Electric Scooter : ಜನರ ಮನಗೆದ್ದ 'OLA ಎಲೆಕ್ಟ್ರಿಕ್ ಸ್ಕೂಟರ್' : ಜುಲೈನಲ್ಲಿ ಮಾರಕಟ್ಟೆಗೆ! title=

ನವದೆಹಲಿ: ಓಲಾ ಇದೆ ವರ್ಷದ ಜುಲೈ ವೇಳೆಗೆ 'ಎಲೆಕ್ಟ್ರಿಕ್ ಸ್ಕೂಟರ್' ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಈ ಸ್ಕೂಟರ್ 'ಹೈಪರ್‌ಚಾರ್ಜರ್ ನೆಟ್‌ವರ್ಕ್'ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೀಗಾಗಿ ದೇಶದ 400 ನಗರಗಳಲ್ಲಿ ಒಂದು ಲಕ್ಷ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ಕಂಪನಿ ಹೇಳಿದೆ.

1 ವರ್ಷದಲ್ಲಿ 20 ಲಕ್ಷ ಸ್ಕೂಟರ್‌ ತಯಾರಿಸುವ ಗುರಿ : 

ತಮಿಳುನಾಡಿನಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಖಾನೆ(Ola Electric Scooter Company) ಸ್ಥಾಪಿಸಲು ಓಲಾ ಕಳೆದ ವರ್ಷ 2,400 ಕೋಟಿ ರೂ. ಹೂಡಿಕೆ ಮಾಡಿದೆ, ಇದರಿಂದ ಸ್ಥಳೀಯವಾಗಿ 10,000 ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಇದು ವಿಶ್ವದ ಅತಿದೊಡ್ಡ ಸ್ಕೂಟರ್ ಉತ್ಪಾದನಾ ಘಟಕವಾಗಲಿದ್ದು, ವಾರ್ಷಿಕ 2 ಮಿಲಿಯನ್ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ : ಇದು Super AC: ಈ ಏರ್ ಕಂಡಿಷನ್ ಗೆ ಕರೆಂಟ್ ಬೇಕಾಗಿಯೇ ಇಲ್ಲ

ಜುಲೈನಲ್ಲಿ ಸ್ಕೂಟರ್ ಮಾರುಕಟ್ಟೆಗೆ: 

ಓಲಾ ಅಧ್ಯಕ್ಷ ಮತ್ತು ಸಿಇಒ ಭಾವೀಶ್ ಅಗರ್‌ವಾಲ್(Bhavish Agarawal) ಮಾತನಾಡಿ, 'ನಾವು ಜೂನ್ ವೇಳೆಗೆ ಈ ಕಾರ್ಖಾನೆಯನ್ನು ಸ್ಥಾಪಿಸುತ್ತೇವೆ. ಇದೀಗ ಮೊದಲ 1 ವರ್ಷದಲ್ಲಿ ಕೇವಲ 20 ಲಕ್ಷ ಸ್ಕೂಟರ್‌ಗಳನ್ನು ತಯಾರಿಸಲಾಗುವುದು, ಆದರೆ ಮುಂದಿನ 12 ತಿಂಗಳಲ್ಲಿ ನಾವು ಉತ್ಪಾದನೆಯನ್ನು ಹೆಚ್ಚಿಸುತ್ತೇವೆ. ಕಾರ್ಖಾನೆ ಪ್ರಾರಂಭವಾದ 1 ತಿಂಗಳ ನಂತರ ಅಂದರೆ ಜುಲೈನಲ್ಲಿ ಸ್ಕೂಟರ್ ಮಾರಾಟ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : ಲೋನ್ ಹೆಸರಿನಲ್ಲಿ ನಡೆಯುತ್ತಿದೆ ಭಯಾನಕ ಮೋಸ.! ಗ್ರಾಹಕರನ್ನು ಎಚ್ಚರಿಸಿದ ಎಸ್ ಬಿಐ

1 ಲಕ್ಷ ಚಾರ್ಜಿಂಗ್ ಪಾಯಿಂಟ್‌:

ಓಲಾದ ಹೈಪರ್ ಚಾರ್ಜರ್ ನೆಟ್‌ವರ್ಕ್(Ola Hypercharge Network) ವಿಶ್ವದ ಅತ್ಯಂತ ವಿಸ್ತಾರವಾದ ದ್ವಿಚಕ್ರ ವಾಹನ ಚಾರ್ಜಿಂಗ್ ನೆಟ್‌ವರ್ಕ್ ಆಗಲಿದೆ ಎಂದು ಕಂಪನಿ ಹೇಳಿದೆ. ಇದರ ಅಡಿಯಲ್ಲಿ 400 ನಗರಗಳಲ್ಲಿ ಒಂದು ಲಕ್ಷ ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಲಾಗುವುದು. ಮೊದಲ ವರ್ಷದಲ್ಲಿ, ದೇಶದ 100 ನಗರಗಳಲ್ಲಿ 5,000 ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗುವುದು, ಇದು ಕೇವಲ 18 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಸ್ಕೂಟರ್ ಅನ್ನು ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಇದು ದೇಶದಲ್ಲಿ ಚಾರ್ಜಿಂಗ್ ರಚನೆಗಿಂತ ಎರಡು ಪಟ್ಟು ಹೆಚ್ಚಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News